ದಾವಣಗೆರೆ | ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯಲು ದಾವಣಗೆರೆ ತಂಜೀಮುಲ್ ಮುಸ್ಲಿಮೀನ್ ಮುಸ್ಲಿಂ ಒಕ್ಕೂಟ ಮಾನವ ಸರಪಳಿ ರಚಿಸಿ ಫ್ರತಿಭಟನೆ

Date:

Advertisements

ಕೇಂದ್ರ ಸರ್ಕಾರ ತಂದಿರುವ 2025ರ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ, ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕಾನೂನು ಹೋರಾಟ ಮಾಡಿಕೊಂಡು ಬಂದಿದೆ. ಇದರ ಬೆಂಬಲವಾಗಿ 2025, ಜುಲೈ 4 ರಂದು ಶುಕ್ರವಾರ ಪ್ರಾರ್ಥನೆ ನಂತರ ರಾಷ್ಟ ವ್ಯಾಪಿ ಮಾನವ ಸರಪಳಿ ನಿರ್ಮಿಸಿ ಹೋರಾಟಕ್ಕೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ದಾವಣಗೆರೆ ತಂಜೀಮುಲ್ ಮುಸ್ಲಿಮೀನ್, ಮುಸ್ಲಿಂ ಒಕ್ಕೂಟದ ಸದಸ್ಯರು ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ, ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ದಾವಣಗೆರೆಯಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.

1002268340
Oplus_131072

ಹಳೇ ದಾವಣಗೆರೆಯ ಚಾರ್ಲಿ ಪೈಲ್ವಾನ್ ಆಟೋ ನಿಲ್ದಾಣದಿಂದ ಎಸ್ ಎಸ್ ಎಂ ನಗರದ ಹೊಸ ಖಬರ್ಸ್ಥಾನ್ ವರೆಗೆ ಮಾನವ ಸರಪಳಿ ರಚಿಸಿ ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯಲು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ದಾವಣಗೆರೆ ಮುಸ್ಲಿಂ ಒಕ್ಕೂಟದ ಸಂಚಾಲಕರಾದ ಟಿ.ಅಸ್ಗರ್, ‘‘ವಕ್ಫ್ ಆಸ್ತಿ ನಮ್ಮ ಪೂರ್ವಜರು, ಹಿರಿಯರು ಅಲ್ಲಾಹನನ್ನು ಸಂತೃಪ್ತಪಡಿಸಲು, ಮುಸ್ಲಿಮರ ಸಬಲೀಕರಣಕ್ಕಾಗಿ ದಾನ ಮಾಡಿದ ಜಮೀನಾಗಿದೆ. ವಕ್ಫ್‌ಗೆ ಸೇರಿರುವ ಜಮೀನುಗಳು ಯಾರಿಂದಲೋ ಕಬಳಿಸಿದ ಜಮೀನಲ್ಲ. ಯಾರಿಂದಲೋ ಕಬಳಿಸಿದ ಜಮೀನು ವಕ್ಫ್ ಆಗಲು ಸಾಧ್ಯವೂ ಇಲ್ಲ. ಧರ್ಮದ ಗೋಡೆಯನ್ನು ಬದಿಗಿಟ್ಟು ಎಲ್ಲಾ ಭಾರತೀಯರು ಹೋರಾಟದಲ್ಲಿ ಕೈ ಜೋಡಿಸಬೇಕು” ಎಂದು ಮನವಿ ಮಾಡಿದರು.

1002255978
ವಕ್ಫ್ ತಿದ್ದುಪಡಿ ಕಾಯ್ದೆ 2025 ವಿರೋಧಿಸಿ ಮಾನವ ಸರಪಳಿ ರಚಿಸಿ ಮುಸ್ಲಿಂ ಒಕ್ಕೂಟದ ಹೋರಾಟ

“ಇಂದು ಮುಸ್ಲಿಮರು ಗುರಿಯಾಗಿದ್ದರೆ, ನಾಳೆ ಎಲ್ಲಾ ಶೋಷಿತ, ದಮನಿತ ವರ್ಗಗಳು ಹೆಜ್ಜೆ ಹೆಜ್ಜೆಗೆ ಗುರಿಯಾಗುತ್ತವೆ. ನಮ್ಮ ಹೋರಾಟ ಹಿಂದೂ-ಮುಸ್ಲಿಂ ಹೋರಾಟವಲ್ಲ. ನಮ್ಮ ಹೋರಾಟ ಹಿಂದೂಗಳ ವಿರುದ್ಧವಲ್ಲ. ನಮ್ಮ ಹೋರಾಟ ಸಂವಿಧಾನ ನೀಡಿರುವಂತಹ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕಾಗಿದೆ. ಈ ಕಾಯ್ದೆ ಮುಸ್ಲಿಮರ ಹಿತಕ್ಕೆ ವಿರುದ್ಧವಾಗಿದೆ. ಇದು ಮುಸ್ಲಿಮರ ಜಮೀನು ಕಬಳಿಸುವ ಯತ್ನವಾಗಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಈ ರೀತಿಯ ಕ್ರಮಗಳು ನಮ್ಮ ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ದವಾಗಿದೆ. ನಾವು ಇದನ್ನು ಒಪ್ಪುವುದಿಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದರು.

