ಬೆಂಗಳೂರು | ತೀರದ ನೀರಿನ ಸಮಸ್ಯೆ; ಅಪಾರ್ಟ್‌ಮೆಂಟ್‌ ಬಾಡಿಗೆ ಕಡಿತಗೊಳಿಸಲು ಬಾಡಿಗೆದಾರರ ಒತ್ತಾಯ

Date:

Advertisements

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಗರದಲ್ಲಿರುವ ಅಪಾರ್ಟ್‌ಮೆಂಟ್‌ ಮಾಲೀಕರಿಗೆ ನೀರಿನ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಕಾವೇರಿ ನೀರಿನ ಸಂಪರ್ಕ ಇರದೇ ಬರೀ ಬೋರ್‌ವೆಲ್‌ ನಂಬಿದ ಅಪಾರ್ಟ್‌ಮೆಂಟ್‌ಗಳ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಸದ್ಯ ಈ ಅಪಾರ್ಟ್‌ಮೆಂಟ್​​ಗಳಲ್ಲಿ ಖಾಲಿ ಇರುವ ಫ್ಲ್ಯಾಟ್​ಗಳಿಗೆ ಬಾಡಿಗೆಗೆ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ. ಇರುವ ಬಾಡಿಗೆದಾರರು ಬಾಡಿಗೆ ಕಡಿತಗೊಳಿಸಲು ಕೇಳುತ್ತಿದ್ದಾರೆ.

ಅಪಾರ್ಟ್‌ಮೆಂಟ್​​​ಗಳಲ್ಲಿ ನೀರಿನ ಸಮಸ್ಯೆ ತೀವ್ರವಾದ ಕಾರಣ ಜನರು ಅಪಾರ್ಟ್‌ಮೆಂಟ್‌ ಬಿಟ್ಟು ಮನೆಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ವಿಶೇಷವಾಗಿ ಕಾವೇರಿ ನೀರಿನ ಸಂಪರ್ಕವಿಲ್ಲದ ಅಪಾರ್ಟ್‌ಮೆಂಟ್ ಮಾಲೀಕರು ನೀರಿನ ಸಮಸ್ಯೆಯಿಂದಾಗಿ ತಮ್ಮ ಖಾಲಿ ಫ್ಲಾಟ್‌ಗಳನ್ನು ಬಾಡಿಗೆಗೆ ಕೊಡಲು ಜನರನ್ನು ಹುಡುಕಲು ಕಷ್ಟಪಡುತ್ತಿದ್ದಾರೆ.

“ನಗರದಲ್ಲಿನ ಹಲವು ಅಪಾರ್ಟ್‌ಮೆಂಟ್‌ಗಳು ಜನರಿಲ್ಲದೇ ಖಾಲಿಯಾಗಿವೆ. ಕಳೆದ ತಿಂಗಳಿನಿಂದ ಬಾಡಿಗೆಗೆ ಫ್ಲಾಟ್‌ಗಳನ್ನು ಹುಡುಕುವ ಜನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ” ಎಂದು ರಿಯಲ್ ಎಸ್ಟೇಟ್ ಏಜೆಂಟ್‌ಗಳು ಹೇಳುತ್ತಾರೆ.

Advertisements

“ಜನರು ಈಗ ಅಪಾರ್ಟ್‌ಮೆಂಟ್‌ಗಳಿಗಿಂತ ಪ್ರತ್ಯೇಕ ಮನೆಗಳನ್ನು ಹುಡುಕುತ್ತಿದ್ದಾರೆ. ಏಕೆಂದರೆ, ನೀರು ಮೂಲಭೂತ ಅವಶ್ಯಕತೆಯಾಗಿದೆ. ಪರಿಸ್ಥಿತಿ ಅಷ್ಟು ಹದಗೆಟ್ಟಿಲ್ಲ ಎಂದು ನಾವು ಗ್ರಾಹಕರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರೂ, ಅವರು ಪರಿಸ್ಥಿತಿಯನ್ನು ಎದುರಿಸಲು ಸಿದ್ದರಿಲ್ಲ. ಅಲ್ಲದೆ, ಅನೇಕ ಬಾಡಿಗೆದಾರರು ಕನಿಷ್ಠ 10% ರಷ್ಟು ಬಾಡಿಗೆ ಕಡಿತಗೊಳಿಸಲು ಒತ್ತಾಯಿಸುತ್ತಾರೆ” ಎಂದು ಕೋಣನಕುಂಟೆ ಕ್ರಾಸ್‌ನಲ್ಲಿರುವ ಶ್ರೇಯಾ ರಿಯಲ್ ಎಸ್ಟೇಟ್ ಏಜೆನ್ಸಿಯ ರಾಜು ಕೆ ಹೇಳಿದರು.

“ಹಲವು ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲಿ ಬೆಳ್ಳಿಗ್ಗೆ ಮತ್ತು ಸಂಜೆ ಕೆಲವು ಗಂಟೆಗಳವರೆಗೆ ನೀರಿನ ಪೂರೈಕೆಯನ್ನು ನಿರ್ಬಂಧಿಸಲಾಗಿದೆ. ಬಾಡಿಗೆದಾರರ ಅನಾನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಬಾಡಿಗೆಯನ್ನು ಕಡಿತಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ” ಎಂದು ಜೆಪಿ ನಗರ ಮತ್ತು ಕನಕಪುರ ಸ್ಥಳೀಯ ಶ್ರೀ ಎಸ್ಟೇಟ್ ಶ್ರೀನಿವಾಸ್ ಎಂ ಹೇಳಿದರು.

“ಟೆಕ್ ಪಾರ್ಕ್‌ಗಳಿಗೆ ಸಮೀಪವಿರುವ ಪ್ರದೇಶಗಳಲ್ಲಿ ನೀರಿನ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿದೆ. ಕನಕಪುರ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ಗಳು ಹೆಚ್ಚು ನೀರಿನ ಸಮಸ್ಯೆಯಿಂದ ಕೂಡಿದೆ. ಬೃಹತ್ ಅಪಾರ್ಟ್‌ಮೆಂಟ್ ಸಂಕೀರ್ಣಗಳಲ್ಲಿ ಸಮಸ್ಯೆಗಳು ಸ್ಪಷ್ಟವಾಗಿ ಕಂಡುಬರುತ್ತವೆ. ಕೆಲವು ಜನರು ಇನ್ನೂ ಸಣ್ಣ – ಪುಟ್ಟ ಅಪಾರ್ಟ್‌ಮೆಂಟ್ ಸಂಕೀರ್ಣಗಳಲ್ಲಿ ಫ್ಲಾಟ್‌ಗಳನ್ನು ಬಾಡಿಗೆಗೆ ಪಡೆಯುತ್ತಾರೆ. ಏಕೆಂದರೆ, ನೀರಿನ ಬಳಕೆ ಇರುತ್ತದೆ. ಪರಿಸ್ಥಿತಿ ಕೈ ಮೀರುವುದಿಲ್ಲ ಎಂದು ಅವರು ನಂಬುತ್ತಾರೆ. ಆದರೆ, 1,000ಕ್ಕೂ ಹೆಚ್ಚು ಫ್ಲ್ಯಾಟ್‌ಗಳನ್ನು ಹೊಂದಿರುವ ಅನೇಕ ಕಾಂಪ್ಲೆಕ್ಸ್‌ಗಳಿದ್ದು, ಇಲ್ಲಿ ಬಾಡಿಗೆದಾರರನ್ನು ಪಡೆಯುವುದು ಕಷ್ಟಕರವಾಗಿದೆ. ಪರಿಣಾಮವಾಗಿ, ಈ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿನಿಂದ ಅನೇಕ ಫ್ಲ್ಯಾಟ್‌ಗಳು ಖಾಲಿ ಬಿದ್ದಿವೆ” ಎಂದು ಪುಟ್ಟೇನಹಳ್ಳಿಯ ಸ್ಥಳೀಯ ರಿಯಲ್ ಎಸ್ಟೇಟ್ ಏಜೆಂಟ್ ಮಂಜು ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ಬಿಸಿಯಾಗಿದ್ದ ಇಳೆಗೆ ತಂಪೆರೆದ ಮಳೆ | ಮಂಗಳೂರು ಸೇರಿ ದಕ್ಷಿಣ ಕನ್ನಡದ ಹಲವೆಡೆ ವರ್ಷದ ಮೊದಲ ಮಳೆ

ನೀರಿನ ಸಮಸ್ಯೆಯನ್ನು ಚಿತ್ರಿಸುತ್ತಿರುವಷ್ಟು ಕೆಟ್ಟದಾಗಿ ಪರಿಸ್ಥಿತಿ ಇಲ್ಲ. ಪರಿಸ್ಥಿತಿ ಸುಧಾರಿಸಿದೆ ಎಂದು ಅನೇಕ ಅಪಾರ್ಟ್‌ಮೆಂಟ್‌ ನಿವಾಸಿಗಳು ಹೇಳುತ್ತಾರೆ. ನೀರಿನ ಬಿಕ್ಕಟ್ಟು ರಿಯಲ್ ಎಸ್ಟೇಟ್ ಬೆಲೆಗಳ ಮೇಲೆ ಭಾರೀ ಪರಿಣಾಮ ಬೀರುತ್ತಿದೆ ಎಂದು ಅರ್ಥಮಾಡಿಕೊಳ್ಳುವ ಅನೇಕ ಅಪಾರ್ಟ್‌ಮೆಂಟ್ ಮಾಲೀಕರ ಸಂಘಗಳು ಈಗ ಉಂಟಾದ ಹಾನಿಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿವೆ. ಸಾಮಾಜಿಕ ಮಾಧ್ಯಮದಲ್ಲಿ ಪರಿಸ್ಥಿತಿಯನ್ನು ನವೀಕರಿಸದಂತೆ ಹಲವು ಸಂಘಗಳು ಸದಸ್ಯರಿಗೆ ಎಚ್ಚರಿಕೆ ನೀಡಿವೆ.

