ಚೈತ್ರಾ ಪ್ರಕರಣ | ಸಮಗ್ರ ತನಿಖೆ ನಡೆಸಿ, ಕಾಣದ ಕೈ ಪತ್ತೆ ಹಚ್ಚಲು ಜನಪರ ಸಂಘಟನೆಗಳ ಆಗ್ರಹ

Date:

Advertisements

ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ, 5 ಕೋಟಿ ರೂ. ವಂಚಿಸಿರುವ ಚೈತ್ರಾ ಕುಂದಾಪುರ ಪ್ರಕರಣವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ, ಎಲ್ಲ ಆಯಾಮಗಳಲ್ಲೂ ಸಮಗ್ರ ತನಿಖೆ ನಡೆಸಬೇಕು ಎಂದು ಜನಪರ ಸಂಘಟನೆಗಳು ಆಗ್ರಹಪಡಿಸಿವೆ.

ಬೆಂಗಳೂರಿನ ಕೆ ಆರ್ ಸರ್ಕಲ್ ಬಳಿ ಇರುವ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಆಗ್ರಹ ಸಭೆಯಲ್ಲಿ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಗಿದೆ.

ಸಭೆಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ, ಚೈತ್ರಾ ಕುಂದಾಪುರ ಪ್ರಕರಣ ಕೇವಲ ಹಣಕಾಸಿನ ವಂಚನೆ ಪ್ರಕರಣವಲ್ಲ‌. ರಾಜಕೀಯ, ಸಾಮಾಜಿಕವಾಗಿ ಕೆಟ್ಟ ಪರಿಣಾಮಗಳುಳ್ಳ ಪ್ರಕರಣ. ಹಾಗಾಗಿ ಇದರ ಸಮಗ್ರ ತನಿಖೆಯಾಗಬೇಕು. ಇದರ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಹಚ್ಚಲು ಸರ್ಕಾರ ಮುತುವರ್ಜಿ ವಹಿಸಬೇಕು ಎಂದು ಆಗ್ರಹಿಸಿದರು.

Advertisements
WhatsApp Image 2023 09 20 at 8.37.41 PM

ಚುನಾವಣೆಯ ಸಂದರ್ಭದಲ್ಲಿ ಮತಕ್ಕಾಗಿ ಚೈತ್ರಾ ಕುಂದಾಪುರ ಅವರನ್ನು ಬಳಸಿಕೊಂಡು ಸಂಘಪರಿವಾರ ಹಾಗೂ ಬಿಜೆಪಿ ದ್ವೇಷ ಭಾಷಣ ಮಾಡಿಸಿದ್ದಾರೆ. ಆಕೆಯ ದ್ವೇಷ ಭಾಷಣದ ಪ್ರಭಾವ ಸಮಾಜದಲ್ಲಿ ಕೆಟ್ಟ ಪರಿಣಾಮ ಬೀರಿದೆ. ಆಕೆಯನ್ನು ಕಾಳಿ ಮಾತೆ ಎಂದೆಲ್ಲಾ ಬಿರುದು ಕೊಟ್ಟು, ಆಕೆಯ ಫೋಟೋ ಇರುವ ಸ್ಟಿಕ್ಕರ್ ಮಾಡಿಸಿ, ಯುವಕರ ಬೈಕ್‌ಗಳಲ್ಲಿ ಅಂಟಿಸುವಂತೆ ಮಾಡಿರುವುದು ಶೋಭಾ ಕರಂದ್ಲಾಜೆಯಂತಹ ಕೇಂದ್ರದ ಮಂತ್ರಿಗಳು. ಈಗ ಪ್ರಕರಣದಲ್ಲಿ ಸಿಕ್ಕಿಬಿದ್ದಾಗ ತಮಗೆ ಚೈತ್ರಾ ಕುಂದಾಪುರ ಪರಿಚಯ ಇಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಬಿಜೆಪಿಯವರು ನಮಗೂ ಆಕೆಗೂ ಸಂಬಂಧವಿಲ್ಲ, ಆಕೆ ಯಾರೂ ಅಂತ ಗೊತ್ತಿಲ್ಲ ಎಂದು ಹೇಳುತ್ತಿರುವುದು ಪ್ರಕರಣದ ಬಗ್ಗೆ ಇನ್ನಷ್ಟು ಅನುಮಾನ ಹುಟ್ಟುಹಾಕಿದೆ‌ ಎಂದು ಹೇಳಿದರು

