ಬಿಬಿಎಂಪಿ | ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರ ಹೆಸರು ಪ್ರಕಟ

Date:

Advertisements

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಸುಸ್ತಿದಾರರ ಪಟ್ಟಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಿಡುಗಡೆ ಮಾಡಿದೆ. 400 ತೆರಿಗೆ ಸುಸ್ತಿದಾರರಿಂದ ಬರೋಬ್ಬರಿ ₹130.79 ಕೋಟಿ ಹಣ ಬಿಬಿಎಂಪಿಗೆ ತೆರಿಗೆ ರೂಪದಲ್ಲಿ ಬರಬೇಕಿದೆ.

ನಗರದ ಪ್ರತಿಷ್ಠಿತ ಸಂಸ್ಥೆಗಳಾದ ರಹೇಜಾ ಹೋಟೆಲ್‌, ಮಾನ್ಯತಾ ಪ್ರಮೋಟರ್ಸ್, ಬ್ರಿಗೇಡ್‌ ಫೌಂಡೇಷನ್‌ ಸೇರಿದಂತೆ ಶಿಕ್ಷಣ ಸಂಸ್ಥೆಗಳು, ಚಾರಿಟಬಲ್‌ ಟ್ರಸ್ಟ್‌ಗಳು, ಡೆವಲಪರ್‌ಗಳು ಲಕ್ಷಾಂತರ ರೂಪಾಯಿ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದಾರೆ.

₹4 ಸಾವಿರ ಕೋಟಿಗೂ ಅಧಿಕ ಆಸ್ತಿ ತೆರಿಗೆ ವಸೂಲಿ ಮಾಡುವ ಗುರಿ ಹಾಕಿಕೊಂಡಿರುವ ಬಿಬಿಎಂಪಿ ಈಗಾಗಲೇ ಸುಸ್ತಿದಾರರಿಗೆ ನೋಟಿಸ್‌ ನೀಡಿ ಆಸ್ತಿಗಳನ್ನು ಸೀಜ್‌ ಮಾಡುತ್ತಿದೆ. ಇದೀಗ, ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ವಲಯವಾರು ಟಾಪ್‌ 50 ಸುಸ್ತಿದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Advertisements

ಆಯಾ ವಲಯ ಕಚೇರಿಯ ಘಲಕಗಳಲ್ಲಿ ಹಾಗೂ ಬಿಬಿಎಂಪಿಯ ವೆಬ್‌ ಸೈಟ್‌ನಲ್ಲಿ https://bbmptax.karnataka.gov.in/documents/Top50TaxDefaulterslistofallZones.pdf ಟಾಪ್‌ 50 ಮಂದಿ ಸುಸ್ತಿದಾರರ ಪಟ್ಟಿ ಪ್ರಕಟಿಸಿದೆ.

“ಅತಿ ಹೆಚ್ಚು ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವ ಎಲ್ಲ ಆಸ್ತಿ ಮಾಲೀಕರಿಗೂ ನೋಟಿಸ್‌ ಜಾರಿ ಮಾಡಲಾಗಿದೆ. ಇದಕ್ಕೆ ಸ್ಪಂದಿಸದ ಎಲ್ಲ ಆಸ್ತಿಗಳಿಗೂ ಫಾರ್ಮ್‌ 13 ಜಾರಿ ಮಾಡಿ, ಉಪ ನೋಂದಣಾಧಿಕಾರಿ ಕಚೇರಿಯ ದಾಖಲೆಗಳಲ್ಲಿ ಬಿಬಿಎಂಪಿ ಹೆಸರನ್ನು ಸೇರಿಸುವ ‘ಅಟ್ಯಾಚ್‌’ ಪ್ರಕ್ರಿಯೆ ಆರಂಭಿಸಲಾಗಿದೆ” ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.

  • ಪಶ್ಚಿಮ ವಲಯ: ₹35.78 ಕೋಟಿ
  • ಬೊಮ್ಮನಹಳ್ಳಿ ವಲಯ: ₹31.80 ಕೋಟಿ
  • ದಾಸರಹಳ್ಳಿ ವಲಯ: ₹25.10 ಕೋಟಿ
  • ದಕ್ಷಿಣ ವಲಯ: ₹12.55 ಕೋಟಿ
  • ಮಹದೇವಪುರ ವಲಯ: ₹8.69 ಕೋಟಿ
  • ಪೂರ್ವ ವಲಯ: ₹8.54 ಕೋಟಿ
  • ರಾಜರಾಜೇಶ್ವರಿನಗರ ವಲಯ: ₹8.33 ಕೋಟಿ
  • ಯಲಹಂಕ ವಲಯ; ₹7.22 ಕೋಟಿ

