ಬೆಂಗಳೂರು | ಫೆ.27 ಮತ್ತು ಫೆ.28 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ

Date:

Advertisements

ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆ, ರಾಜಧಾನಿ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಫೆಬ್ರುವರಿ 27ರ ಬೆಳಿಗ್ಗೆ 6ರಿಂದ ಫೆಬ್ರುವರಿ 28ರ ಬೆಳಿಗ್ಗೆ 6ರವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲೂಎಸ್‌ಎಸ್‌ಬಿ) ಹೇಳಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಬಿಡಬ್ಲೂಎಸ್‌ಎಸ್‌ಬಿ, “ಕಾವೇರಿ 4ನೇ ಹಂತದ 2ನೇ ಹಂತಕ್ಕೆ 24 ಗಂಟೆ ನೀರು ಪೂರೈಕೆಯಾಗುವುದಿಲ್ಲ. 4ನೇ ಬ್ಲಾಕ್ ನಂದಿನಿ ಲೇಔಟ್, ಬಿಎಚ್‌ಇಎಲ್ ಲೇಔಟ್, ನಂದಿನಿ ಲೇಔಟ್, ಶ್ರೀನಿವಾಸನಗರ, ಜೈಮಾರುತಿ ನಗರ ಮತ್ತು ಬಡವಣೆ, ಸಾಕಮ್ಮ ಲೇಔಟ್, ನರಸಿಂಹ ಸ್ವಾಮಿ ಲೇಔಟ್, ಮುನೇಶ್ವರ ನಗರ, ಜ್ಞಾನ ಜ್ಯೋತಿ ನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಎನ್‌ಜಿಇ ಫ‌ಲಹಳ್ಳಿ ಭಾಗಗಳಲ್ಲಿ ನೀರು ಸರಬರಾಜು ಬಂದ್​ ಆಗಲಿದೆ” ಎಂದು ಹೇಳಿದೆ.

“ಐಟಿಐ ಲೇಔಟ್, 1 ಮತ್ತು 2 ನೇ ಹಂತದ ರೈಲ್ವೆ ಲೇಔಟ್, ಆರ್‌ಎಚ್‌ಬಿಸಿಎಸ್‌ ಲೇಔಟ್ 1ನೇ ಮತ್ತು 2ನೇ ಹಂತ, ಬೈರವೇಶ್ವರನಗರ, ಸುಂಕದಕಟ್ಟೆ, ಜಯ ಲಕ್ಷ್ಮಮ್ಮ ಲೇಔಟ್, ಕೆಬ್ಬೆಹಳ್ಳ, ಚಂದನ ಲೇಔಟ್, ಚಂದ್ರಶೇಖರ್ ಲೇಔಟ್, ಭೂವಿಜ್ಞಾನ ಲೇಔಟ್, ನರಸಾಪುರ, ಕಂದಾಯ ಲೇಔಟ್, ಪಾಪಾರಡ್ಡಿ, ಮುಲಕಾಯ ಲೇಔಟ್ ಬಿಇಎಲ್‌ 1 ಮತ್ತು 2 ನೇ ಹಂತ, ಬಿಳೇಕಲ್ಲು, ಬ್ಯಾಡರಹಳ್ಳಿ, ಉಪಕಾರ್ ಲೇಔಟ್ ಮತ್ತು ಪಶ್ಚಿಮ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳು. ಅದೇ ರೀತಿ ದಾಸರಹಳ್ಳಿ ವಲಯ ಹಾಗೂ ಆರ್‌ಆರ್‌ನಗರ ವಲಯ ಸೇರಿದಂತೆ ಬೆಂಗಳೂರು ಉತ್ತರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದರಿಂದ 14 ಬಿಬಿಎಂಪಿ ವಾರ್ಡ್‌ಗಳಿಗೆ ತೊಂದರೆಯಾಗಲಿದೆ” ಎಂದು ತಿಳಿಸಿದೆ.

Advertisements

ಈ ಸುದ್ದಿ ಓದಿದ್ದೀರಾ? ದ್ವಿತೀಯ ಪಿಯುಸಿ | ಪರೀಕ್ಷಾ ಅವಧಿಯಲ್ಲಿ ಬಿಎಂಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣ

“ಪೂರ್ವ ಬೆಂಗಳೂರಿನ ಭಾಗಗಳು, ಎ ನಾರಾಯಣಪುರ, ಉದಯ ನಗರ, ಆಂಧ್ರ ಕಾಲೋನಿ, ವಿಎಸ್ಆರ್ ಲೇಔಟ್, ಇಂದಿರಾಗಾಂಧಿ ಸ್ಟ್ರೀಟ್, ಜ್ಯೋತಿ ನಗರ, ದರ್ಗಾಹಾಲ್, ಸಾಕಮ್ಮ ಲೇಔಟ್, ವಿಜ್ಞಾನ ನಗರ ಸರ್ವೀಸ್ ಸ್ಟೇಷನ್ ಅಡಿಯಲ್ಲಿ ವಿಜ್ಞಾನ ನಗರ ಮತ್ತು ಅಕ್ಷಯನಗರ, ಎಂಇಜಿ ಲೇಔಟ್, ರಮೇಶ್ ನಗರ, ವೀರಭದ್ರ ನಗರ ಮುಂತಾದ ಪ್ರದೇಶಗಳು ಮತ್ತು ಜಗದೀಶ್ ನಗರ ಸೇವಾ ಠಾಣೆ ವ್ಯಾಪ್ತಿಯ ಶಿವ ಶಕ್ತಿ ಕಾಲೋನಿ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ನೀರಿನ ವ್ಯತ್ಯಯ ಉಂಟಾಗಲಿದೆ. ಹಾಗಾಗಿ, ಸಾಕಷ್ಟು ನೀರನ್ನು ಮನೆಯಲ್ಲಿ ಸಂಗ್ರಹಿಸಲು ಬಿಡಬ್ಲೂಎಸ್‌ಎಸ್‌ಬಿ ಜನರಿಗೆ” ವಿನಂತಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

ತುಮಕೂರು | ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ : ಡಿಕೆಶಿ ವಿರುದ್ಧ ಕೆ. ಎನ್ ರಾಜಣ್ಣ ವಾಗ್ದಾಳಿ

ಡಿ.ಕೆ.ಶಿವಕುಮಾ‌ರ್ ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ ಹಾಡಿದ ಬಗ್ಗೆ  ಮಾಜಿ ಸಚಿವ ಕೆ...

Download Eedina App Android / iOS

X