ಈ ಸುದ್ದಿ ಓದಿದ್ದೀರಾ? ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ

ಹೈಕೋರ್ಟ್ ನ್ಯಾಯವಾದಿ ಎಸ್ ಬಾಲನ್ ಮಾತನಾಡಿ, ಬಿಜೆಪಿ ಅಂದರೆ ಬಿಸಿನೆಸ್ ಜನತಾ ಪಾರ್ಟಿ. ವಂಚನೆ ಪ್ರಕರಣದಲ್ಲಿ ಸಿಲುಕಿದವರ ಮೇಲೆ ಯುಎಪಿಎ ಹಾಕಬೇಕಿತ್ತು‌‌. ಹೆಸರು ಕೇಳಿ ಬರುತ್ತಿರುವ ಸೂಲಿಬೆಲೆ, ರಾಜಶೇಖರ ಸ್ವಾಮೀಜಿ ಸೇರಿದಂತೆ ಪ್ರತಿಯೊಬ್ಬರ ಬಗ್ಗೆಯೂ ತನಿಖೆ ಆಗಬೇಕು. ಬ್ರೈನ್ ಮ್ಯಾಪಿಂಗ್ ಆಗಬೇಕು. ಯಾಕೆಂದರೆ ಇವರು ರಾಜಕೀಯವನ್ನು ‘ಕ್ರಿಮಿನಲೈಝೇಶನ್’ ಮಾಡಿದ್ದಾರೆ ಎಂದು ಹೇಳಿದರು.

WhatsApp Image 2023 09 20 at 8.37.41 PM 1

ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ದೇಶಭಕ್ತಿಯ ಹೆಸರಿನಲ್ಲಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಲೂಟಿಕೋರ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದಾರೆ‌. ಸರ್ಕಾರ ಬದಲಾದರೂ ನಮ್ಮ ವ್ಯವಸ್ಥೆಯ ಒಳಗೆ ತುಂಬಾ ಮಂದಿ ಆರ್ ಎಸ್ ಎಸ್ ಹಾಗೂ ಅದರ ಬೆಂಬಲಿಗರು ಇದ್ದಾರೆ‌. ಹಾಗಾಗಿ, ತನಿಖೆ ಸರಿಯಾದ ರೀತಿಯಲ್ಲಿ ಸಾಗಬೇಕಾದರೆ ಸರ್ಕಾರವೇ ಮುಂದಾಗಬೇಕು. ಎಲ್ಲ ಬೇನಾಮಿ ಆಸ್ತಿಗಳ ಬಗ್ಗೆಯೂ ತನಿಖೆ ಆಗಬೇಕು. ಪ್ರಕರಣ ಹಳ್ಳ ಹಿಡಿಯದಿರಲು, ಸರಿಯಾದ ರೀತಿಯಲ್ಲಿ ದೋಷಾರೋಪಣೆ ಸಾಬೀತು ಪಡಿಸಲು ಪೊಲೀಸರು ಪ್ರಯತ್ನ ಮಾಡಬೇಕು. ದೇಶಭಕ್ತಿ ಹಾಗೂ ಸೇವೆಯ ಹೆಸರಿನಲ್ಲಿ ವ್ಯವಸ್ಥಿತ ಲೂಟಿ ಮಾಡುತ್ತಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು‌.

ಯುವ ಮುಖಂಡ ಸಾ ರಾ ಮಹೇಶ್, ಸರ್ಕಾರ ಆದ್ಯತೆಯ ಮೇರೆಗೆ ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು.‌ ಜನರ ನಡುವೆ ಅನುಮಾನಗಳನ್ನು ಹುಟ್ಟು ಹಾಕುವ ಬೆಳವಣಿಗೆ ಈ ಪ್ರಕರಣದಲ್ಲಿ ನಡೆಯಬಾರದು. ಸಂಪೂರ್ಣವಾದ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

