ಹಿಂದೂ ವಿವಾಹ ಕಾಯ್ದೆ 1955ರ ಅಡಿಯಲ್ಲಿ ವಿವಾಹದ ಆನ್ಲೈನ್ ನೋಂದಣಿ ಸೌಲಭ್ಯವನ್ನು ಕರ್ನಾಟಕ ಸರ್ಕಾರ ಗುರುವಾರ (ಫೆಬ್ರವರಿ 15) ಪ್ರಾರಂಭಿಸಿದೆ.
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಮಲ್ಲೇಶ್ವರಂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹದ ಆನ್ಲೈನ್ ನೋಂದಣಿ ಪ್ರಕ್ರಿಯೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದರು. ಅದೇ ರೀತಿ, ವಿಶೇಷ ವಿವಾಹ ಕಾಯ್ದೆ 1954ರ ಅಡಿಯಲ್ಲಿ ವಿವಾಹ ನೋಂದಾಯಿಸಲು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕೂಡ ಆನ್ಲೈನ್ ಮಾಡಲಾಗಿದೆ.
Now one doesn’t have to visit the sub-registrar’s office for registering their marriage under Hindu Marriage Act. A cerificate is generated at the comfort of home by providing wedding invite,video, Aadhaar. One more step towards transparency and service delivery. #revenue #gok… pic.twitter.com/a233SlXO9l
— Krishna Byre Gowda (@krishnabgowda) February 15, 2024
ಹಿಂದೂ ವಿವಾಹಗಳ ನೋಂದಣಿ ಕಾಯಿದೆ-1955ರಡಿ ವಿವಾಹ ನೋಂದಣಿ ಸರಳೀಕರಣಗೊಳಿಸಿದ್ದು, ವಿವಾಹಿತರು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಉಪನೋಂದಣಾಧಿಕಾರಿಗಳು ಅನುಮೋದಿಸಿದ ನಂತರ ನಿಗದಿತ ಶುಲ್ಕ ಪಾವತಿಸಿ ಆನ್‌ಲೈನ್‌ನಲ್ಲಿಯೇ ವಿವಾಹ ದೃಢೀಕರಣ ಪತ್ರ ಪಡೆಯಲು ಆನ್‌ಲೈನ್ ಹಿಂದೂ ವಿವಾಹ ನೋಂದಣಿ ತಂತ್ರಾಂಶ ವ್ಯವಸ್ಥೆ ಕಲ್ಪಿಸಲಾಗಿದೆ.
ಅಲ್ಲದೆ, ವಿಶೇಷ ವಿವಾಹಗಳ ನೋಂದಣಿ ಕಾಯಿದೆ- 1955ರಡಿ ಉಪನೋಂದಣಿ ಕಚೇರಿಗಳಲ್ಲಿ ರಿಜಿಸ್ಟರ್ಡ್ ಮ್ಯಾರೇಜ್ ಆಗುವವರು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ವಿಶೇಷ ವಿವಾಹಗಳ ನೋಂದಣಿ ತಂತ್ರಾಂಶವನ್ನೂ ಅಳವಡಿಸಲಾಗಿದೆ.
ರಿಜಿಸ್ಟರ್ಡ್ ಮ್ಯಾರೇಜ್‌ಗೆ ಆನ್‌ಲೈನ್ ಮೂಲಕವೇ ದಿನಾಂಕ ಮತ್ತು ಸಮಯ ನಿಗದಿಪಡಿಸಿಕೊಂಡು ನಂತರ ಕಚೇರಿಯಲ್ಲಿ ಬಂದು ವಿವಾಹವಾಗುವ ವ್ಯವಸ್ಥೆ ಕಲ್ಪಿಸಲಾಗಿದೆ.
