ಲೋಕಸಭಾ ಚುನಾವಣೆ ನಿಮಿತ್ಯ ಚಿಟಗುಪ್ಪಾ ತಾಲೂಕಿನ ಹೊರವಲಯದ ಕೊಡಂಬಲ ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ ಎಸ್‌ಎಸ್‌ಟಿ ತಂಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ಕೃಷಿ ಅಧಿಕಾರಿ ಆನಂದ ತೆಲಂಗ್ (32) ಹೃದಯಘಾತದಿಂದ ಸೋಮವಾರ ಮಧ್ಯಾಹ್ನ ನಿಧನರಾದರು.
ಚಿಟಗುಪ್ಪಾ ಪಟ್ಟಣದ ನಿವಾಸಿಯಾಗಿದ್ದ ಆನಂದ ತೆಲಂಗ ತಾಲೂಕಿನ ನಿರ್ಣಾ ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಕ ಕೃಷಿ ಅಧಿಕಾರಿಯಾಗಿದ್ದರು. ಲೋಕಸಭಾ ಚುನಾವಣೆ ನಿಮಿತ್ಯ ನಿಯೋಜನೆಗೊಂಡಿದ್ದ ಚೆಕ್‌ಪೋಸ್ಟ್‌ನಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 3ರ ಪಾಳಿ ಕರ್ತವ್ಯದಲ್ಲಿದ್ದರು.
ಸೋಮವಾರ ಮಧ್ಯಾಹ್ನ ತೀವ್ರ ತೆರನಾದ ಹೃದಯಘಾತವಾಗಿದೆ. ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಮಧ್ಯಾಹ್ನ1ಗಂಟೆಗೆ ಕೊನೆಯುಸಿರೆಳೆದ್ದಾರೆ ಎಂದು ತಿಳಿದು ಬಂದಿದೆ.