WhatsApp Image 2023 09 20 at 8.37.40 PM 1

ಖ್ಯಾತ ಸಾಮಾಜಿಕ ಚಿಂತಕ ಶಿವಸುಂದರ್ ಮಾತನಾಡಿ, ಬಿಜೆಪಿ ಮತ್ತು ಸಂಘಪರಿವಾರದ ರಾಜಕಾರಣ ಸ್ವಚ್ಛ ರಾಜಕಾರಣ ಅಲ್ಲ. ಅದೊಂದು ಕೊಳಕು ರಾಜಕಾರಣ ಸಂಸ್ಕೃತಿ.‌ ಹಾಗಾಗಿ, ದ್ವೇಷದ ಹೆಸರಿನಲ್ಲಿ ಮಾಡುತ್ತಿರುವ ರಾಜಕಾರಣದ ಒಂದು ಪ್ರಕರಣ ಚೈತ್ರಾ ಕುಂದಾಪುರ ಪ್ರಕರಣ. ಹಾಗಾಗಿ, ಇವರ ಡೋಂಗಿಗಳನ್ನು ಜನರ ಮುಂದೆ ತೆರೆದಿಡಲು ಸರ್ಕಾರಕ್ಕೆ ಇದು ಉತ್ತಮ ಅವಕಾಶ. ಇದನ್ನು ಜನರಿಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು.

ಕನ್ನಡ ಪರ ಹೋರಾಟಗಾರ ಭೈರಪ್ಪ ಹರೀಶ್ ಕುಮಾರ್ ಮಾತನಾಡಿ, ಸರಿಯಾದ ರೀತಿಯಲ್ಲಿ ತನಿಖೆ ನಡೆಯಬೇಕು. ಸಮಾಜಘಾತಕರನ್ನು ಬಗ್ಗುಬಡಿಯಬೇಕು. ಯಾಕೆಂದರೆ ಪುನೀತ್ ಕೆರೆಹಳ್ಳಿ ಬಿಡುಗಡೆ ಪ್ರಕರಣ ಜನರಲ್ಲಿ ಅನುಮಾನ ಹುಟ್ಟುಹಾಕಿದೆ. ಹಾಗಾಗಿ, ಚೈತ್ರಾ ಕುಂದಾಪುರ ಪ್ರಕರಣ ಸಣ್ಣದಲ್ಲ. ಅದರ ಹಿಂದಿರುವ ಪ್ರಮುಖ ಜಾಡನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಬಯಲಿಗೆಳೆಯಬೇಕು ಎಂದು ತಿಳಿಸಿದರು‌.

WhatsApp Image 2023 09 20 at 8.37.40 PM

ಜನಪರ ಹೋರಾಟಗಾರ್ತಿ ಕೆ ಎಸ್ ವಿಮಲಾ ಮಾತನಾಡಿ, ಬಹುಕೋಟಿ ವಂಚಿಸಿರುವ ಚೈತ್ರಾ ಕುಂದಾಪುರ ಪ್ರಕರಣ ಬಹಳ ಗಂಭೀರವಾದದ್ದು‌.‌ ಈಕೆಯಂತೆ ದ್ವೇಷ ಭಾಷಣ ಮಾಡುವವರ ಮೇಲೆ ಕಠಿಣ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕಿದೆ. ಆ ಮೂಲಕ ರಾಜಕೀಯ ಇಚ್ಛಾಶಕ್ತಿ ತೋರಬೇಕು. ಕೋಮುವಾದವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇದ್ದರೆ ಜನರಲ್ಲಿ ಜಾಗೃತಿ ಮೂಡಿಸುವ ಚಳವಳಿ ಹಮ್ಮಿಕೊಳ್ಳಲು ಕೂಡ ಸಂಘಟನೆಗಳು ಒಂದಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಪ್ರಗತಿಪರ ಚಿಂತಕ ಸಿರಿಮನೆ ನಾಗರಾಜ್‌, ರಮೇಶ್‌, ಸೂರ್ಯ ಮುಕುಂದರಾಜ್ ಮತ್ತಿತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಟ್ರಾಫಿಕ್ ದಂಡಗಳಿಗೆ ಶೇ. 50 ರಿಯಾಯಿತಿ: ಬೆಂಗಳೂರು ಸಂಚಾರ ಪೊಲೀಸರ ಘೋಷಣೆ

ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಗುರುವಾರ ಬಾಕಿ ಇರುವ ಟ್ರಾಫಿಕ್ ದಂಡಗಳ...

Download Eedina App Android / iOS

X