ನಕಲಿ ಟಿಕೆಟ್ ತೋರಿಸಿ ವಿಮಾನ ನಿಲ್ದಾಣದ ಟರ್ಮಿನಲ್ ಒಳಗೆ ಪ್ರವೇಶ ಪಡೆದಿದ್ದ ಮಹಿಳೆಯೊಬ್ಬರ ಮೇಲೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರ್ಪಿತ್ ಕೌರ್ ಸೈನಿ ಎಂಬ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದೆ. ನ.26 ರಂದು ಸೈನಿ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ತನ್ನ ಸ್ನೇಹಿತೆಯನ್ನು ಡ್ರಾಪ್ ಮಾಡಲು ಬಂದಿದ್ದಳು. ಮಹಿಳೆಯ ಸ್ನೇಹಿತೆ ರಾಂಚಿಗೆ ತೆರಳುತ್ತಿದ್ದರು. ಈ ವೇಳೆ, ಸ್ನೇಹಿತೆ ಜತೆಗೆ ಮಹಿಳೆ ಕೂಡ ಡಿಪಾರ್ಚರ್ ಗೇಟ್ನಲ್ಲಿ ನಕಲಿ ಇ ಟಿಕೆಟ್ ತೋರಿಸಿ ಟರ್ಮಿನಲ್ ಒಳಗೆ ಪ್ರವೇಶ ಮಾಡಿದ್ದರು.
ಈ ಮಹಿಳೆ ತನ್ನ ಸ್ನೇಹಿತೆಯನ್ನು ಪಿಇಎಸ್‌ಸಿವರೆಗೂ ಬಿಟ್ಟು ಬರಲು ಟಿಕೆಟ್ ಎಡಿಟ್ ಮಾಡಿ ತಂದಿದ್ದರು. ಅವರ ಉಪಾಯದ ಪ್ರಕಾರವೇ, ನಿಲ್ದಾಣದ ಒಳಗೆ ತೆರಳಿದ್ದ ಮಹಿಳೆ ಸಿಟಿ ಸೈಡ್‌ನಲ್ಲಿ ಲ್ಯಾಪ್‌ಟಾಪ್ ಮರೆತು ಬಂದ ಕಾರಣ ಪಿಟಿಬಿವರೆಗೂ ತೆರಳಿದ್ದ ಮಹಿಳೆ ವಾಪಾಸ್ ಬಂದಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ವಿಮಾನ ನಿಲ್ದಾಣದ ಭದ್ರತಾ ತಪಾಸಣೆಯಲ್ಲಿ ಪ್ರಯಾಣಿಕರಿಗೆ ತಪ್ಪಲಿರುವ ಕಿರಿಕಿರಿ: ನೂತನ ತಂತ್ರಜ್ಞಾನ ಅಳವಡಿಕೆ
ಈ ವೇಳೆ, ಇಂಡಿಗೋ ಸಿಬ್ಬಂದಿ ಚೆಕ್ ಇನ್ ಕೌಂಟರ್ನಲ್ಲಿ ಪರಿಶೀಲನೆ ಮಾಡಿದ್ದಾರೆ. ಆಗ ನಕಲಿ ಟಿಕೆಟ್ ಎಂಬುವುದು ಬೆಳಕಿಗೆ ಬಂದಿದೆ. ಮಹಿಳೆ ವಿರುದ್ಧ ದೂರು ನೀಡಿದ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.