ಪತ್ನಿ ಬೇರೋಬ್ಬರ ಜತೆಗೆ ವಿವಾಹೇತರ ಸಂಬಂಧ ಹೊಂದಿದ್ದಾಳೆಂದು ಅನುಮಾನ ಪಟ್ಟ ದುಷ್ಟ ಪತಿಯೊಬ್ಬ ಪತಿಯ ಮೇಲೆ ನಡುರಸ್ತೆಯಲ್ಲೇ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಜೀವನ್ ಭೀಮಾ ನಗರದ ವಿಂಡ್ ಟನಲ್ ರಸ್ತೆಯಲ್ಲಿ ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಶೇಕ್ ಮುಜೀಬ್ ಆರೋಪಿ. ಈತ ಹೊಸಕೋಟೆ ಮೂಲದವನು. ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಹೀಗಾಗಿ, ಬೆಂಗಳೂರಿನ ಆರ್ ಟಿ ನಗರದಲ್ಲಿ ನೆಲೆಸಿದ್ದನು. ಈತ ನೈಗರ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದನು.
ಆದರೆ, ಕೆಲಸ ಮಾಡುವ ಸ್ಥಳದಲ್ಲಿ ತನ್ನ ಪತ್ನಿ ಬೇರೋಬ್ಬನ ಜತೆಗೆ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನ ಪಟ್ಟು ಆಕೆಯನ್ನು ಕೆಲಸದಿಂದ ಬಿಡಿಸಬೇಕು ಎಂದು ಸಂಚು ರೂಪಿಸಿದ್ದನು.
ಆಕೆಯ ಕೈ ಬೆರಳು ಕಟ್ ಮಾಡಿದರೇ ಕೆಲಸ ಮಾಡಲು ಆಗುವುದಿಲ್ಲ. ಆಗ ಕೆಲಸ ಬಿಡುತ್ತಾಳೆ ಎಂದು ಆಕೆಯ ಬೆರಳುಗಳನ್ನ ಕತ್ತರಿಸಲು ಶಿವಾಜಿನಗರದಲ್ಲಿ ಮಚ್ಚು ಖರೀದಿಸಿದ್ದನು ಈ ಬಗ್ಗೆ ಆರೋಪಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಈ ಸುದ್ದಿ ಓದಿದ್ದೀರಾ? ಘೋಷಿತ ಕಾಯಿಲೆಗಳ ಪಟ್ಟಿಗೆ ಹಾವು ಕಡಿತ ಸೇರ್ಪಡೆ: ಆರೋಗ್ಯ ಇಲಾಖೆ
ಯೋಜನೆಯಂತೆ ನಡುರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಪತ್ನಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ಸದ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆರೋಪಿ ಶೇಕ್ ಮುಜೀಬ್‌ನನ್ನು ಜೆ.ಬಿ.ನಗರ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ವಿಚಾರಣೆ ಮಾಡುತ್ತಿದ್ದಾರೆ.