Advertisements

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಆನ್ಲೈನ್ ಗೇಮಿಂಗ್ ಗೆ ಯುವಕ ಬಲಿ; ಕ್ರಮಕ್ಕೆ ಡೆತ್ ನೋಟಿನಲ್ಲಿ ಸಿಎಂ, ಡಿಸಿಎಂ, ಸಂಸದೆ, ನ್ಯಾಯಾಧೀಶರಿಗೆ ಮನವಿ

“ಸುಪ್ರೀಂ ಕೋರ್ಟ್ ನಲ್ಲಿ ಈಗಾಗಲೇ ಈ ಕಾಯ್ದೆ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತೇವೆ. ದಾವಣಗೆರೆಯಲ್ಲಿ ಇನ್ನೂ ದೊಡ್ಡಮಟ್ಟದ ಹೋರಾಟ ಮಾಡುತ್ತೇವೆ. ಮುಸ್ಲಿಂರ ಹೋರಾಟವನ್ನು ಅರಿತು ಕೇಂದ್ರ ಸರ್ಕಾರ ಜಾರಿಗೆ ತಂದಿರುವ, ಮಾರಕ ವಕ್ಫ್ ತಿದ್ದುಪಡಿ ಕಾಯ್ದೆ 2025ನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.‌

ಮಾನವ ಸರಪಳಿ ಮತ್ತು ಪ್ರತಿಭಟನೆ ಕಾರ್ಯಕ್ರಮದಲ್ಲಿ ಮೌಲಾನಾ ನಾಸಿರ್ ಅಹಮದ್ ,ತಂಜಿಮ್ ಅದ್ಯಕ್ಷರಾದ ಜನಾಬ್ ದಾದು ಸೇಟ್, ಷಂಷುದ್ದೀನ್ ರಜ್ವಿ, ಕಾರ್ಯದರ್ಶಿ ಮಹಮ್ಮದ್ ಜಬಿಉಲ್ಲಾ, ಸಾಬಿರ್ ಅಲಿ , ಖಾದರ್ ಬಾಷ ರಜ್ವಿ, ಶೌಕತ್ ಅಲಿ ವಕೀಲರು, ಮಟನ್ ಮಹಮ್ಮದ್ ಅಲಿ , ಇಮ್ರಾನ್ ರಜಾ, ಜಬಿವುಲ್ಲಾ ವೈ, ಜಬಿ ಟೈಲ್ಸ್, ಸಯ್ಯದ್ ರಫಿಕ್ ಸಾಬ್ , ದಾದಪೀರ್ (ಶೆಕರಪ್ಪ)ಸನಾವುಲ್ಲಾ, ಷನವಾಜ್ ಖಾನ್, ನೂರ್ ಅಹಮದ್ , ಜಾಕಿರ್ ಅರ್ಚನ, ಮುಷ್ತಾಖ್, ಎನ್ ಅರ್ ರಫಿ, ಸಯ್ಯದ್ ಸ್ಯಪುಲ್ಲಾ, ಟ್ರಾನ್ಸ್‌ಪೋರ್ಟ್‌, ಕೆ ಸಿ ಮೊಹಮ್ಮದ್, ಗ್ಯಾರೆಜ್ ಅಷ್ಷು, ಸಯ್ಯದ್ ಇಮ್ತಿಯಾಜ್,( ಚೊಟು ಇಂಜಿನಿಯರಿಂಗ್) ಬೇಗ್, ಸಲಿಂ ಸಾಗರ್, ಮ್ಯಾನೇಜರ್ ಮಹಮ್ಮದ್ ಜಾಬಿರ್ , ಅಬು ಸ್ವಾಲೆಹಾ, ಬರ್ಕತ್ ಹಬಿಬ್

ತಂಜೀಮುಲ್ ಮುಸ್ಲಿಮೀನ್ ಮುಖಂಡರು ಹಾಗೂ ಸದಸ್ಯರು, ನಜೀರ್, ಅಹ್ಮದ್, ತಾಹೀರ್ ಅಹ್ಮದ್, ಮಹಮ್ಮದ್ ಅಲಿ ಶೋಯೇಬ್, ಸಾಜಿದ್ ಅಹ್ಮದ್, ಮಹಮ್ಮದ್ ಅಲ್ತಾಫ್, ರಜ್ವಿ ರಿಯಾಜ್ ಸಾಬ್, ಇಲು, ನೂರ್ ಅಹ್ಮದ್, ಅಹ್ಮದ್ ರಜಾ, ಯು. ಎಂ ಮನ್ಸೂರ್ ಅಲಿ, ಅತೀಕ್ ಹಜರತ್, ನಾಸೀರ್ ಸಿಲಿಂಡರ್, ಅಜ್ಮತ್, ತಮನ ರಫೀಕ್, ಅರಬ್, ಅಸ್ಗರ್ ಹಾಗೂ ಇತರರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

Download Eedina App Android / iOS

X