ಪಶ್ಚಿಮ ವಲಯ

ಅಭಿಷೇಕ್ ಡೆವಲಪರ್ಸ್ (₹33.88 ಕೋಟಿ), ಶ್ರೀನಿವಾಸ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (₹11.59 ಕೋಟಿ), ಪ್ರಮೀಳಾ ಸಂತೋಷ್‌ ಲ್ಯಾಂಡ್ ಡೆವಲಪರ್ಸ್‌ (₹26.58 ಲಕ್ಷ), ಗೋಧಾ ಕೃಷ್ಣ ಪ್ರಸಾದ್‌ (₹19 ಲಕ್ಷ), ಗೋಕುಲ ಎಜುಕೇಷನ್‌ ಫೌಂಡೇಷನ್‌ (₹16.91 ಲಕ್ಷ), ಆದರ್ಶ ವಿದ್ಯಾ ಸಂಸ್ಥೆ (₹16.83 ಲಕ್ಷ), ಶ್ರೀರಾಮ ಮಂದಿರ (₹15.49 ಲಕ್ಷ), ಶ್ರೀರಾಮಕೃಷ್ಣ ಹೋಟೆಲ್‌ (₹14.21 ಲಕ್ಷ), ಶ್ರೀರಂಗನಾಥ ಟಾಕೀಸ್‌ (₹14.13 ಲಕ್ಷ), ಗೋಕುಲ ಶಿಕ್ಷಣ ಫೌಂಡೇಷನ್‌ (₹12.42 ಲಕ್ಷ).

ಈ ಸುದ್ದಿ ಓದಿದ್ದೀರಾ? ಅನ್ನ, ಆರೋಗ್ಯ, ಆಶ್ರಯ, ಅಕ್ಷರವೇ ನಮ್ಮ ಸರ್ಕಾರದ ಮೂಲಮಂತ್ರ: ಸಿಎಂ ಸಿದ್ಧರಾಮಯ್ಯ

ದಾಸರಹಳ್ಳಿ ವಲಯ

ಟಿ.ಎನ್.ವೆಂಕಟೇಶ್ ಮತ್ತು ವಿ.ಪುಷ್ಪಕುಮಾರಿ (₹11.51 ಕೋಟಿ), ಶ್ರೀನಿವಾಸ್‌ ಎಜುಕೇಷನ್‌ ಅಂಡ್‌ ಚಾರಿಟೇಬಲ್‌ ಟ್ರಸ್ಟ್‌ (₹11.59 ಕೋಟಿ), ಸಿ.ಬಿ.ಶಂಕರೇಗೌಡ (₹14.98 ಲಕ್ಷ ), ಪಿ.ಮಂಜಪ್ಪ (₹7.02 ಲಕ್ಷ), ಸೌಂದರ್ಯ ಶಿಕ್ಷಣ ಟ್ರಸ್ಟ್ (₹6.08 ಲಕ್ಷ ), ಅಜಿತ್ ಕುಮಾರ್‌ ಬಾಳಾ ಸಾಹೇಬ (₹8.66 ಲಕ್ಷ), ಡಾ। ಟಿ.ಸಿ.ಕಾಶಿವಿಶ್ವನಾಥನ್‌ (₹16.11 ಲಕ್ಷ), ಪಿಕೆಎಂ ಎಜುಕೇಷನ್‌ ಟ್ರಸ್ಟ್ (₹2.68 ಲಕ್ಷ), ಎನ್‌. ಗಂಗನರಸಯ್ಯ (₹7.64 ಲಕ್ಷ).

ಪೂರ್ವ ವಲಯ

GSTAAD ಹೋಟೆಲ್ಸ್ ಪ್ರೈ. ಲಿಮಿಟೆಡ್ (₹2.75 ಕೋಟಿ), ಜಿಎಸ್‌ಟಿಎಎಡಿ ಹೋಟೆಲ್‌ (₹2.75 ಕೋಟಿ), ಕೆ.ರಹೇಜ್‌ ಹೋಟೆಲ್ (₹36.45 ಲಕ್ಷ), ಸೋಮೇಶ್ವರ ಬಿಲ್ಡರ್ಸ್‌ (₹19.32 ಲಕ್ಷ), ಆನಂದ್‌ ಸಾಮಾಜಿಕ ಮತ್ತು ಶಿಕ್ಷಣ ಟ್ರಸ್ಟ್‌ (₹17.98 ಲಕ್ಷ), ಹೋಟೆಲ್‌ ಅಜಂತ (₹17.91 ಲಕ್ಷ), ಎಚ್‌.ಮುರಳಿಧರ (₹16.49 ಲಕ್ಷ), ಎಂ.ಎನ್‌.ಗೋಪಾಲಕೃಷ್ಣ (₹16.01 ಲಕ್ಷ), ಎಸ್‌.ಸೌಭಾಗ್ಯ ಲಕ್ಷ್ಮಿ (₹15.93 ಲಕ್ಷ), ಜಯಂತಿ ಶಾಮ್‌ (₹15.54 ಲಕ್ಷ), ಮಲ್ಲೂರು ಪ್ಲೋರಾ ಸಂಸ್ಥೆ (₹15.33 ಲಕ್ಷ).

