ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿಯಿಂದ 259 ಹೊಸ ಮಾರ್ಗಗಳಲ್ಲಿ ಬಸ್‌ ಸೇವೆ

Date:

Advertisements

ಶಕ್ತಿ ಯೋಜನೆ ಜಾರಿ ಬಳಿಕ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯು 259ಕ್ಕೂ ಅಧಿಕ ಹೊಸ ಹಾಗೂ ಹಳೆಯ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ.

ಕೋವಿಡ್‌ ಸಂದರ್ಭದಲ್ಲಿ ಹಲವು ಮಾರ್ಗಗಳಲ್ಲಿ ಬಸ್‌ ಸೇವೆ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಆ ಮಾರ್ಗದ ಜನರು ಬಸ್‌ ಸೇವೆಯಿಲ್ಲದೆ ತುಂಬಾ ತೊಂದರೆಗೀಡಾಗಿದ್ದರು. ಶಕ್ತಿ ಯೋಜನೆ ಜಾರಿ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಬಸ್‌ಗಳ ಕೊರತೆ ಉಂಟಾಗಿತ್ತು. ಅಲ್ಲದೇ ಬಸ್‌ ಸೇವೆಗೆ ಬೇಡಿಕೆ ಹೆಚ್ಚಾಗಿದೆ.

ಸಾರ್ವಜನಿರಿಂದ 404 ಮಾರ್ಗಗಳಲ್ಲಿ ಹೊಸದಾಗಿ ಬಸ್‌ಗಳನ್ನು ಓಡಿಸಲು ಕೆಎಸ್‌ಆರ್‌ಟಿಸಿಗೆ ಬೇಡಿಕೆಯಿತ್ತು. ಈ ಪೈಕಿ ಸದ್ಯ 259 ಮಾರ್ಗಗಳಲ್ಲಿ ಬಸ್‌ ಸೇವೆ ಒದಗಿಸಲಾಗಿದೆ. ವಿಭಾಗೀಯ ಮಟ್ಟದಲ್ಲಿ ಬಸ್‌ಗಳ ಕಾರ್ಯಾಚರಣೆಗೆ ಒಟ್ಟು 145 ಹೊಸ ಮಾರ್ಗಗಳನ್ನು ಗುರುತಿಸಲಾಗಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಅಗತ್ಯವಿರುವ ಮಾರ್ಗಗಳಲ್ಲಿ ಬಸ್‌ಗಳನ್ನು ಓಡಿಸಲು ಕ್ರಮ ವಹಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದರು.

Advertisements

ಮೈಸೂರು ರಿಂಗ್‌ ರಸ್ತೆ ಬಸ್‌ ಸೌಲಭ್ಯ

ಮೈಸೂರು ನಗರ ಬಸ್‌ ನಿಲ್ದಾಣದಿಂದ ಹೊರವರ್ತುಲ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಆರಂಭವಾಗಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಮೈಸೂರು ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌.ಟಿ.ವೀರೇಶ್‌ ಮಾತನಾಡಿ, ‘‘ಸಿಟಿ ಬಸ್‌ ನಿಲ್ದಾಣದಿಂದ ಕಲಾಮಂದಿರಕ್ಕೆ ಯಾವುದೇ ಬಸ್‌ ಇರಲಿಲ್ಲ. ಅಲ್ಲಿಗೆ ತೆರಳಬೇಕಾದರೆ ಜನರು ಮೆಟ್ರೋಪೋಲ್‌ ಸರ್ಕಲ್‌ ಬಳಿ ಇಳಿಯಬೇಕಾಗಿತ್ತು ಅಥವಾ ಸರಸ್ವತಿಪುರಂನ ಗೌರ್ನಮೆಂಟ್‌ ಪ್ರೆಸ್‌ ಬಳಿ ಇಳಿದು ನಡೆದುಕೊಂಡು ಹೋಗಬೇಕಾಗಿತ್ತು. ಈಗ ಅಲ್ಲಿಗೆ ಬಸ್‌ ಹೋಗುತ್ತದೆ. ಇದೇ ರೀತಿ ಹಲವು ಸ್ಥಳಗಳಿಗೆ ಬಸ್‌ಗಳು ಸಂಚಾರ ಮಾಡುವುದರಿಂದ ಜನರಿಗೆ ಅನುಕೂಲವಾಗಲಿದೆ,’’ ಎಂದು ಮಾಹಿತಿ ನೀಡಿದರು.

ಹೊಸ ಮಾರ್ಗಗಳು

ಮಾರ್ಗ- 1: ನಗರ ಬಸ್‌ ನಿಲ್ದಾಣ- ನಂಜು ಮಳಿಗೆ- ಪರಸಯ್ಯನ ಹುಂಡಿ-ದಟ್ಟಗಳ್ಳಿ- ಬೋಗಾದಿ- ಹಿನಕಲ್‌- ಕಲಾಮಂದಿರ- ಮೆಟ್ರೋಪೋಲ್‌ ಸರ್ಕಲ್‌- ನಗರಬಸ್‌ ನಿಲ್ದಾಣ.

ಮಾರ್ಗ -2: ನಗರಬಸ್‌ ನಿಲ್ದಾಣ-ಮೆಟ್ರೋಪೋಲ್‌ ಸರ್ಕಲ್‌- ಕಲಾಮಂದಿರ- ಹಿನಕಲ್‌- ಭಾರತ್‌ ಕ್ಯಾನ್ಸರ್‌ ಆಸ್ಪತ್ರೆ- ಮಣಿಪಾಲ್‌ ಆಸ್ಪತ್ರೆ- ಎಲ್‌ಐಸಿ ಸರ್ಕಲ್‌- ಹೈವೇ ವೃತ್ತ- ನಗರ ಬಸ್‌ ನಿಲ್ದಾಣ.

ಮಾರ್ಗ-3: ನಗರ ಬಸ್‌ ನಿಲ್ದಾಣ-ಹೈವೇ ವೃತ್ತ-ಎಲ್‌ಐಸಿ ಸರ್ಕಲ್‌- ಮಣಿಪಾಲ್‌ ಆಸ್ಪತ್ರೆ- ನಾರಾಯಣ ಹೃದಯಾಲಯ-ಸಾತಗಳ್ಳಿ ಬಸ್‌ ನಿಲ್ದಾಣ-ದೇವೇಗೌಡ ವೃತ್ತ- ನಜರಬಾದ್‌- ನಗರ ಬಸ್‌ ನಿಲ್ದಾಣ.

ಮಾರ್ಗ-4: ನಗರ ಬಸ್‌ ನಿಲ್ದಾಣ- ನಂಜು ಮಳಿಗೆ- ಪರಸಯ್ಯನ ಹುಂಡಿ- ನಂಜನಗೂಡು ರಸ್ತೆ ಜಂಕ್ಷನ್‌-ಉತ್ತನಹಳ್ಳಿ- ತಿ.ನರಸೀಪುರ ರಸ್ತೆ ಜಂಕ್ಷನ್‌- ದೇವೇಗೌಡ ವೃತ್ತ-ನಜರಬಾದ್‌- ನಗರ ಬಸ್‌ ನಿಲ್ದಾಣ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

Download Eedina App Android / iOS

X