ಬೆಳಗಾವಿ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಅಪಘಾತ ನಡೆದಿದ್ದು, ಐದು ಮಂದಿ ಮೃತಪಟ್ಟ ಘಟನೆ ನಡೆದಿದೆ.
ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ಕಬ್ಬು ಸಾಗಿಸ್ತಿದ್ದ ಟ್ರ್ಯಾಕ್ಟರ್ನ ಟ್ರೈಲರ್ ಬಿದ್ದು ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ.
ಮಾಲಾವ್ವಾ ಐನಾಪುರೆ(61), ಚಂಪಾ ತಳಕಟ್ಟಿ(45) ಹಾಗೂ ಭಾರತಿ ಘಾಟಗೆ (45) ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮತೋರ್ವ ಮಹಿಳೆ ಶೇಡಬಾಳ ಗ್ರಾಮದ ಶೇಖವ್ವಾ ನರಸಾಯಿ ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃಷಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಾಸ್ ಆಗುತ್ತಿರುವಾಗ ಈ ದುರ್ಘಟನೆ ನಡೆದಿದೆ.
ಮತ್ತೊಂದು ಅಪಘಾತದಲ್ಲಿ ಇಬ್ಬರು ಸಾವು
ಕ್ರೂಸರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗರಲಗುಂಜಿ ಬಳಿ ನಡೆದಿದೆ.
ರಾಮಲಿಂಗ ಮುತ್ಗೇಕರ್(20), ಹನುಮಂತ ಪಾಟೀಲ್(20) ಮೃತ ರ್ದುದೈವಿಗಳು. ಬೇಕ್ವಾಡ ಗ್ರಾಮದ ನಿವಾಸಿಗಳಾದ ಯುವಕರು, ನಂದಿಹಾಳ ಗ್ರಾಮಕ್ಕೆ ಸೈನಿಕ ತರಬೇತಿ ಶಾಲೆಗೆ ಹೋಗುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಕುಸಿದ ಅಂತರ್ಜಲ | ಬೇಸಿಗೆಗೂ ಮುನ್ನವೇ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ
ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.