ರಾಜ್ಯದ ಎಲ್ಲ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೂ ಈ ಸೌಲಭ್ಯಗಳನ್ನು ಈ ತಿಂಗಳ ಅಂತ್ಯದೊಳಗೆ ವಿಸ್ತರಿಸಲಾಗುತ್ತದೆ. ಆಧಾರ್ ದೃಢೀಕರಣವನ್ನು ನೀಡಲು ಬಯಸುವವರು ಮನೆಯಿಂದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಆದರೆ, ಆಧಾರ್ ದೃಢೀಕರಣವನ್ನು ಮಾಡದಿರುವವರು ಸಬ್–ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡುವ ಮೂಲಕ ತಮ್ಮ ವಿವಾಹವನ್ನು ನೋಂದಾಯಿಸಿಕೊಳ್ಳಬಹುದು.
ವಿಶೇಷ ವಿವಾಹ ಕಾಯ್ದೆಯಡಿ ವಿವಾಹಗಳನ್ನು ನೋಂದಾಯಿಸಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆನ್ಲೈನ್ನಲ್ಲಿ ಮಾಡಲಾಗಿದೆ. ಎಲ್ಲ ಅಗತ್ಯ ದಾಖಲೆಗಳನ್ನು ಆನ್ಲೈನ್ನಲ್ಲಿ ಒದಗಿಸಿದ ನಂತರ, ಸಬ್ರಿಜಿಸ್ಟ್ರಾರ್ ಕಚೇರಿಗೆ ನೋಂದಣಿಗೆ ಭೇಟಿ ನೀಡಬೇಕಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕದ್ದ ಫೋನ್ ಪೋಸ್ಟ್ ಮೂಲಕ ಹಿಂತಿರುಗಿಸಿದರೆ ಪ್ರಕರಣ ದಾಖಲಿಸಲ್ಲ: ಪೊಲೀಸ್ ಇಲಾಖೆ
“ಈಗ ಹಿಂದೂ ವಿವಾಹ ಕಾಯಿದೆಯಡಿ ತಮ್ಮ ವಿವಾಹವನ್ನು ನೋಂದಾಯಿಸಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ. ಮದುವೆಯ ಆಮಂತ್ರಣ, ವಿಡಿಯೋ, ಆಧಾರ್ ಒದಗಿಸುವ ಮೂಲಕ ಮನೆಯ ಸೌಕರ್ಯದಲ್ಲಿ ಪ್ರಮಾಣಪತ್ರವನ್ನು ರಚಿಸಲಾಗುತ್ತದೆ. ಪಾರದರ್ಶಕತೆ ಮತ್ತು ಸೇವಾ ವಿತರಣೆಯ ಕಡೆಗೆ ಇನ್ನೂ ಒಂದು ಹೆಜ್ಜೆ” ಎಂದು ಕಂದಾಯ ಸಚಿವ ಕೃಷ್ಣಬೈರೆಗೌಡ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
“ರಾಜ್ಯದಲ್ಲಿ ಶೇ.30ರಷ್ಟು ವಿವಾಹಗಳು ಮಾತ್ರ ನೋಂದಣಿಯಾಗುತ್ತಿವೆ. ಹಾಗಾಗಿ, ವಿವಾಹವಾಗುವ ಎಲ್ಲರೂ ತಪ್ಪದೇ ವಿವಾಹ ನೋಂದಣಿ ಮಾಡಿಸಬೇಕು. ನಮ್ಮ ಸರ್ಕಾರ ರಚನೆಯಾದ ನಂತರ ಕಂದಾಯ ಇಲಾಖೆ ಸೇವೆಗಳನ್ನು ಸರಳೀಕರಣಗೊಳಿಸಲು ಸಾಕಷ್ಟು ಸುಧಾರಣೆ ಮಾಡಲಾಗಿದೆ. ಈ ರೀತಿಯ ಜನಸ್ನೇಹಿ ಸುಧಾರಣೆಗಳು ನಿರಂತರವಾಗಿ ನಡೆಯಲಿವೆ. ಕೇವಲ ಕಂದಾಯ, ಆದಾಯ ಸಂಗ್ರಹವಷ್ಟೇ ಇಲಾಖೆಯ ಆದ್ಯತೆಯಾಗಿರದೆ, ಜನಪರ ಆಡಳಿತ ಸುಧಾರಣೆಯೂ ನಮ್ಮ ದಿಕ್ಸೂಚಿಯಾಗಿದೆ” ಎಂದರು.