ತೆರಿಗೆ ವಂಚನೆ ಆರೋಪದ ಹಿನ್ನೆಲೆ, ಬೆಂಗಳೂರಿನ ಕೆಲ ಖಾಸಗಿ ಕಂಪನಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಫೆಬ್ರುವರಿ 7ರಂದು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ 8ಕ್ಕೂ ಹೆಚ್ಚು ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಜಯನಗರ ಎಂಟನೇ ಬ್ಲಾಕ್ನಲ್ಲಿರುವ ಆಂಧ್ರಪ್ರದೇಶ ಮೂಲದ ಉದ್ಯಮಿಗೆ ಸೇರಿದ ಕಚೇರಿ, ಮನೆ ಮೇಲೆ ದಾಳಿ ಮಾಡಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ವರ್ಗಾವಣೆ ನಂತರ ಎನ್‌ಒಸಿ ಮತ್ತು ಎಲ್‌ಪಿಸಿ ಪಡೆಯದ ಪೊಲೀಸ್ ಅಧಿಕಾರಿ ಸಂಬಳ ಕಟ್
ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ಅಷ್ಟೇ ಅಲ್ಲದೇ, ಬಳ್ಳಾರಿಯ ಶ್ರೀನಿವಾಸ್ ಕನ್‌ಸ್ಟ್ರಕ್ಷನ್ ಮಾಲೀಕರ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಆದಾಯ ತೆರಿಗೆ ವಂಚನೆ ಹಾಗೂ ಆದಾಯಕ್ಕೂ ಮೀರಿದ ಆಸ್ತಿಗಳಿಕೆ ಆರೋಪ ಹಿನ್ನೆಲೆ ರಸ್ತೆ, ಕ್ಯಾನಲ್ ಸೇರಿದಂತೆ ನಾನಾ ಬೃಹತ್ ಕಾಮಗಾರಿಗಳ ಕಾಂಟ್ರಾಕ್ಟ್ ಆಗಿರುವ ಪಿಚ್ಚೇಶ್ವರ ರಾವ್ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.