ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್ ಉಪಕರಣ ಬಳಸಿ ಅಭ್ಯರ್ಥಿಗಳಿಗೆ ಉತ್ತರ ನೀಡಲು ಸಹಾಯ ಮಾಡಿರುವ ಆರೋಪದಡಿಯಲ್ಲಿ ಖಾಸಗಿ ಶಾಲೆಯ ದೈಹಿಕ ಶಿಕ್ಷಕ ಓರ್ವನನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.
ಸಂತೋಷ ಗುತ್ತೇದಾರ್ ಬಂಧಿತ ಖಾಸಗಿ ಶಾಲೆಯ ದೈಹಿಕ ಶಿಕ್ಷಕ ಎಂದು ತಿಳಿದು ಬಂದಿದೆ.
ಬಂಧಿತ ಶಿಕ್ಷಕ ಸಂತೋಷ ಗುತ್ತೆದಾರ್ ಕೆಇಎ ಪರೀಕ್ಷಾ ಅಕ್ರಮದ ಸೂತ್ರದಾರ ಆರ್.ಡಿ ಪಾಟೀಲ್ ಆಪ್ತನಾಗಿದ್ದಾನೆ ಎನ್ನಲಾಗುತ್ತಿದೆ. ಶಿಕ್ಷಕ ಸಂತೋಷ್, ಕಲಬುರಗಿ ಜಿಲ್ಲೆ ಅಫಜಲಪುರದ ಪರೀಕ್ಷಾ ಕೇಂದ್ರದಲ್ಲಿ ನೇಮಕ ಮಾಡಿಕೊಂಡು ಅಕ್ರಮವಾಗಿ ಉತ್ತರ ನೀಡಲು ಸಹಾಯ ಮಾಡಿರುವುದಾಗಿ ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಸುಡಾನ್‌ನಲ್ಲಿ ಸಂಘರ್ಷ: 800 ಮಂದಿ ಹತ್ಯೆ, 48 ಲಕ್ಷ ಜನರ ಸ್ಥಳಾಂತರ
ಸದ್ಯ ಸಂತೋಷ ಪಾಟೀಲ್‌ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕೆಇಎ ಪರೀಕ್ಷೆಯಲ್ಲಿ ಅಕ್ರಮ ನಡೆಸಿರುವ ಪ್ರಮುಖ ಆರೋಪಿ ಆರ್.ಡಿ ಪಾಟೀಲ್ ಅವರನ್ನು ಅಫಜಲಪುರದಲ್ಲಿ ಕಲಬುರಗಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ತನಿಖೆಯನ್ನು ಶನಿವಾರ ರಾಜ್ಯ ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿದೆ.