ಬೆಂಗಳೂರು | ಗಗನಕ್ಕೇರಿದ ದಿನಸಿ, ತರಕಾರಿ ಬೆಲೆ; ₹50ಕ್ಕೇರಿದ ಟೊಮೆಟೊ ದರ

Date:

Advertisements

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತರಕಾರಿ ಬೆಲೆ ಸೇರಿದಂತೆ ನಿತ್ಯ ಬಳಕೆಯ ವಸ್ತುಗಳ ದರ ಏರಿಕೆಯಾಗುತ್ತಿದೆ. ಸದ್ಯ ₹50ರ ಗಡಿಯಲ್ಲಿದ್ದ ತರಕಾರಿಗಳ ದರ ಇದೀಗ ₹100ರ ಗಡಿ ದಾಟಿದೆ. ಟೊಮೆಟೊ ಬೆಲೆ ₹50 ಏರಿಕೆಯಾಗಿದ್ದು, ತೊಗರಿಬೇಳೆ ₹200ರ ಗಡಿ ಮುಟ್ಟಿದೆ.

ಈ ಹಿಂದೆ ₹50 ರ ಅಸುಪಾಸಿನಲ್ಲಿ‌ ಸಿಗುತ್ತಿದ್ದ ತರಕಾರಿಗಳು ಇದೀಗ ₹100 ರ ಗಡಿ ದಾಟಿವೆ. ನಗರದಲ್ಲಿ ಹೆಚ್ಚು‌ ಮಳೆಯಾಗುತ್ತಿದೆ. ಇದರ ಪರಿಣಾಮವಾಗಿ ಬಂದ ಬೆಳೆಯೂ ಹಾಳಾಗುತ್ತಿದೆ. ಜತೆಗೆ ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ತರಕಾರಿಗಳು ಸಿಗದ ಪರಿಣಾಮ ತರಕಾರಿ ಬೆಲೆ‌‌ ಏರಿಕೆಯಾಗಿದೆ. ದರ ಏರಿಕೆಯಾಗುತ್ತಲೇ ಇದ್ದು, ಗ್ರಾಹಕರಿಗೆ ಬಹುದೊಡ್ಡ ಹೊರೆಯಾಗಿ ಪರಿಣಮಿಸಿದೆ.

ಬೀನ್ಸ್ ದರ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಹೋಲ್ ಸೇಲ್ ದರವೇ ಡಬಲ್ ಸೆಂಚುರಿ ದಾಟಿ ಗ್ರಾಹಕರನ್ನು ಹುಬ್ಬೇರುವಂತೆ ಮಾಡಿದೆ. ರೀಟೇಲ್‌ನಲ್ಲಿ ಪ್ರತಿ ಕೆಜಿ ಗೆ ₹200ಕ್ಕೂ ಹೆಚ್ಚು ದರ ನಿಗದಿಯಾಗುತ್ತಿದೆ. ತರಕಾರಿ ಬೆಲೆಯ ಜತೆಗೆ ದಿನಸಿ ಪದಾರ್ಥಗಳ‌ ಬೆಲೆ‌ ಕೂಡ ಏರಿಕೆಯಾಗಿದೆ. ಕೆಜಿ ತೊಗರಿ ಬೇಳೆಗೆ ಹೋಲ್ ಸೇಲ್​​ನಲ್ಲಿ ₹195‌ ಇದ್ದರೆ, ಚಿಲ್ಲರೆ ಅಂಗಡಿಗಳಲ್ಲಿ‌ ₹220 ಇದೆ.‌ ಕಡ್ಲೆ ಬೇಳೆ ಕೆಜಿ ₹72 ಇತ್ತು.‌ ಇದೀಗ ₹110 ಆಗಿದೆ.‌ ಅಲ್ಲದೇ, ಸ್ಟೀಮ್ ಅಕ್ಕಿ ₹48 ಇದ್ದು, ಈಗ ₹58 ಆಗಿದೆ. ಹೊಸ ಸ್ಟಾಕ್ ಇಲ್ಲದ ಕಾರಣ ಬೇಳೆ, ಅಕ್ಕಿ ಬೆಲೆ ಜಾಸ್ತಿಯಾಗಿದೆ ಎಂದು ತಿಳಿದುಬಂದಿದೆ.

Advertisements

ಈ ಹಿಂದೆ ಮಳೆಯಿಲ್ಲದೇ ತರಕಾರಿ ಬೆಳೆದಿಲ್ಲ. ಸಕಾಲಕ್ಕೆ ಮಳೆಯಾಗದ ಕಾರಣ ಹಲವು ತರಕಾರಿಗಳು ಒಣಗಿವೆ. ಜತೆಗೆ, ತಾಪಮಾನ ಹೆಚ್ಚಳವಾಗಿದ್ದಕ್ಕೆ ತರಕಾರಿ ಬೆಲೆ ಜಾಸ್ತಿಯಾಗಿತ್ತು ಎಂಬ ಕಾರಣವಿತ್ತು. ಇದೀಗ, ಮಳೆಯಾಗುತ್ತಿರುವುದರಿಂದ ತರಕಾರಿ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ.

ಈ ಸುದ್ದಿ ಓದಿದ್ದೀರಾ? ನೀಟ್ ಅಕ್ರಮ | ಹಣಕ್ಕಾಗಿ ಬದ್ಧತೆ ಮರೆತವಾ ಮಾಧ್ಯಮಗಳು?

ಅಲ್ಲದೇ, ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ಬೇಡಿಕೆಗೆ ತಕ್ಕಷ್ಟು ತರಕಾರಿ ಪೂರೈಕೆಯಾಗುತ್ತಿಲ್ಲ. ಸದ್ಯ ಕೇವಲ‌ ಕರ್ನಾಟಕದ ಜಿಲ್ಲೆಗಳಿಂದ‌ ಮಾತ್ರ ತರಕಾರಿ ಪೂರೈಕೆಯಾಗುತ್ತಿದೆ. ಜತೆಗೆ, ಮಳೆಗೆ ಟೊಮೆಟೊ ‌ಹಾಗೂ ಈರುಳ್ಳಿ ಸರಿಯಾಗಿ ಫಸಲು ಬರುತ್ತಿಲ್ಲ.‌ ಈ‌‌‌ ಕಾರಣದಿಂದಾಗಿ ತರಕಾರಿಗಳ‌ ಬೆಲೆ‌ ಜಾಸ್ತಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ‌ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪರಸ್ಥರು ಅಭಿಪ್ರಾಯಪಟ್ಟಿದ್ದಾರೆ.

₹80 ಇದ್ದ ಕ್ಯಾರೆಟ್ ಬೆಲೆ ಇದೀಗ ₹82 ಆಗಿದೆ. ನವಿಲುಕೋಸು ₹102, ಬದನೆಕಾಯಿ ₹30, ದಪ್ಪಮೆನಸಿನಕಾಯಿ ₹65, ಬಟಾಣಿ ₹120, ಬೆಂಡೆಕಾಯಿ ₹30, ಆಲೂಗಡ್ಡೆ ₹40, ಬೆಳ್ಳುಳ್ಳಿ ₹180 ಆಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಟ್ರಾಫಿಕ್ ದಂಡಗಳಿಗೆ ಶೇ. 50 ರಿಯಾಯಿತಿ: ಬೆಂಗಳೂರು ಸಂಚಾರ ಪೊಲೀಸರ ಘೋಷಣೆ

ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಗುರುವಾರ ಬಾಕಿ ಇರುವ ಟ್ರಾಫಿಕ್ ದಂಡಗಳ...

Download Eedina App Android / iOS

X