ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತಲೆದೂರಿದೆ. ಜನರು ಕುಡಿಯುವ ನೀರಿಗಾಗಿ ಕೂಡ ರಾಜಧಾನಿಯಲ್ಲಿ ಪರಿತಪಿಸುವಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ವಾಟರ್ ಟ್ಯಾಂಕರ್ ಮಾಲೀಕರು ಜನರಿಂದ ದುಪ್ಪಟ್ಟು ಹಣ ಪೀಕಲು ಆರಂಭಿಸಿದ್ದರು. ಸದ್ಯ ಇದಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಬೆಂಗಳೂರು ಜಿಲ್ಲಾಡಳಿತ, ದರ ನಿಗದಿ ಮಾಡಿ ಆದೇಶ ಹೊರಡಿಸಿದೆ. ಇದನ್ನು ಉಲ್ಲಂಘಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಸಭೆ ನಡೆಸಿದ್ದರು. ಟ್ಯಾಂಕರ್ ಮಾಫಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಅಲ್ಲದೇ, ಮಾರ್ಚ್ 7ರೊಳಗೆ ಟ್ಯಾಂಕರ್ ಮಾಲೀಕರು ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರು.
ಇದೀಗ, ದುಬಾರಿ ಬೆಲೆಗೆ ಖಾಸಗಿ ಟ್ಯಾಂಕರ್‌ಗಳ ಹಾವಳಿಗೆ ಬ್ರೇಕ್ ಹಾಕಲು, ಟ್ಯಾಂಕರ್ ಮಾಲೀಕರ ಜತೆಗೆ ಜಿಲ್ಲಾಡಳಿತ ಸಭೆ ನಡೆಸಿದ್ದು, ದರ ನಿಗದಿ ಮಾಡಿ ಆದೇಶ ಹೊರಡಿಸಿದೆ.
ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಪ್ರತಿ 15 ನಿಮಿಷಕ್ಕೊಂದು ರೈಲು ಸಂಚಾರ
ಟ್ಯಾಂಕರ್ ನೀರಿನ ದರ
- 5 ಕಿ.ಮೀ ವ್ಯಾಪ್ತಿಯ ಒಳಗಡೆಗೆ 6 ಸಾವಿರ ಲೀಟರ್ ನೀರು ಸರಬರಾಜು ಮಾಡುವ ಟ್ಯಾಂಕರ್‌ಗೆ ₹600
- 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 6 ಸಾವಿರ ಲೀಟರ್ ನೀರು ಸರಬರಾಜು ಮಾಡುವ ಟ್ಯಾಂಕರ್‌ಗೆ ₹750
- 8 ಸಾವಿರ ಲೀಟರ್ ಟ್ಯಾಂಕರ್‌ಗೆ ₹700 ದರ ನಿಗದಿ ಮಾಡಲಾಗಿದ್ದು, ಇದು 5 ಕಿ.ಮೀ ಒಳಗೆ ಅನ್ವಯವಾಗಲಿದೆ.
- 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 8 ಸಾವಿರ ಲೀಟರ್ ನೀರು ಸರಬರಾಜು ಮಾಡುವ ಟ್ಯಾಂಕರ್‌ಗೆ ₹850
- 5 ಕಿಲೋ ಮೀಟರ್ ವ್ಯಾಪ್ತಿಗೆ 1,200 ಲೀಟರ್ ಟ್ಯಾಂಕರ್‌ಗೆ ₹1000.
- 1200 ಲೀಟರ್ ಟ್ಯಾಂಕರ್‌ಗೆ ₹1200 ದರ ನಿಗದಿ ಮಾಡಲಾಗಿದ್ದು, ಇದು 10 ಕಿಲೋ ಮೀಟರ್ ವ್ಯಾಪ್ತಿಗೆ ಅನ್ವಯವಾಗಲಿದೆ.
- ಜಿಎಸ್ಟಿ ಸೇರಿಸಿದಂತೆ ಇದೀಗ ಅಧಿಕಾರಿಗಳು ಈ ದರ ನಿಗದಿ ಮಾಡಿದ್ದಾರೆ. ತಿಂಗಳ ಬಾಡಿಗೆ ಒಪ್ಪಿಕೊಳ್ಳುವವರಿಗೆ 5 ಕಿಲೋ ಮೀಟರ್ಗೆ ₹510 ನಿಗದಿಪಡಲಾಗಿದೆ. 10 ಕಿಲೋ ಮೀಟರ್ ಹೋದರೆ ₹650 ದರ ನಿಗದಿಯಾಗಿದೆ.