ಮಹದೇವಪುರ ವಲಯ

ಬ್ರಿಗೇಡ್ ಫೌಂಡೇಶನ್ (₹1.46 ಕೋಟಿ), ರಾಜರಾಜೇಶ್ವರಿನಗರ ವಲಯ ಸೌಜನ್ಯ ಪಟೇಲ್ ಟ್ರಸ್ಟ್  (₹1.14 ಕೋಟಿ), ಜ್ಞಾನಸ್ವೀಕಾರ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಹೆಚ್.ಡಿ. ದಕ್ಷಿಣ ವಲಯ ಬಾಲಕೃಷ್ಣೇಗೌಡ (₹ 1.11 ಕೋಟಿ) ದಕ್ಷಿಣ ವಲಯದ ಮಾಗಡಿ ಮುಖ್ಯ ರಸ್ತೆಯಲ್ಲಿನ ಗಂಗಾಧರ್ ಟಿ (₹ 1.85 ಕೋಟಿ) ಹಾಗೂ ಬ್ರಿಗೇಡ್‌ ಫೌಂಡೇಷನ್‌ (₹1.46 ಕೋಟಿ), ಸ್ಟೀವರ್ಡ್‌ ಅಸೋಸಿಯೇಷನ್‌ ಇನ್‌ ಇಂಡಿಯಾ (₹72.63 ಲಕ್ಷ), ಎನ್‌.ಎಸ್‌.ನಂದೀಶ್‌ (₹37.88 ಲಕ್ಷ), ಜಿ.ರಾಜು ಮತ್ತು ಇತರರು (₹35.24 ಲಕ್ಷ), ಆರ್. ಬೋಪಾಲರೆಡ್ಡಿ (₹34.62 ಲಕ್ಷ), ಎನ್.ಚಿಕ್ಕೇಗೌಡ (₹28.05 ಲಕ್ಷ), ಹಾರ್ವೆಸ್ಟ್‌ ಹೋಟೆಲ್ಸ್‌ (₹27.54 ಲಕ್ಷ), ಸವಿತಾರಾಮ್‌ (₹26.82 ಲಕ್ಷ), ನರಸಿಂಹರೆಡ್ಡಿ (₹26.76 ಲಕ್ಷ), ಸ್ಟರ್ಲಿಂಗ್‌ ಅರ್ಬನ್‌ ಇನ್ಫ್ರಾ ಪ್ರಾಜೆಕ್ಟ್‌ (₹25.23 ಲಕ್ಷ).

ಯಲಹಂಕ ವಲಯ

ಮಾನ್ಯತಾ ಪ್ರೋ ಮೋಟರ್ಸ್‌ (₹1.89 ಕೋಟಿ), ರುಕ್ಮಿಣಿ ಎಜುಕೇಷನ್‌ ಬಾರಿಟೇಬಲ್‌ ಟ್ರಸ್ಟ್‌ (₹1.58 ಕೋಟಿ), ಬಿ.ಸುನಿತಾ (₹18.04 ಲಕ್ಷ), ಕೆ.ಪದ್ಮನಾಭಯ್ಯ (₹17.02 ಲಕ್ಷ), ಎಚ್‌ಕೆಇಎಸ್‌ ಟ್ರಸ್ಟ್ (₹15.09 ಲಕ್ಷ), ಎ.ಎಚ್‌.ಮೆಮೋರಿಯಲ್‌ ಎಜುಕೇಷನ್‌ ಟ್ರಸ್ಟ್ (₹13.64 ಲಕ್ಷ), ಡಾ। ಬಿ.ಆರ್‌.ಶೆಟ್ಟಿ (₹13.27 ಲಕ್ಷ), ಶ್ರೀ ಶಾರದಾ ವಿದ್ಯಾನಿಕೇತನ (₹12.68 ಲಕ್ಷ), ಅಬ್ದುಲ್‌ ಅಜೀಬ್‌ ಲಾಲ್‌ ಸಾಹೇಬ್‌ (₹12.32 ಲಕ್ಷ), ಸೂರ್ಯ ಡೆವಲಪರ್ಸ್‌ (₹12.20 ಲಕ್ಷ).

