ಅಕಾಲಿಕ ಮಳೆಯ ಹಿನ್ನೆಲೆ, ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ಬಿಸಿಲಿನ ಬೇಗೆ ಆರಂಭವಾಗಿದೆ. ಇನ್ನೂ ಬೆಂಗಳೂರಿನಲ್ಲಿ ಮಾರ್ಚ್‌ನಲ್ಲಿ ಒಂದು ಹನಿಯೂ ಮಳೆಯಾಗಿಲ್ಲ. ಅಲ್ಲದೇ, ಕುಡಿಯುವ ನೀರಿನ ಸಮಸ್ಯೆಯೂ ಆರಂಭವಾಗಿದೆ. ಈ ಮಟಮಟ ಬಿಸಿಲಿನ ಮಧ್ಯೆ ನಿರಂತರ ಸಂಚಾರ ದಟ್ಟಣೆ ನಿವಾರಿಸಲು ಬೆಂಗಳೂರು ಸಂಚಾರ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಸ್ಕೂಟಿ ಮೇಲೆ ಬರುವ ಅಪರಿಚಿತ ವ್ಯಕ್ತಿಯೊಬ್ಬ ನಿತ್ಯ ನೀರಿನ ಬಾಟಲಿ ಕೊಟ್ಟು ಹೋಗುತ್ತಿರುವುದು ವರದಿಯಾಗಿದೆ.
ಹೌದು, ಬಿಸಿಲಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಪೋಲಿಸರಿಗೆ ಸೈಯದ್ ಮುಜೀಬ್ ಎಂಬ 60 ವರ್ಷದ ವ್ಯಕ್ತಿಯೊಬ್ಬರು ನಿತ್ಯ ಕುಡಿಯುವ ನೀರಿನ ಬಾಟಲಿಗಳನ್ನು ನೀಡುತ್ತಾರೆ. ಹೆಬ್ಬಾಳ ಸ್ಟ್ರೆಚ್‌ನಲ್ಲಿ ಟಿಆರ್‌ಎಫ್‌ಸಿ ಪೊಲೀಸರು ಪ್ರೀತಿಯಿಂದ ಇವರನ್ನು ‘ನೀರ್ ಸಾಬ್/ವಾಟರ್ ಮ್ಯಾನ್’ ಎಂದು ಕರೆಯುತ್ತಾರೆ.
ಬೆಂಗಳೂರಿನ ಉತ್ತರ ಭಾಗದ ಡಿಸಿಪಿ(ಸಂಚಾರ) ಐಪಿಎಸ್ ಗೌರಿ ಅವರು ನೀರ್ ಸಾಬ್ ಅವರಿಗೆ ಸನ್ಮಾನ ಮಾಡಿದ್ದಾರೆ. ಅಲ್ಲದೇ, ಅವರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ತಿಳಿಸಿದ್ದಾರೆ.
“ಆಕ್ಟಿವಾ ಓಡಿಸುವ ಇವರ ಹೆಸರು ನನಗೆ ಗೊತ್ತಿಲ್ಲ. ಆದರೆ, ಅವರ ಕೆಲಸ ನನಗೆ ತಿಳಿದಿದೆ. ಕರ್ತವ್ಯದಲ್ಲಿರುವ ಸಂಚಾರ ಪೊಲೀಸ್ ಸಿಬ್ಬಂದಿಗೆ ನೀರು ಕೊಡುವುದು ಇವರ ನಿತ್ಯದ ಕರ್ತವ್ಯ. ನಾನು ಅವರನ್ನು ನಿಜವಾಗಿಯೂ ವಂದಿಸುತ್ತೇನೆ” ಎಂದು ಶ್ರೀ ರಾಮ್ ಬಿಷ್ಣೋಯ್ ಅವರು ಟ್ವೀಟ್ ಮಾಡಿದ್ದರು.
