ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ನವೆಂಬರ್ 25 ಮತ್ತು 26ರಂದು ಎರಡು ದಿನ ಕಂಬಳ ಕಾರ್ಯಕ್ರಮ ನಡೆಯಲಿದೆ. ನಗರದ ಅರಮನೆ ಮೈದಾನದಲ್ಲಿ ಕೋಣಗಳ ಓಟ ನಡೆಯಲಿದ್ದು, ಇದನ್ನು ನೋಡಲು 5 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ. ಜತೆಗೆ ಕಾರ್ಯಕ್ರಮದಲ್ಲಿ ಹಲವು ಗಣ್ಯರು, ಸಿನಿ ತಾರೆಯರು, ರಾಜಕಾರಣಿಗಳು ಭಾಗವಹಿಸಲಿದ್ದಾರೆ. ಜತೆಗೆ, ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆ, ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಬೆಂಗಳೂರು ಸಂಚಾರ ಪೊಲೀಸರು ಕೆಲವು ನಿರ್ಬಂಧ ವಿಧಿಸಿದ್ದಾರೆ.
ನ.24 ರಿಂದ ನ.26ರ ವರೆಗೆ ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ (ಸರ್ಕಸ್ ಗ್ರೌಂಡ್‌ನಲ್ಲಿ) “ಬೆಂಗಳೂರು ಕಂಬಳ-ನಮ್ಮ ಕಂಬಳ” ಕಾರ್ಯಕ್ರಮ ನಡೆಯಲಿದೆ. ನ.25 ಹಾಗೂ ನ.26 ರಂದು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ಸಾಧ್ಯತೆ ಇದೆ. ಹಾಗಾಗಿ, ಬೆಂಗಳೂರು ಸಂಚಾರ ಪೊಲೀಸರು ಕೆಲವು ಮಾರ್ಗಗಳಿಗೆ ನಿರ್ಬಂಧ ವಿಧಿಸಿದ್ದಾರೆ.
ಕಾರ್ಯಕ್ರಮಕ್ಕೆ ಪ್ರವೇಶ
- ನಗರದ ಸಿಬಿಡಿ ಏರಿಯಾದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ಮೇಖ್ರಿ ಸರ್ಕಲ್ ಬಳಿ ತಿರುವು ಪಡೆದು ಮೇಖ್ರಿ ಸರ್ಕಲ್ ಗೇಟ್ ನಂ-01 (ಕೃಷ್ಣವಿಹಾರ್) ರಲ್ಲಿ ಪ್ರವೇಶಿಸಿ, ವಾಹನಗಳನ್ನು ಪಾರ್ಕ್ ಮಾಡಿ ನಂತರ ಕಾರ್ಯಕ್ರಮದ ಸ್ಥಳವನ್ನು ನಡೆದು ತಲುಪುವುದು.
- ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವ ವಾಹನಗಳು ಮೇಖ್ರಿ ಸರ್ಕಲ್ ಅಂಡರ್ ಪಾಸ್‌ನಲ್ಲಿ ಬಂದು ಗೇಟ್ ನಂ-01 ಕೃಷ್ಣವಿಹಾರ್ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾರ್ಯಕ್ರಮದ ಸ್ಥಳವನ್ನು ನಡೆದು ತಲುಪುವುದು.
- ಯಶವಂತಪುರ ಕಡೆಯಿಂದ ಬರುವ ವಾಹನಗಳು ಜಂಕ್ಷನ್-ಮೇಖ್ರಿ ಸರ್ಕಲ್ ಬಲ ತಿರುವು ಪಡೆದು ಗೇಟ್ ನಂ-01 ಕೃಷ್ಣ ವಿಹಾರ್ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾರ್ಯಕ್ರಮದ ಸ್ಥಳವನ್ನು ನಡೆದು ತಲುಪುವುದು.
- ಕ್ಯಾಬ್ ಸೇವೆಯನ್ನು ಬಳಸಿಕೊಳ್ಳುವವರು ಗೇಟ್ ನಂ-2ರಲ್ಲಿ ಪ್ರವೇಶಿಸಿ ನಿಗದಿತ ಸ್ಥಳದಲ್ಲಿ ಇಳಿದು ಗೇಟ್ ನಂ-03 ಮುಖಾಂತರ ಕ್ಯಾಬ್‌ಗಳು ನಿರ್ಗಮಿಸಬಹುದಾಗಿದೆ.
- ಹಿಂತಿರುಗಿ ಹೋಗುವಾಗ ಎಲ್ಲ ವಾಹನಗಳು ಕಡ್ಡಾಯವಾಗಿ ಜಯಮಹಲ್ ರಸ್ತೆಯ ಅಮಾನುಲ್ಲಾ ಖಾನ್ ಗೇಟ್ ಮುಖಾಂತರ ನಿರ್ಗಮಿಸಬೇಕು.