ಬೊಮ್ಮನಹಳ್ಳಿ

ಲಿಬಲಿಟಿ ರೆಸ್ಟೋರೆಂಟ್‌ (₹19.62 ಲಕ್ಷ), ಬಿ.ಎಂ.ಮುನಿರಾಮರೆಡ್ಡಿ (₹18.58 ಲಕ್ಷ), ಬಾಬಾ ಸಾಹೇಬ್‌ ಅಂಬೇಡ್ಕರ್‌ ಶಿಕ್ಷಣ ಸಂಸ್ಥೆ (₹18.06 ಲಕ್ಷ), ಆರ್‌.ಸದಾಶಿವಶಂಕರ್‌ (₹17.17 ಲಕ್ಷ), ಎಂ.ಕುಮಾರ್‌ (₹16.98 ಲಕ್ಷ ), ಎಂ.ಬಾಬುರೆಡ್ಡಿ (₹16.71 ಲಕ್ಷ), ಗೀತಾ ಬಾಬು ರೆಡ್ಡಿ (₹14.28 ಲಕ್ಷ), ಎನ್‌.ರಘುನಾಥ್‌ (₹13.35 ಲಕ್ಷ), ಯುನಿಸ್‌ ಖಾನ್‌ (₹12.71 ಲಕ್ಷ ),ಬಿ.ಎಂ.ಶ್ರೀನಿವಾಸ್‌ ರೆಡ್ಡಿ (₹10.14 ಲಕ್ಷ).

ಆರ್ಆರ್ನಗರ ವಲಯ

ಸೌಜನ್ಯ ಪಾಟೀಲ್‌ ಟ್ರಸ್ಟ್ (₹1.14 ಕೋಟಿ), ಜ್ಞಾನ ಸ್ವೀಕಾರ ಫೌಂಡೇಷನ್‌ ಮ್ಯಾನೇಜ್‌ಮೆಂಟ್‌ ಟ್ರಸ್ಟ್ (₹1.11 ಕೋಟಿ), ಎಂ.ಮಂಜುನಾಥ್‌ (₹52.08 ಲಕ್ಷ), ಶ್ರೀ ಸಿದ್ಧಗಂಗಾ ಮಠ (₹51.57 ಲಕ್ಷ), ಕಮ್ಮವಾರಿ ಸಂಘದ ಇನ್‌ಸ್ಟಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ (₹47.83 ಲಕ್ಷ), ಆರ್‌.ರಾಜಗೋಪಾಲ ನಾಯ್ಡು (₹44.84 ಲಕ್ಷ ), ಜ್ಞಾನ ಮಿತ್ರ ಎಜುಕೇಷನ್‌ ಸೊಸೈಟಿ (₹41.58 ಲಕ್ಷ), ಷರೀಫ್‌ ಕನ್ಸ್‌ಟ್ರಕ್ಷನ್ಸ್‌ (₹36.01 ಲಕ್ಷ ), ಶರವಣ ಮಿಶ್ರಲೋಹ ಸ್ಟೀಲ್ಸ್‌ (₹26.48 ಲಕ್ಷ), ಸಿ.ಹರೀಶ್‌ (₹23.70 ಲಕ್ಷ).

ದಕ್ಷಿಣ ವಲಯ

ಟಿ.ಗಂಗಾದರ (₹1.85 ಕೋಟಿ), ಒಕ್ಕಲಿಗ ಸಂಘ (₹75.29 ಲಕ್ಷ), ಕೆ.ವಿ.ಶ್ರೀನಿವಾಸ (₹69.05 ಲಕ್ಷ), ನಿರಂಜನ ಕೈಗಾರಿಕಾ ಕೇಂದ್ರ (₹50.46 ಲಕ್ಷ), ಎಂ.ಲಕ್ಷ್ಮಿನಾರಾಯಣ (₹32.30 ಲಕ್ಷ), ಚರ್ಚ್‌ ಆಫ್‌ ಸೌತ್‌ ಇಂಡಿಯಾ (₹20.66 ಲಕ್ಷ), ಎಲ್‌.ಗೋವಿಂದರಾಜ್‌ (₹19.10 ಲಕ್ಷ), ಸೂರ್ಯನಾರಾಯಣರಾವ್‌ (₹17.03 ಲಕ್ಷ), ಶ್ರೀರಾಮ್‌ ಎಂಟರ್‌ ಪ್ರೈಸರ್ಸ್‌ (₹15.13 ಲಕ್ಷ), ಸುರಭಿ ಚಿಟ್ಸ್‌ (₹14.11 ಲಕ್ಷ).

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X