ನಾನು ಅಂದರೆ ಹಿಂದೂ, ನಾನತ್ವ ಎಂಬುದೇ ಹಿಂದುತ್ವ: ದೇವನೂರ ಮಹಾದೇವ

Date:

Advertisements

“ನಾನು ಎನ್ನುವುದು ಸಹಜ. ಆದರೆ ನಾನತ್ವ ಎಂಬುದು ನನ್ನ ಬಿಟ್ಟರೆ ಬೇರೆ ಯಾರೂ ಇಲ್ಲ ಎಂಬರ್ಥ ಕೊಡುತ್ತದೆ. ಅದರಂತೆ ಹಿಂದೂ ಎಂಬುದು ನಾನು ಅಂದಷ್ಟೆ ಸಹಜ. ಆದರೆ, ಹಿಂದುತ್ವ ಎಂಬುದು ನಾನತ್ವ ಎಂಬುದಕ್ಕೆ ಸಮವಾಗಿದೆ. ಇವತ್ತು ಯಾರಲ್ಲಿ ನಾನು ಎಂಬುದು ಹಾಗೂ ನನ್ನ ಬಿಟ್ಟರೆ ಬೇರೆ ಯಾರು ಇರಬಾರದು ಎಂಬ ಅಹಂಕಾರ ಇದೆಯೋ ಅವರಿಗೆ 2024ನೇಯ ಚುನಾವಣೆಯಲ್ಲಿ ಬರೆಯಾಕಬೇಕಿದೆ” ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಕರೆ ನೀಡಿದರು.

ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ವಿಚಾರ ಕಮ್ಮಟದಲ್ಲಿ ಅವರು ಮಾತನಾಡಿದರು. “ಭಾರತರ ನಿರ್ಣಾಯಕ ಲೋಕಸಭಾ ಚುನಾವಣೆ ನಮ್ಮ ಮುಂದಿದೆ. ನಮ್ಮ ಬುಡಕಟ್ಟು ಜನಾಂಗದವರು ದೇವರನ್ನು ಮೌಲ್ಯಮಾಪನಕ್ಕೆ ಒಳಪಡಿಸುವಂತೆ ನಾವು ಕೂಡ 2024ನೇಯ ಲೋಕಸಭೆಯ ಸಂಸತ್ ಸದಸ್ಯರನ್ನು ಮೌಲ್ಯಮಾಪನ ಮಾಡಿ ಆಯ್ಕೆ ಮಾಡಬೇಕು” ಎಂದು ಹೇಳಿದರು‌.

“ಛತ್ತೀಸ್‌ಗಡದಲ್ಲಿ ಆದಿವಾಸಿ ಜನಾಂಗದವರು ದೇವರುಗಳನ್ನೇ ಮೌಲ್ಯಮಾಪನ ಮಾಡುತ್ತಾರೆ. ನಾವು ಮನುಷ್ಯರನ್ನು ಮೌಲ್ಯಮಾಪನ ಮಾಡುತ್ತಿಲ್ಲ. ಹೀಗಾಗಿ, ಮೌಲ್ಯಮಾಪನದ ಸತ್ವವನ್ನು ನಮ್ಮ ಪೂರ್ವಜರಿಂದ ಕಲಿಯಬೇಕಿದೆ. ಮುಂದಿನ ಚುನಾವಣೆಯಲ್ಲಿ ನಾವೆಲ್ಲ ಎಚ್ಚರಗೊಂಡು ಈಗಲಾದರೂ ಮೌಲ್ಯಮಾಪನ ಮಾಡುವ ಅವಶ್ಯಕತೆ ಇದೆ. ಇಂದರಿಂದ ಶೇ. 90ರಷ್ಟು ಅಸಮರ್ಥರು ಸಂಸತ್ ಭವನದಿಂದ ಹೊರಗೆ ಉಳಿಯಲಿದ್ದಾರೆ” ಎಂದರು.

Advertisements

“ಇಂದಿನ ಜನಸ್ತೋಮ ಮಾಯದ ಬಲೆಯಲ್ಲಿ ಸಿಲುಕಿಕೊಂಡಿದೆ. ಬಿಡಿಸಿಕೊಳ್ಳಲಾಗದ ಮೀನಿನಂತೆ ಒದ್ದಾಡುತ್ತಿದ್ದೇವೆ. ಬಡವ – ಬಲ್ಲಿಗನ ಅಂತರ ಹೆಚ್ಚಾಗಿದೆ. ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಉದ್ಯೋಗ, ಶಿಕ್ಷಣ, ಆರೋಗ್ಯವನ್ನು ಮಾನದಂಡವಾಗಿಸಿ ಈ ಮಾಲ್ಯಮಾಪನದ ಕೆಲಸ ಆಗಲೇ ಬೇಕಿದೆ” ಎಂದು ಹೇಳಿದರು.

