ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನೀರು ಪೂರೈಕೆ ಮಾಡುವ ಟ್ಯಾಂಕರ್ಗಳ ಮಾಹಿತಿಗಳನ್ನು ಕಡ್ಡಾಯವಾಗಿ ಸ್ವಯಂ ನೋಂದಣಿ ಮಾಡಿಕೊಳ್ಳಬೇಕಾಗಿದೆ ಎಂದು ಪಾಲಿಕೆ ಹೇಳಿದೆ.
“ಈ ನಿಟ್ಟಿನಲ್ಲಿ ಪಾಲಿಕೆಯು ಹೊಸದಾಗಿ ಅಭಿವೃದ್ಧಿಪಡಿಸಲಾಗಿರುವ ಪೋರ್ಟಲ್ನಲ್ಲಿ https://bbmp.oasisweb.in/TankerManagement/SelfRegistration.aspx ಎಲ್ಲ ನೀರಿನ ಟ್ಯಾಂಕರ್ ಮಾಲೀಕರು ಮಾರ್ಚ್ 1ರಿಂದ ಮಾರ್ಚ್ 7ರವರೆಗೆ ತಮ್ಮ ಹೆಸರು, ವಿಳಾಸ, ವಲಯ, ಪಿನ್ ಕೋಡ್, ಮೊಬೈಲ್ ಸಂಖ್ಯೆ, ಟ್ಯಾಂಕರ್ ವಾಹನದ ಸಂಖ್ಯೆ, ಬ್ಯಾಂಕರ್ ಸಾಮರ್ಥ್ಯ, ಚಾಲಕನ ಹೆಸರು, ಚಾಲಕನ ಡ್ರೈವಿಂಗ್ ಲೈಸನ್ಸ್ ಮಾಹಿತಿಗಳನ್ನು ದಾಖಲಿಸಿ ನೋಂದಣಿ ಮಾಡಿಕೊಳ್ಳಬೇಕು” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ರಾಮೇಶ್ವರಂ ಕೆಫೆ | ಎನ್‌ಐಎ, ಐಬಿಗೆ ಸ್ಪೋಟದ ಬಗ್ಗೆ ಮಾಹಿತಿ: ಅಲೋಕ್ ಮೋಹನ್
“ಪೋರ್ಟಲ್ ಮೂಲಕ ಪಡೆಯಲಾಗಿರುವ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ವಾಹನ ಚಾಲಕರೊಂದಿಗೆ ಇರಬೇಕು” ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಲ್ಕರ್ ವಿಕಾಸ್ ಕಿಶೋರ್ ರವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.