ಬೆಂಗಳೂರು | ಫೆ.24 ರಂದು ಐಐಎಸ್‌ಸಿಯಲ್ಲಿ ಓಪನ್ ಡೇ ಕಾರ್ಯಕ್ರಮ; ಸಂಚಾರ ಮಾರ್ಗ ಬದಲಾವಣೆ

Date:

Advertisements

ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಇಂಡಿಯನ್ ಇನ್ಸ್‌ಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಯಲ್ಲಿ ಫೆ.24 ರಂದು ಓಪನ್ ಡೇ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆ, ಬೆಳಗ್ಗೆ 9ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಪ್ರವೇಶದ ಸಂಬಂಧ ಮುಕ್ತ ಅವಕಾಶವನ್ನು ಕಲ್ಪಿಸಿ, ಆಯೋಜಿಸಿದಾಗಿದೆ.

ಈ ಕಾರ್ಯಕ್ರಮಕ್ಕೆ ಸುಮಾರು 100 ರಿಂದ 150 ಬಸ್‌ಗಳು, 250 ರಿಂದ 350 ಕಾರುಗಳು ಹಾಗೂ ದ್ವಿ ಚಕ್ರ ವಾಹನಗಳಲ್ಲಿ ಸುಮಾರು 60 ರಿಂದ 80 ಸಾವಿರ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸುವ ಸಾಧ್ಯತೆ ಇದ್ದು, ಈ ಕಾರ್ಯಕ್ರಮಕ್ಕೆ ಸಂಚಾರ ಬಂದೋಬಸ್ತ್ ವ್ಯವಸ್ಥೆ ಮಾಡಿ ಬೆಂಗಳೂರು ಸಂಚಾರ ಪೊಲೀಸ್ ಮಾಹಿತಿ ನೀಡಿದೆ.

ಶಾಲಾ ಬಸ್ / ನಾಲ್ಕು ಚಕ್ರ ವಾಹನಗಳು

Advertisements

ಪ್ರಯಾಣಿಕರು ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನ ಎದುರು ತೆರೆದ ಮೈದಾನದ ಮುಂಭಾಗದಲ್ಲಿ ನಿಲುಗಡೆ ಮಾಡಿ ನಡಿಗೆಯ ಮೂಲಕ ಸರ್ಕಲ್ ಮಾರಮ್ಮ ಜಂಕ್ಷನ್‌ಗೆ ಬಂದು ಸಬ್ ವೇ ಸೊಸೈಟಿ ಫಾರ್ ಇನೋವೇಶನ್ ಅಂಡ್ ಡೆವಲಪ್ ಮೆಂಟ್ (ಎಸ್‌ಐಡಿ) ಮೂಲಕ ಐಐಎಸ್‌ಸಿ ಕ್ಯಾಂಪಸ್‌ಗೆ ತಲುಪುವುದು.

ದ್ವಿಚಕ್ರ ವಾಹನಗಳ ಚಾಲಕರು

  • ಐಐಎಸ್‌ಸಿ ಜಮ್‌ಖಾನಾ ಮೈದಾನದ ಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಿ, ಕ್ಯಾಂಪಸ್‌ಗೆ ತಲುಪುವುದು.
  • ಕಾರ್ಯಕ್ರಮ ಹೊರತುಪಡಿಸಿ ಇತರೆ ಸ್ಥಳಗಳಿಗೆ ಹೋಗುವ ರಸ್ತೆ ಬಳಕೆದಾರರು ಬಳಸಬೇಕಾದ ಬದಲಿ ಮಾರ್ಗ
  • ಸರ್.ಸಿ.ವಿ.ರಾಮನ್ ರಸ್ತೆ : ಮೇಕ್ರಿ ಸರ್ಕಲ್‌ನಿಂದ ಬಿ.ಹೆಚ್.ಇ.ಎಲ್ ಸರ್ಕಲ್ ವರೆಗೆ
  • ನ್ಯೂ.ಬಿ.ಇ.ಎಲ್ ರಸ್ತೆ : ಸದಾಶಿವನಗರ ಪಿ.ಎಸ್ ಜಂಕ್ಷನ್‌ನಿಂದ ರೈಲ್ವೆ ಬ್ರಿಡ್ಜ್ ವರೆಗೆ
  • ಟಿ.ಚೌಡಯ್ಯ ರಸ್ತೆ : ಸಿ.ಎನ್.ಆರ್.ರಾವ್ ಅಂಡರ್‌ಪಾಸ್‌ನಿಂದ ಕಾವೇರಿ ಜಂಕ್ಷನ್‌ವರೆಗೆ
  • ಮಾರ್ಗೋಸಾ ರಸ್ತೆ : ಮಾರಮ್ಮ ಸರ್ಕಲ್‌ನಿಂದ ಮಲ್ಲೇಶ್ವರಂ 18ನೇ ಕ್ರಾಸ್ ವರೆಗೆ