“ನಗರದ ಪ್ರತಿಯೊಂದು ಭಾಗದಲ್ಲಿರುವಂತೆ, ನಮಗೂ ನೀರಿನ ಬಿಕ್ಕಟ್ಟು ಇದೆ. ನಾವು ಅದನ್ನು ನಿರ್ವಹಿಸುತ್ತಿದ್ದೇವೆ. ಆದರೆ, ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ನೀರಿಲ್ಲ ಎಂಬ ವದಂತಿ ಸುಳ್ಳು ಮತ್ತು ಇಂತಹ ಸುಳ್ಳು ಸುದ್ದಿಗಳಿಂದ ನಮ್ಮಲ್ಲಿ ಅನೇಕರಿಗೆ ಫ್ಲಾಟ್‌ಗಳನ್ನು ಬಾಡಿಗೆಗೆ ಕೊಡುವುದು ಕಷ್ಟಕರವಾಗಿದೆ. ಹೀಗಾಗಿ, ಇಂತಹ ಸುಳ್ಳು ಸುದ್ದಿಗಳನ್ನು ಹರಡದಂತೆ ಜನರನ್ನು ಎಚ್ಚರಿಸಲು ಸಂಘವು ಪ್ರಯತ್ನಿಸುತ್ತಿದೆ” ಎಂದು ಕನಕಪುರದ ಅಪಾರ್ಟ್‌ಮೆಂಟ್ ಸಂಕೀರ್ಣದ ಮಾಲೀಕ ಹೇಳಿದರು.

ಪಿಜಿಗಳಲ್ಲೂ ನೀರಿನ ಸಮಸ್ಯೆ

ನಗರದಲ್ಲಿನ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗಳು ಸಹ ನೀರಿನ ಸಮಸ್ಯೆಯಿಂದ ಕಠಿಣ ಸಮಯವನ್ನು ಎದುರಿಸುತ್ತಿವೆ. ಒಂದೆಡೆ ನೀರಿನ ಪೂರೈಕೆಗಾಗಿ ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸಬೇಕಾಗಿರುವುದರಿಂದ ಅವರ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಇನ್ನೊಂದೆಡೆ ಅನೇಕರು ಉತ್ತಮ ನೀರು ಸರಬರಾಜು ಇರುವ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.

ನೀರಿನ ಬಿಕ್ಕಟ್ಟು ತಾತ್ಕಾಲಿಕ ಪರಿಸ್ಥಿತಿಯಾಗಿರುವುದರಿಂದ ನಾವು ಹೆಚ್ಚಿನ ಬಾಡಿಗೆಗೆ ಬೇಡಿಕೆಯಿಡಲು ಸಾಧ್ಯವಿಲ್ಲ. ಆದರೂ ನೀರನ್ನು ಜಾಗರೂಕತೆಯಿಂದ ಬಳಸುವಂತೆ ನಾವು ವಿನಂತಿಸುತ್ತಿದ್ದೇವೆ ಎಂದು ಬೆಂಗಳೂರು ಪಿಜಿ ಮಾಲೀಕರ ಸಂಘದ ಕಾರ್ಯದರ್ಶಿ ಸುಖಿ ಎಸ್‌ಒ ವಿವರಿಸಿದರು.

ನೀರಿನ ಬವಣೆ

ಈ ಸಮಸ್ಯೆ ಒಂದೇಡೆಯಾದರೇ ಇನ್ನೊಂದೆಡೆ ವಿಜಯನಗರ ವಿಧಾನಸಭಾಕ್ಷೇತ್ರದ ಬಾಪೂಜಿನಗರ ನಿವಾಸಿಗಳು ನೀರಿಲ್ಲದೇ ಪರಿತಪಿಸುವಂತಾಗಿದೆ. ಕಾವೇರಿ ನೀರು ಬರುತ್ತಿಲ್ಲ. ಬಂದರೂ ಜಲಮಂಡಳಿ ಸಾಕಾಗುವಷ್ಟು ನೀರು ಬಿಡುತ್ತಿಲ್ಲ. ಅಂತರ್ಜಲ ಮಟ್ಟ ಕುಸಿದು ಬೋರ್ ವೆಲ್‌ನಲ್ಲಿ ನೀರು ಬರುತ್ತಿಲ್ಲ.

ಜನರ ಸಮಸ್ಯೆ ಆಲಿಸದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಬಾಪುಜಿನಗರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ನೀರು ಬಿಡುವಲ್ಲಿ ಜನಪ್ರತಿನಿಧಿಗಳು ರಾಜಕಾರಣ ಮಾಡುತ್ತಿದ್ದಾರೆ. ತಮಗೆ ಬೇಕಾದ ಏರಿಯಾಗಳಿಗೆ ಕಾವೇರಿ ನೀರು ಬಿಡುತ್ತಿದ್ದಾರೆ. ಕೆಲ ಏರಿಯಾಗಳಿಗೆ ನೀರೆ ಬಿಡುತ್ತಿಲ್ಲ ಎಂದು ಜನರು ಆರೋಪ ಮಾಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X