“ಕಳೆದ ಒಂದೂವರೆ ವರ್ಷದಿಂದ ಮುಜೀಬ್ ಅವರು ಸಂಚಾರ ಪೊಲೀಸರಿಗೆ ನೀರು ತಂದು ಕೊಡುತ್ತಿದ್ದಾರೆ. ಹೆಬ್ಬಾಳ ಮೇಲ್ಸೇತುವೆ ಬಳಿ ಜನರು ಯೂ ಟರ್ನ್ ತೆಗೆದುಕೊಳ್ಳುವ ಜಾಗದಲ್ಲಿ ಗ್ಯಾಪ್ ಇದೆ. ವಾಹನ ಬಳಕೆದಾರರಿಂದ ಇಂತಹ ಯೂ ಟರ್ನ್ ತಪ್ಪಿಸಲು ಒಬ್ಬ ಪೊಲೀಸ್ ಯಾವಾಗಲೂ ಅಲ್ಲಿ ಲಭ್ಯವಿರುತ್ತಾರೆ. ಆದರೆ, ಟ್ರಾಫಿಕ್ ಪೊಲೀಸರು ನೀರು ಕುಡಿಯಲು ಹೋದಾಗ ಮಾರಣಾಂತಿಕ ಅಪಘಾತ ಸಂಭವಿಸಿದೆ” ಎಂದು ಬರೆದುಕೊಂಡಿದ್ದಾರೆ.
Yesterday Mr. Mujeeb was felicitated by DCP North Traffic Smt. Sri Gauri IPS in my presence…. Story told by Mr. Mujeeb why he is doing this for one and half years.. 1/3 @CPBlr @BlrCityPolice @DgpKarnataka @alokkumar6994 @Jointcptraffic @blrcitytraffic @DCPTrEastBCP https://t.co/V3RuJ8j9QC pic.twitter.com/OMmCk3DEZP
— Shree ram Bishnoi (@ShreeRA43002214) April 4, 2024
“ಈ ವೇಳೆ, ಮುಜೀಬ್ ಅಪಘಾತದ ಪ್ರತ್ಯಕ್ಷದರ್ಶಿಯಾಗಿದ್ದರು. ಅಂದಿನಿಂದ ಅವರು ಕರ್ತವ್ಯದ ಸ್ಥಳದಲ್ಲಿ ನೀರಿನ ಬಾಟಲಿಯನ್ನು ನೀಡುವ ಮೂಲಕ ಪೊಲೀಸರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಇದರಿಂದ ಅಂತಹ ಅಪಘಾತಗಳನ್ನು ತಪ್ಪಿಸಬಹುದು” ಎಂದು ಹೇಳಿದ್ದಾರೆ.
ಸದ್ಯ ಅವರು ನೀರಿನ ಬಾಟಲಿಗಳನ್ನು ನೀಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಈ ಸುದ್ದಿ ಓದಿದ್ದೀರಾ? ರಾಜ್ಯದ ಉತ್ತರ ಒಳನಾಡು ಸೇರಿದಂತೆ ಹಲವೆಡೆ ಮಳೆ : 5 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’
ನೀರಿನ ಬಿಕ್ಕಟ್ಟಿನಿಂದ ಬಳಲುತ್ತಿರುವ ಬೆಂಗಳೂರು, ಕಳೆದ ಐದು ವರ್ಷಗಳಲ್ಲಿ ಮಾರ್ಚ್‌ನಲ್ಲಿ ಅತ್ಯಂತ ಗರಿಷ್ಠ ತಾಪಮಾನ ಅನುಭವಿಸಿದೆ. ಶುಕ್ರವಾರ 36.4 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಈ ತಾಪಮಾನವು ಮಾರ್ಚ್‌ನಲ್ಲಿ ಕಳೆದ ದಶಕದಲ್ಲಿ ನಗರದಲ್ಲಿ ಅನುಭವಿಸಿದ ಮೂರನೇ ಅತಿ ಹೆಚ್ಚು ತಾಪಮಾನವಾಗಿದೆ.
“ಎಲ್ ನಿನೋ ಪ್ರಭಾವದಿಂದಾಗಿ ಮಾರ್ಚ್‌ನಲ್ಲಿ ಬೆಂಗಳೂರು ಕನಿಷ್ಠ ಮಳೆಯನ್ನು ಪಡೆದಿದೆ. ಇದರ ಪರಿಣಾಮವಾಗಿ ವಿಶೇಷವಾಗಿ ಶುಷ್ಕ ವಾತಾವರಣವಿದೆ. ಶನಿವಾರ ತಾಪಮಾನವು 37 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಇದು ಕಳೆದ ಐದು ವರ್ಷಗಳಲ್ಲಿ ಮಾರ್ಚ್‌ನಲ್ಲಿ ದಾಖಲಾದ ಗರಿಷ್ಠ ತಾಪಮಾನವಾಗಿದೆ” ಎಂದು ಹವಾಮಾನ ಇಲಾಖೆ ತಜ್ಞ ಎ ಪ್ರಸಾದ್ ಅವರು ಹೇಳಿದ್ದಾರೆ.