- ಕಾರ್ಯಕ್ರಮವನ್ನು ಹೊರತುಪಡಿಸಿ, ಇತರೆ ಸ್ಥಳಗಳಿಗೆ ಹೋಗುವ ರಸ್ತೆ ಬಳಕೆದಾರರು ಈ ಕೆಳಕಂಡ ರಸ್ತೆಗಳನ್ನು ಬಳಸದೇ ಬದಲಿ ಮಾರ್ಗದಲ್ಲಿ ಸಂಚರಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಕೋರಿದ್ದಾರೆ.
ವಾಹನ ನಿಲುಗಡೆ ಸ್ಥಳ
- ಅರಮನೆ ರಸ್ತೆ: ಮೈಸೂರು ಬ್ಯಾಂಕ್ ವೃತ್ತದಿಂದ ವಸಂತನಗರ ಅಂಡರ್ ಪಾಸ್ ವರೆಗೆ.
- ಎಂವಿ ಜಯರಾಮ್ ರಸ್ತೆ: ಬಿಡಿಎ ಜಂಕ್ಷನ್ ಅರಮನೆ ರಸ್ತೆಯಿಂದ ಚಕ್ರವರ್ತಿ ಲೇಔಟ್‌ನಿಂದ ವಸಂತನಗರ ಅಂಡರ್‌ಪಾಸ್‌ನಿಂದ ಹಳೆ ಉದಯ ಟಿವಿ ಜಂಕ್ಷನ್‌ವರೆಗೆ. (ಎರಡೂ ದಿಕ್ಕುಗಳು)
- ಬಳ್ಳಾರಿ ರಸ್ತೆ: ಮೇಖ್ರಿ ವೃತ್ತದಿಂದ ಎಲ್‌ಆರ್‌ಡಿಇ ಜಂಕ್ಷನ್‌ವರೆಗೆ.
- ಕನ್ನಿಂಗ್‌ಹ್ಯಾಮ್ ರಸ್ತೆ: ಬಾಳೆಕುಂದ್ರಿ ಜಂಕ್ಷನ್‌ನಿಂದ ಲೆ ಮೆರಿಡಿಯನ್ ಅಂಡರ್‌ಪಾಸ್‌ವರೆಗೆ.
- ಮಿಲ್ಲರ್ಸ್ ರಸ್ತೆ: ಹಳೆ ಉದಯ ಟಿವಿ ಜಂಕ್ಷನ್‌ನಿಂದ ಎಲ್‌ಆರ್‌ಡಿಇ ಜಂಕ್ಷನ್‌ವರೆಗೆ.
- ಜಯಮಹಲ್ ರಸ್ತೆ: ಬೆಂಗಳೂರಿನ ಸುತ್ತಮುತ್ತಲಿನ ರಸ್ತೆಗಳು ಸೇರಿದಂತೆ ಜಯಮಹಲ್ ರಸ್ತೆ
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಡಿಸಿಪಿ ಕಚೇರಿ ಎದುರು ಯುವತಿಗೆ ಕಿರುಕುಳ; ಯುವಕನ ಬಂಧನ
ಈ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ
ಅರಮನೆ ರಸ್ತೆ, ಜಯಮಹಲ್ ರಸ್ತೆ, ಎಂ.ವಿ.ಜಯರಾಮ್ ರಸ್ತೆ, ಸಿ.ವಿ.ರಾಮನ್ ರಸ್ತೆ, ವಸಂತನಗರ ರಸ್ತೆ, ಬಳ್ಳಾರಿ ರಸ್ತೆ, ತರಳಬಾಳು ರಸ್ತೆ, ರಮಣ ಮಹರ್ಷಿ ರಸ್ತೆ, ನಂದಿದುರ್ಗ ರಸ್ತೆ, ಮೌಂಟ್ ಕಾರ್ಮೆಲ್ ಕಾಲೇಜು ರಸ್ತೆ.
ನಗರದ ಮಧ್ಯ ಭಾಗದಲ್ಲಿ ದಟ್ಟಣೆ ಉಂಟಾಗದಂತೆ ಬೆಳಗ್ಗೆ ಮತ್ತು ಸಂಜೆ ವೇಳೆ ಭಾರೀ ವಾಹನಗಳ ಸಂಚಾರವನ್ನು ಸಹ ನಿಷೇಧಿಸಲಾಗಿದೆ. ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ಮೊದಲ ನಮ್ಮ ಕಂಬಳ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲು ಎಲ್ಲ ವ್ಯವಸ್ಥೆಗಳನ್ನು ಮಾಡಿದೆ.
‘ಸಂಚಾರ ಸಲಹೆ’
‘Traffic Advisory’ pic.twitter.com/SZMMNWs3ND— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) November 23, 2023