ಬೆಂಗಳೂರು | ಬ್ರೇಕ್ ಹಾಕಲು ಹೋಗಿ ಎಕ್ಸಲೇಟರ್ ಒತ್ತಿದ ಕಾರು ಚಾಲಕ; ಸರಣಿ ಅಪಘಾತ

Date:

Advertisements

ಬ್ರೇಕ್ ಒತ್ತುವ ಬದಲು ಎಕ್ಸ್‌ಲೇಟರ್ ಒತ್ತಿದ ಪರಿಣಾಮ ಎಸ್‌ಯುವಿ ವಾಹನ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಹುಳಿಮಾವು ಕಾಳೇನ ಅಗ್ರಹಾರ ಬಳಿ ಘಟನೆ ನಡೆದಿದ್ದು, ನಾಲ್ವರು ಬೈಕ್ ಸವಾರರು ಗಾಯಗೊಂಡಿದ್ದಾರೆ.

ಬೆಂಗಳೂರು ಹುಳಿಮಾವು ಬಳಿಯ ಕಾಳೇನ ಅಗ್ರಹಾರದಲ್ಲಿ ಸಿಗ್ನಲ್‌ ಇದ್ದ ಕಾರಣ ವಾಹನಗಳು ನಿಂತಿವೆ. ಈ ವೇಳೆ, ಹಿಂದಿನಿಂದ ಬಂದ ಎಸ್‌ಯುವಿ ಕಾರ್‌ನ ಚಾಲಕ ಸಿಗ್ನಲ್‌ ಬಿದ್ದದರಿಂದ ವಾಹವನ್ನು ನಿಲ್ಲಿಸಲು ಬ್ರೇಕ್ ಒತ್ತುವ ಬದಲಾಗಿ, ಎಕ್ಸ್‌ಲೇಟರ್ ಒತ್ತಿದ್ದಾನೆ. ಈ ವೇಳೆ, ಮುಂದುಗಡೆ ನಿಂತಿದ್ದ ಎರಡು ಬೈಕ್‌ಗಳಿಗೆ ವಾಹನ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರರು ಮತ್ತು ಹಿಂಬದಿ ಸವಾರರು ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ನಾಲ್ವರು ಗಾಯಗೊಂಡಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಬೆಳಕಿನ ಹಬ್ಬ | ಮೊದಲ ದಿನ ಪಟಾಕಿ ಸಿಡಿತಕ್ಕೆ 26 ಜನರಿಗೆ ಗಾಯ

ಈ ದೃಶ್ಯ ಮತ್ತೊಂದು ಕಾರಿನ್ ಡ್ಯಾಶ್‌ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಬಗ್ಗೆ ಈ ದಿನ.ಕಾಮ್‌ ಜತೆಗೆ ಮಾತನಾಡಿದ ಹುಳಿಮಾವು ಸಂಚಾರ ಠಾಣೆಯ ಸಿಬ್ಬಂದಿಯೊಬ್ಬರು, “ಸಿಗ್ನಲ್ ಬಿದ್ದಾಗ ಬ್ರೇಕ್ ಹಾಕುವ ಬದಲಾಗಿ, ಎಕ್ಸ್‌ಲೇಟರ್ ಒತ್ತಿದ್ದಾರೆ. ಇದರಿಂದ ಅವಘಡ ಸಂಭವಿಸಿದೆ. ಕಾರ್‌ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ” ಎಂದರು.


ಈ ಘಟನೆಗೆ ಸಂಬಂಧಿಸಿದಂತೆ ಹುಳಿಮಾವು ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಟ್ರಾಫಿಕ್ ದಂಡಗಳಿಗೆ ಶೇ. 50 ರಿಯಾಯಿತಿ: ಬೆಂಗಳೂರು ಸಂಚಾರ ಪೊಲೀಸರ ಘೋಷಣೆ

ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಗುರುವಾರ ಬಾಕಿ ಇರುವ ಟ್ರಾಫಿಕ್ ದಂಡಗಳ...

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X