ಮತ್ತೆ ಜೀವ ಪಡೆದ ಬೆಂಗಳೂರಿನ ಆನೆ ಪಾರ್ಕ್ ಕೆರೆ; ವೈವಿಧ್ಯಮಯ ಪಕ್ಷಿಗಳಿಗೆ ನೆಲೆ

Date:

Advertisements

ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ಆನೆ ಪಾರ್ಕ್ನಲ್ಲಿರುವ ಕೆರೆಯೂ ಮಳೆಯಿಲ್ಲದೇ, ಸಂಪೂರ್ಣವಾಗಿ ಬತ್ತಿ ಹೋಗಿತ್ತು. ಇದೀಗ, ಮಳೆಯಿಂದ ಕೆರೆ ಭರ್ತಿಯಾಗಿ ಮರುಜೀವ ಪಡೆದಿದೆ. ಕೆರೆಯಲ್ಲಿ ಈಗ ಭಾರತೀಯ ಸ್ಪಾಟ್ಬಿಲ್ಡ್ ಬಾತುಕೋಳಿಗಳು ಸೇರಿದಂತೆ ಇತರ ಪಕ್ಷಿಗಳಿಗೆ ನೆಲೆಯಾಗಿದೆ.

ತಾಪಮಾನದ ನಂತರ ಐದು ತಿಂಗಳ ಬಳಿಕ ನಗರದಲ್ಲಿ ಮಳೆಯಾಗಿದೆ. ನಗರದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುತ್ತಿದ್ದು, ತಾಪಮಾನ ಕಡಿಮೆಯಾಗಿದೆ. ಕೆರೆಗಳು ತುಂಬುತ್ತಿವೆ.

ತಿಂಗಳ ಆರಂಭದಲ್ಲಿ ಕೆರೆಯ ನೀರಿನಲ್ಲಿ ಆಮ್ಲಜನಕದ ಮಟ್ಟವು ತೀವ್ರವಾಗಿ ಕುಸಿತ ಕಂಡಿತ್ತು. ನಂತರ ಕೆರೆಯಲ್ಲಿ ಹೆಚ್ಚಿನ ಸಂಖ್ಯೆಯ ಮೀನುಗಳು ಸತ್ತಿದ್ದವು. ಜಲಮೂಲಗಳಲ್ಲಿ ನೀರಿನ ಮಟ್ಟ ಕಡಿಮೆಯಾದಾಗ ಆಮ್ಲಜನಕದ ಮಟ್ಟವು ಕಡಿಮೆಯಾಗುತ್ತದೆ. ಕೊನೆಗೆ ಕೆರೆಯಲ್ಲಿ ನೀರು ಬತ್ತಿ ಹೋಗಿತ್ತು. ಈಗ ನಗರದಲ್ಲಿ ಮಳೆಯಾಗಲು ಆರಂಭಿಸಿದ ಬಳಿಕ ಕೆರೆಗೆ ಮತ್ತೆ ಜೀವ ತುಂಬಿದ್ದು, ಪಕ್ಷಿಗಳು ಹಾಗೂ ಜಲಚರಗಳನ್ನು ಆಹ್ವಾನಿಸುತ್ತಿದೆ.

Advertisements

ಕೆರೆಯೂ ಈಗ ವೈವಿಧ್ಯಮಯ ಪಕ್ಷಿಗಳು, ಮೀನುಗಳು ಹಾಗೂ ಆಮೆಗಳಿಗೆ ನೆಲೆಯಾಗಿದೆ. ಸಿಟಿಜನ್ಸ್ ಇನಿಶಿಯೇಟಿವ್ ಜಯಮಹಲ್ ಏರಿಯಾದ (ಸಿಐಜೆಎಮ್‌ಎ) ಪ್ರೇಮಾ ಕಾಕಡೆ ಅವರ ಪ್ರಕಾರ, ಭಾರತೀಯ ಸ್ಪಾಟ್ಬಿಲ್ಡ್ ಬಾತುಕೋಳಿಗಳು, ಕಿಂಗ್ಫಿಷರ್ಗಳು, ಈಗ್ರೆಟ್ಸ್ ಹಾಗೂ ನೈಟ್ ಹೆರಾನ್ಗಳು ಈಗ ಗುರುತಿಸಲ್ಪಟ್ಟಿವೆ.