“ಸನಾತನ ಧರ್ಮ ಎಂಬುದು ಅನಾದಿ ಕಾಲದಿಂದ ಬಂದಂತಹ ಧರ್ಮ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ, ಇದು ಜಾತಿಯತೆ ಎಂಬ ಅನಿಷ್ಟ ಪದ್ಧತಿಯಿಂದ ಕೂಡಿದೆ. ಅತಿಯಾಸೆ ಗತಿಗೇಡು, ಭಗವಾನ್ ಬುದ್ಧರ ಅತಿ ಆಸೆಯೇ ದುಃಖಕ್ಕೆ ಮೂಲ ಎಂಬ ಮಾತಿನಂತೆ ಇಂದು ಎಲ್ಲರಿಗೂ ದಾಹದ ತೀವ್ರತೆ ಹೆಚ್ಚಾಗಿದೆ‌. ಇವರ ಬಾಯಾರಿಕೆ ನೀರು ಇಲ್ಲದಷ್ಟಿದೆ. ಇಂತಹ ಗತಕಾಲದ ಅನಿಷ್ಠ ಪದ್ಧತಿಗಳು ವರ್ತಮಾನದ ಆಶಯಗಳನ್ನು ಕೊಲ್ಲುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಮೌಲ್ಯ ಹಾಗೂ ಅಪಮೌಲ್ಯಗಳು ಹೇಗಿವಿಯೋ ಅದೇ ರೀತಿಯಲ್ಲಿ ಹಿಂದೂ ಸಮಾಜದಲ್ಲಿ ಕೆಲವು ಅಪದ್ಧ, ಅಪಮೌಲ್ಯಗಳು ಇವೆ. ಜಾತಿಭೇದ, ಮೇಲೂಕೀಳು, ಅಸ್ಪೃಶ್ಯತೆ ಬಹಳಿಷ್ಟಿದೆ‌. ಇಂದು ಸನಾತನ ಧರ್ಮದ ಮೌಲ್ಯ ಅಪಮೌಲ್ಯಗೊಂಡಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು, ಹೈದರಾಬಾದ್​​ ವಿಮಾನ ನಿಲ್ದಾಣದಲ್ಲಿ ₹13 ಕೋಟಿ ಮೌಲ್ಯದ ವಜ್ರ, ವಿದೇಶಿ ಕರೆನ್ಸಿ ವಶಕ್ಕೆ ಪಡೆದ ಡಿಆರ್​ಐ ಅಧಿಕಾರಿಗಳು

“ಅಪೂರ್ಣ ರಾಮ ಮಂದಿರ ಉದ್ಘಾಟನೆಯ ವಿಚಾರ ಇದೀಗ ದೇಶದಲ್ಲಿ ಚರ್ಚೆಯಲ್ಲಿದೆ. ನಮ್ಮ ಬಹುತೇಕ ಹಳ್ಳಿಗಳಲ್ಲಿ ರಾಮಮಂದಿರಗಳಿವೆ. ಅವುಗಳು ಸಾಮಾನ್ಯವಾಗಿ ಜೋಜಾಟದ ಕೇಂದ್ರವಾಗಿ ಪರಿವರ್ತನೆಗೊಂಡಿವೆ. ಅದರಂತೆ ಅಯೋಧ್ಯೆಯ ರಾಮ ಮಂದಿರ ಕೂಡ ರಾಜಕಾರಣದ ಜೂಜಾಟದ ಕೇಂದ್ರವಾಗಿದಿರಲಿ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

“ಈ ನಡುವೆ ಎಲ್ಲ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿದೆ ಹಳಸಿಹೋಗುತ್ತಿದೆ. ರಾಮ ತನ್ನ ಆಡಳಿತದಲ್ಲಿ ಒಂದು ನ್ಯಾಯದ ಗಂಟೆ ಕಟ್ಟಿದ್ದ ಎಂಬ ಪ್ರತೀತಿ ಇದೆ‌. ಅದರಲ್ಲಿ ಜನರು ಜೀವನದ ಸಮಸ್ಯೆ, ಉದ್ಯೋಗ, ಆರೋಗ್ಯವನ್ನು ಬೇಡಿಕೊಂಡರೆ, ರಾಮ ಕೇಳಿಸಿಕೊಳ್ಳುತ್ತಿದ್ದನಂತೆ. ಅದನ್ನು ನಂಬೋಣ‌. ಅದರಂತೆ ಇಂದು ಆಯೋಧ್ಯೆಯ ರಾಮ ಮಂದಿರದ ನಾಲ್ಕು ದಿಕ್ಕಲ್ಲೂ ನಾಲ್ಕು ಗಂಟೆಗಳನ್ನು ಕಟ್ಟಿ. ಈ ಗಂಟೆಗಳ ಮೂಲಕ ಇವತ್ತಿನ ಆಡಳಿತಗಾರರು ತಮ್ಮ ಹೃದಯ, ಕಣ್ಣು, ಕಿವಿ, ಸ್ಪರ್ಶದಿಂದ ಜನರ ಸಮಸ್ಯೆಗಳನ್ನು ಆಲಿಸಲಿ. ಮಾತು ಕೊಟ್ಟು ನಡೆಸಲಿ, ಕೊಟ್ಟ ಮಾತು ಯಾವತ್ತಿಗೂ ಕಾಲಕಸವಾಗದಿರಲಿ” ಎಂದು ತಿಳಿಸಿದರು‌.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X