ಪಾರ್ಸೆಲ್ ಸಾಗಾಟ ಸೌಲಭ್ಯ ಜಾರಿಗೆ ತಂದ ಕೆಎಸ್‌ಆರ್‌ಟಿಸಿ; 20 ಟ್ರಕ್‌ಗಳ ಖರೀದಿ

Date:

Advertisements

ಪ್ರಯಾಣಿಕರಿಗೆ ಪ್ರಯಾಣ ಸೇವೆ ಒದಗಿಸುತ್ತಿರುವ ಸರ್ಕಾರಿ ಸ್ವಾಮ್ಯದ ಕೆಎಸ್‌ಆರ್‌ಟಿಸಿ, ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಪಾರ್ಸೆಲ್‌ಗಳನ್ನು ಸಾಗಾಟ ಮಾಡುವ ಸೇವೆಯನ್ನು ಆರಂಭಿಸಿದೆ. ಇದರಿಂದ ತನ್ನ ಆದಾಯವೂ ಹೆಚ್ಚಲಿದೆ ಎಂದು ಸಂಸ್ಥೆ ಭಾವಿಸಿದೆ.

ಪಾರ್ಸೆಲ್‌ ಸಾಗಾಟ ಸೇವೆಯನ್ನು ಒಗಿಸಲು ಕೆಎಸ್‌ಆರ್‌ಟಿಸಿ 20 ಲಾರಿ ಟ್ರಕ್‌ಗಳನ್ನು ಖರೀದಿಸಿದೆ. ಸಾರ್ವಜನಿಕರು ಪಾರ್ಸೆಲ್‌ಗಳನ್ನು ತಾವು ತಲುಪಿಸಲು ಇಚ್ಛಿಸುವ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಮೂಲಕ ತಲುಪಿಸಬಹುದು ಎಂದು ಹೇಳಿದೆ.

ಅಲ್ಲದೆ, ಮುಂದಿನ ನಾಲ್ಕು ವರ್ಷಗಳಲ್ಲಿ 4,000 ಬಸ್‌ಗಳಲ್ಲಿ ಪಾರ್ಸೆಲ್‌ ಸಾಗಾಟ ಮಾಡುವ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಕೆಎಸ್‌ಆರ್‌ಟಿಸಿ ಹೊಂದಿದೆ ಎಂದು ತಿಳಿಸಿದೆ.

Advertisements

“ವಿಮಾನ ನಿಲ್ದಾಣ, ಬಂದರು ಸೇರಿದಂತೆ ಗ್ರಾಹಕರು ತಿಳಿಸಿದ ಸ್ಥಳದಿಂದ, ತಲುಪಿಸಬೇಕಾದ ಸ್ಥಳಕ್ಕೆ ಕೆಎಸ್‌ಆರ್‌ಟಿಸಿ ಟ್ರಕ್‌ಗಳು ಪಾರ್ಸೆಲ್‌ ಒಯ್ಯಲಿವೆ” ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

 

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಹೆಬ್ಬಳ್ಳಿ ಗ್ರಾಮದಲ್ಲಿ 91 ಪಿಓಪಿ ಗಣೇಶ ವಿಗ್ರಹಗಳ ವಶಕ್ಕೆ ಪಡೆದ ತಪಾಸಣೆ ತಂಡ

ತಾಲೂಕಿನ ಹೆಬ್ಬಳ್ಳಿಯಲ್ಲಿ 91 ಪಿಓಪಿ ಗಣಪತಿಗಳನ್ನು ಜಿಲ್ಲಾಧಿಕಾರಿ ಆದೇಶದಂತೆ ರಚಿಸಿದ ಕಾರ್ಯ...

ಚಿಕ್ಕಮಗಳೂರು l ಪೋಕ್ಸೋ ಪ್ರಕರಣ: ಆರೋಪಿಗಳಿಗೆ ದಂಡ, ತಲಾ ಹತ್ತು ವರ್ಷ ಜೈಲು ಶಿಕ್ಷೆ

ಪೋಕ್ಸೋ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ...

ಮಂಗಳೂರು | ಅಲ್‌ ವಫಾ ಟ್ರಸ್ಟ್‌ನಿಂದ 15 ಜೋಡಿಗಳಿಗೆ ಸರಳ ಸಾಮೂಹಿಕ ವಿವಾಹ

ಮಂಗಳೂರಿನ ಅಲ್ ವಫಾ ಚಾರಿಟೆಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ 15 ಜೋಡಿಗಳ ಸರಳ...

Download Eedina App Android / iOS

X