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬೆಂಕಿ ಅವಘಡ: ಸುಟ್ಟು ಕರಕಲಾದ 40ಕ್ಕೂ ಹೆಚ್ಚು ವಾಹನಗಳು

ವಾಹನ ನಿಲುಗಡೆ ನಿಷೇಧ

  • ಸರ್.ಸಿ.ವಿ.ರಾಮನ್ ರಸ್ತೆ : ಮೇಕ್ರಿ ಸರ್ಕಲ್‌ನಿಂದ ಬಿ.ಹೆಚ್.ಇ.ಎಲ್ ಸರ್ಕಲ್ ವರೆಗೆ ಎರಡು ಕಡೆಯ ರಸ್ತೆಗಳು
  • ನ್ಯೂ.ಬಿ.ಇ.ಎಲ್ ರಸ್ತೆ: ಸದಾಶಿವನಗರ ಪಿ.ಎಸ್ ಜಂಕ್ಷನ್‌ನಿಂದ ರೈಲ್ವೆ ಬ್ರಿಡ್ಜ್ ವರೆಗೆ
  • ಟಿ.ಚೌಡಯ್ಯ ರಸ್ತೆ: ಸಿ.ಎನ್.ಆರ್.ರಾವ್ ಅಂಡರ್‌ಪಾಸ್‌ನಿಂದ ಕಾವೇರಿ ಜಂಕ್ಷನ್ ವರೆಗೆ ಎರಡು ಕಡೆಯ ರಸ್ತೆಗಳು
  • ಮಾರ್ಗೋಸಾ ರಸ್ತೆ : ಮಾರಮ್ಮ ಸರ್ಕಲ್‌ನಿಂದ ಮಲ್ಲೇಶ್ವರಂ 18ನೇ ಕ್ರಾಸ್ ವರೆಗಿನ ರಸ್ತೆ.
  • ಭಾರೀ ಸರಕು ಸಾಗಾಣಿಕಾ ವಾಹನಗಳ ಸಂಚಾರವನ್ನು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಗರದೊಳಗೆ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಮಾರ್ಗ ಬದಲಾವಣೆ ಮಾಡಲಾಗುವ ಸ್ಥಳಗಳು

  • ಯಶವಂತಪುರ ಸರ್ಕಲ್ : ಸುಬ್ರಮಣ್ಯನಗರ ಹಾಗೂ ರಾಜಕುಮಾರ್ ರಸ್ತೆ ಕಡೆಗೆ
  • ಮೇಕಿಸರ್ಕಲ್ : ಮೇಕ್ರಿಸರ್ಕಲ್ ನಿಂದ ಸದಾಶಿವನಗರ ಪಿ.ಎಸ್. ಜಂಕ್ಷನ್ ಕಡೆಗೆ ಬರುವ ವಾಹನಗಳು ಹೆಬ್ಬಾಳದ ಕಡೆಗೆ
  • ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಮಾಡಲಾಗಿರುವ ಸಂಚಾರ ಮಾರ್ಪಾಡುಗಳಿಗೆ ಸಾರ್ವಜನಿಕರು ಸಹಕರಿಸಲು ಕೋರಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X