ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಳವಾಗಿದೆ. ಬೇಸಿಗೆ ಆರಂಭದ ದಿನಗಳಲ್ಲಿಯೇ ನೀರಿನ ಸಮಸ್ಯೆ ತಲೆದೋರಿದ್ದು, ಇನ್ನು ಎರಡರಿಂದ ಮೂರು ತಿಂಗಳು ಈ ಸಮಸ್ಯೆ ಹೀಗೆ ಇರಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಈ ನೀರಿನ ಸಮಸ್ಯೆ ಬಗೆಹರಿಸುವುದಕ್ಕೆ ಮುಂದಾಗಿರುವ ಬೆಂಗಳೂರು ಜಲಮಂಡಳಿ ಕೆರೆಗಳಲ್ಲಿ ಫಿಲ್ಟರ್ ಬೋರ್‌ವೆಲ್ ಅಳವಡಿಸಲು ತಯಾರಿ ನಡೆಸಿದೆ.
ಹೌದು, ಬೆಂಗಳೂರಿನ ಎಂಟು ಕೆರೆಗಳಲ್ಲಿ ಫಿಲ್ಟರ್ ಬೋರ್‌ವೆಲ್ ಅಳವಡಿಸುವುದಕ್ಕೆ ಬೆಂಗಳೂರು ಜಲಮಂಡಳಿ ಐಐಎಸ್ಸಿ ಸಹಯೋಗದಲ್ಲಿ ತಯಾರಿ ನಡೆಸಿದೆ.
ಫಿಲ್ಟರ್ ಬೋರ್‌ವೆಲ್ ಅಳವಡಿಸುವುದಕ್ಕೆ ಮೊದಲಿಗೆ ನಾಯಂಡಹಳ್ಳಿ ಕೆರೆ, ಚಿಕ್ಕ ಬಾಣಾವರ ಕೆರೆ, ವರ್ತೂರು ಕೆರೆ ಸೇರಿದಂತೆ ಎಂಟು ಕೆರೆಗಳನ್ನು ಆಯ್ಕೆ ಮಾಡಲಾಗಿದೆ. ಈ ಕೆರೆಗಳ ನೀರನ್ನು 10 ರಿಂದ 15 ದಿನಗಳಲ್ಲಿ ಸಂಗ್ರಹಿಸಲಾಗುತ್ತದೆ. ಬಳಿಕ, ತಜ್ಞರು ಈ ಕೆರೆಯ ನೀರಿನ ಗುಣಮಟ್ಟ ಪರಿಶೀಲಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾರ್ಚ್ 10ರ ಭಾನುವಾರ ಬೆಳಗ್ಗೆ 6 ಗಂಟೆಗೇ ಆರಂಭ ನಮ್ಮ ಮೆಟ್ರೋ
ಈ ಕೆರೆಯ ನೀರು ಕುಡಿಯಲು ಯೋಗ್ಯವೆಂದಾದರೆ, ಬಳಿಕ ಬೋರ್‌ವೆಲ್ ಕೊರೆಯಲಾಗುತ್ತದೆ. ನಂತರ ನೀರು ಶುದ್ಧೀಕರಣ ಮಾಡಿ, ಬಳಿಕ ಮನೆ ಮನೆಗೆ ಸರಬರಾಜು ಮಾಡಲಾಗುತ್ತದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.