‘ತಾವು ಸಿಸಿಬಿ ಪೊಲೀಸರು’ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬನನ್ನು ಅಪಹರಣ ಮಾಡಿ, ₹5 ಲಕ್ಷಕ್ಕೆ ಬೇಡಿಕೆಯಿಟ್ಟ ಗುಂಪೊಂದನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಖಾಸಿಂ ಮುಜಾಹಿದ್, ಮುಕ್ತಿಯಾರ್, ವಸಿಂ, ಶಬ್ಬೀರ್ ಹಾಗೂ ಶೋಯೆಬ್ ಬಂಧಿತ ಆರೋಪಿಗಳು.
ಆರೋಪಿ ಮೊಹಮ್ಮದ್ ಖಾಸಿಂ ಮುಜಾಹಿದ್ ಸಿಸಿಬಿ ಪೊಲೀಸ್ ವಕ್ತಾರನಾಗಿದ್ದನು. ಈತನು ಸಿಸಿಬಿ ಕಚೇರಿಯಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದನು. ಮೊಬೈಲ್ ಶಾಪ್ ಮಾಲೀಕ ಕಾಲು ಸಿಂಗ್ ಸೆಪ್ಟೆಂಬರ್ 2ರಂದು ಕಾರಿನಲ್ಲಿ ಬರುತ್ತಿದ್ದಾಗ ವಿ.ವಿ. ಪುರಂ ಬಳಿ ಆರೋಪಿಗಳು ಆತನನ್ನು ಅಡ್ಡಗಟ್ಟಿ ಸುತ್ತುವರೆದಿದ್ದರು.
ಕಾಲು ಸಿಂಗ್‌ನನ್ನು ಹೆದರಿಸಿ ಆತನನ್ನು ಕಾರಿನ ಹಿಂಬದಿ ಸೀಟ್ನಲ್ಲಿ ಕೂರಿಸಿ, ‘ತಾವು ಸಿಸಿಬಿ ಪೊಲೀಸರು’ ಎಂದು ಹೇಳಿ, ನೀನು ಗಾಂಜಾ ಸರಬರಾಜು ಮಾಡುತ್ತಿದ್ದೀಯಾ ಎಂಬ ಬಗ್ಗೆ ನಮಗೆ ಮಾಹಿತಿ ಇದೆ ಎಂದು ಹೆದರಿಸಿ, ಆತನ ಕಣ್ಣಿಗೆ ಬಟ್ಟೆ ಕಟ್ಟಿ ವಿಲ್ಸನ್ ಗಾರ್ಡನ್ನ ಮನೆಯೊಂದಕ್ಕೆ ಕರೆದುಕೊಂಡು ಹೋಗಿದ್ದರು.
ಮನೆಗೆ ಕರೆದುಕೊಂಡು ಹೋದ ಮೇಲೆ ಕಾಲು ಸಿಂಗ್ಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ, ಆತನ ಮೊಬೈಲ್ನಿಂದ ಆತನ ಸ್ನೇಹಿತನಿಗೆ ಫೋನ್ ಮಾಡಿ ‘ನಾವು ಸಿಸಿಬಿ ಪೊಲೀಸರು’ ಎಂದು ಐದು ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೈ ಮುಗಿದರೂ ಬಿಡದೆ, ದಾರಿಹೋಕನ ಸುಲಿಗೆ ಮಾಡಿದ ದರೋಡೆಕೋರರು
ಸಿಂಗ್ ಸ್ನೇಹಿತರು ಪರಿಚಿತ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ತಕ್ಷಣ ಸಿಸಿಬಿ ಪೊಲೀಸರಿಗೆ ವಿಷಯ ರವಾನೆಯಾಗಿದೆ ಎಂಬುದನ್ನು ಅರಿತ ಆರೋಪಿಗಳು ಕಾಲು ಸಿಂಗ್ನ ಬಿಟ್ಟು ಕಳುಹಿಸಿದ್ದರು.
ಈ ಕುರಿತು ಕಾಲು ಸಿಂಗ್ನಿಂದ ವಿವಿ ಪುರಂ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಎನ್ಸಿಆರ್ ದಾಖಲಿಸಿಕೊಂಡ ವಿವಿಪುರಂ ಪೊಲೀಸರು, ಸಿಸಿಬಿಗೆ ಮಾಹಿತಿ ನೀಡಿದ್ದರು. ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸೋಗಿನಲ್ಲಿ…