ಪತ್ನಿಗೆ ವಿಡಿಯೋ ಕರೆ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುತ್ತಿರುವಾಗಲೇ ಪತಿ ಮೃತಪಟ್ಟ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಮಿತ್ ಕುಮಾರ್(28) ಮೃತ ದುರ್ದೈವಿ. ಇವರು ಮೂಲತಃ ಬಿಹಾರದವರು. ಕಳೆದ 10 ವರ್ಷಗಳ ಹಿಂದೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದರು. ಕಳೆದ ಒಂದು ವರ್ಷದ ಹಿಂದೆ ಜಿಮ್ ಸಮೀಪ ಓರ್ವ ಯುವತಿಯನ್ನು ಪ್ರೀತಿ ಮಾಡಿದ್ದರು. ಪೋಷಕರ ವಿರೋಧದ ನಡುವೆಯೇ ವಿವಾಹವಾಗಿದ್ದರು.
ಮೃತ ಅಮಿತ್ ಪತ್ನಿ ನರ್ಸಿಂಗ್ ಸೇರಿದ್ದಳು. ಈ ಬಳಿಕ ಪತಿಗೆ ಹೆಚ್ಚಿನ ಸಮಯ ನೀಡುತ್ತಿರಲಿಲ್ಲ. ಹೆಚ್ಚಾಗಿ ಫ್ರೇಂಡ್ಸ್ ಜತೆಗೆ ಫೋನ್‌ನಲ್ಲಿರುತ್ತಿದ್ದಳು ಎನ್ನಲಾಗಿದೆ. ಈ ವಿಚಾರವಾಗಿ ದಂಪತಿ ಮಧ್ಯೆ ಪದೇಪದೆ ಜಗಳವಾಗುತ್ತಿತ್ತು. ಹೀಗಾಗಿ, ಪತ್ನಿ ಪತಿಯನ್ನು ತೊರೆದು ಬೇರೆಡೆ ವಾಸವಿದ್ದಳು. ಅಮಿತ್ ಹೆಂಡತಿಗೆ ವಾಪಾಸ್ ಮನೆಗೆ ಬರುವಂತೆ ಪದೇಪದೆ ಕರೆ ಮಾಡಿ ಮನವಿ ಮಾಡುತ್ತಿದ್ದರು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಡೆಂಘೀ ನಿಯಂತ್ರಣಕ್ಕೆ ಈಗಾಗಲೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ: ಸುರಳ್ಕರ್ ವಿಕಾಸ್ ಕಿಶೋರ್
ಮೇ 15ರಂದು ಕೂಡ ಪತ್ನಿಗೆ ಕರೆ ಮಾಡಿದ್ದ ಅಮಿತ್ ಮನೆಗೆ ವಾಪಾಸ್ ಬರುವಂತೆ ಮನವಿ ಮಾಡಿದ್ದಾನೆ. ವಿಡಿಯೋ ಕಾಲ್ನಲ್ಲಿರುವಾಗಲೇ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಸಾವನ್ನಪ್ಪಿದ್ದಾರೆ. ಬಾಗಲಗುಂಟೆಯ ಪತಿ ಮನೆಯಲ್ಲಿ ನೇಣುಬಿಗಿದಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆ ಆಗಿದೆ.
ಸದ್ಯ ಮರಣೋತ್ತರ ಪರೀಕ್ಷೆಗೆ ಅಮಿತ್ ಕುಮಾರ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.