ಬಾತುಕೋಳಿ

“ಈ ಕೆರೆಯೂ ಆರಂಭದಲ್ಲಿ ಕಲ್ಲುಗಣಿಗಾರಿಕೆಯಾಗಿದ್ದು, ಮಳೆಯ ಹೊರತಾಗಿ ಪೂರೈಕೆಯ ಮೂಲವನ್ನು ಹೊಂದಿಲ್ಲ. ಪ್ರದೇಶದ ಸುತ್ತಮುತ್ತಲಿನ ಜೀವವೈವಿಧ್ಯವನ್ನು ಪೋಷಿಸಲು ಮಳೆನೀರು ಕೊಯ್ಲು ವ್ಯವಸ್ಥೆ ಮತ್ತು ಸ್ಪ್ರಿಂಕ್ಲರ್ಗಳಿದ್ದರೂ, ಕೆರೆಯ ಅಗತ್ಯಗಳನ್ನು ಪೂರೈಸುವಲ್ಲಿ ಅದು ಸಂಪೂರ್ಣವಾಗಿ ಸಮರ್ಥವಾಗಿಲ್ಲ” ಎಂದಿದ್ದಾರೆ.

ಪಕ್ಷಿಗಳನ್ನು ನೋಡಿದ ನಂತರ ಸಂತೋಷ ವ್ಯಕ್ತಪಡಿಸಿದ ಅವರು, ಪಕ್ಷಿಗಳಿಗೆ ಆಹಾರ ನೀಡುವ ತಪ್ಪು ಅಭ್ಯಾಸದ ಬಗ್ಗೆ ಸಂದರ್ಶಕರಿಗೆ ಎಚ್ಚರಿಕೆ ನೀಡಿದರು.

ಜನರು ತಪ್ಪು ತಿಳುವಳಿಕೆ ಹೊಂದಿದ್ದಾರೆ ಮತ್ತು ಆಹಾರದ ಬಗ್ಗೆ ಕಡಿಮೆ ಅರಿವು ಹೊಂದಿದ್ದಾರೆ. ಪಕ್ಷಿಗಳು ಮತ್ತು ವನ್ಯಜೀವಿಗಳನ್ನು ಒಂಟಿಯಾಗಿ ಬಿಡಬೇಕುಎಂದು ಅವರು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೆಂಂಗಳೂರು | ‘ಓವರ್ ಟೇಕ್’ ಮಾಡಲು ಜಾಗ ಬಿಡಲಿಲ್ಲವೆಂದು ಕಾರಿನ ಮೇಲೆ ದಾಳಿ ನಡೆಸಿದ ದ್ವಿಚಕ್ರ ವಾಹನ ಸವಾರ

ಉದ್ಯಾನವನವು ತೋಟಗಾರಿಕಾ ಇಲಾಖೆಗೆ ಒಳಪಟ್ಟಿರುವುದರಿಂದ, ಇಲಾಖೆಯು ಕೆರೆಯ ನಿರ್ವಹಣೆಗೆ ಆಸಕ್ತಿ ತೋರಿಸುತ್ತಿದೆ. ಆದರೆ, ಸಿಜೆಐಎಂಎ ಉದ್ಯಾನ ಮತ್ತು ಕೊಳದ ಯೋಗಕ್ಷೇಮವನ್ನು ಸಹ ನೋಡಿಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

ಕೊಳದ ನೀರಿನ ಮೇಲೆ ಸಾಕಷ್ಟು ಕಸ ಮತ್ತು ಪ್ಲಾಸ್ಟಿಕ್ ಬಿದ್ದಿದ್ದನು ತಕ್ಷಣ ಸ್ವಚ್ಛಗೊಳಿಸಬೇಕುಎಂದು ಸಂಘದ ಇನ್ನೊಬ್ಬ ಸದಸ್ಯೆ ರಾಧಿಕಾ ಸ್ವಾಮಿನಾಥನ್ ಹೇಳಿದ್ದಾರೆ.

ಮೂಲ: ದಿ ಹಿಂದು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X