ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ 16ನೇ ಬಜೆಟ್ ಅನ್ನು ಮಂಡಿಸಿದ್ದಾರೆ. 2025-26ನೇ ಸಾಲಿನ ಬಜೆಟ್ ಗಾತ್ರ 4,09,549 ಕೋಟಿ ರೂಪಾಯಿಯಾಗಿದೆ. ಕಳೆದ ವರ್ಷ ಬಜೆಟ್ ಗಾತ್ರ 3.71 ಲಕ್ಷ ಕೋಟಿ ರೂ. ಆಗಿದ್ದು, ಈ ಬಾರಿ ನಿರೀಕ್ಷೆಯಂತೆ ಬಜೆಟ್ ಗಾತ್ರ ಹೆಚ್ಚಳವಾಗಿದೆ.
ದಾಖಲೆಯ ಬಜೆಟ್ ಇದಾಗಿದ್ದು, ಕಳೆದ ಬಜೆಟ್ನಂತೆಯೇ ಈ ಬಜೆಟ್ನಲ್ಲಿಯೂ ಶಿಕ್ಷಣ ಇಲಾಖೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 2024-25ರ ಬಜೆಟ್ನಲ್ಲಿ ಶಿಕ್ಷಣಕ್ಕೆ 44,422 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಈ ಬಾರಿ 45,286 ಕೋಟಿ ರೂಪಾಯಿಗೆ ಅನುದಾನ ಹೆಚ್ಚಿಸಲಾಗಿದೆ.
ಇದನ್ನು ಓದಿದ್ದೀರಾ? ರಾಜ್ಯ ಬಜೆಟ್ | ವೃತ್ತಿ ತೆರಿಗೆ ಏರಿಕೆ
ಇಲಾಖಾವಾರು ಬಜೆಟ್ ಹಂಚಿಕೆ ಎಷ್ಟಿದೆ?
ಶಿಕ್ಷಣ ಇಲಾಖೆ: 45,286 ಕೋಟಿ ರೂಪಾಯಿ
ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ: 34,955 ಕೋಟಿ ರೂಪಾಯಿ
ಇಂಧನ ಇಲಾಖೆ: 26,896 ಕೋಟಿ ರೂಪಾಯಿ
ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್: 26,735 ಕೋಟಿ ರೂಪಾಯಿ
ನೀರಾವರಿ ಇಲಾಖೆ: 22,181 ಕೋಟಿ ರೂಪಾಯಿ ರೂಪಾಯಿ
ನಗರಾಭಿವೃದ್ಧಿ & ವಸತಿ ಇಲಾಖೆ: 21,405 ಕೋಟಿ ರೂಪಾಯಿ
ಒಳಾಡಳಿತ ಮತ್ತು ಸಾರಿಗೆ ಇಲಾಖೆ: 20,625 ಕೋಟಿ ರೂಪಾಯಿ
ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ: 17,473 ಕೋಟಿ ರೂಪಾಯಿ
ಕಂದಾಯ ಇಲಾಖೆ: 17,201 ಕೋಟಿ ರೂಪಾಯಿ
ಸಮಾಜ ಕಲ್ಯಾಣ ಇಲಾಖೆ: 16,955 ಕೋಟಿ ರೂಪಾಯಿ
ಲೋಕೋಪಯೋಗಿ ಇಲಾಖೆ: 11,841 ಕೋಟಿ ರೂಪಾಯಿ
ಆಹಾರ & ನಾಗರಿಕ ಸರಬರಾಜು ಇಲಾಖೆ: 8,275 ಕೋಟಿ ರೂಪಾಯಿ
ಕೃಷಿ ಮತ್ತು ತೋಟಗಾರಿಕೆ ಇಲಾಖೆ: 7145 ಕೋಟಿ ರೂಪಾಯಿ
ಪಶುಸಂಗೋಪನೆ & ಮೀನುಗಾರಿಕೆ ಇಲಾಖೆ: 3,977 ಕೋಟಿ ರೂಪಾಯಿ
ಇತರೆ ಇಲಾಖೆ: 1 ಲಕ್ಷ 49 ಸಾವಿರದ 857 ಕೋಟಿ ರೂಪಾಯಿ
