ರಾಜ್ಯದಲ್ಲಿ ದಿನನಿತ್ಯ 34 ಮಂದಿ ರಸ್ತೆ ಅಪಘಾತದಲ್ಲಿ ಸಾವು: ಅಲೋಕ್ ಕುಮಾರ್

Date:

Advertisements

ಕಳೆದ ವರ್ಷ ಕರ್ನಾಟಕದಲ್ಲಿ ಪ್ರತಿ ದಿನ 34 ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬ ಆತಂಕಕಾರಿ ಅಂಶವನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆಯ ಎಡಿಜಿಪಿ (ತರಬೇತಿ) ಅಲೋಕ್ ಕುಮಾರ್ ಅವರು ಬಿಚ್ಚಿಟ್ಟಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಅವರು, “ಕಳೆದ ವರ್ಷ ಕರ್ನಾಟಕದಲ್ಲಿ ಪ್ರತಿದಿನ 34 ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಾರಣಾಂತಿಕ ಅಪಘಾತಗಳಲ್ಲಿ 5% ಹೆಚ್ಚಳವಾಗಿದೆ. ಅಜಾಗರೂಕ ಚಾಲನೆ, ಕಳಪೆ ಚಾಲನಾ ಕೌಶಲ್ಯ, ಕಳಪೆ ರಸ್ತೆಗಳು, ಪಾದಚಾರಿಗಳಿಗೆ ಅಸಮರ್ಪಕ ಸೌಲಭ್ಯ ಸೇರಿದಂತೆ ಇನ್ನಿತರ ಅಂಶಗಳು ಅಪಘಾತಗಳಿಗೆ ಕಾರಣಗಳಾಗಿವೆ. ಸದ್ಯ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ” ಎಂದಿದ್ದಾರೆ.

2023ರಲ್ಲಿ ಬೆಂಗಳೂರು ನಗರದಲ್ಲಿ ನಡೆದ 4,974 ರಸ್ತೆ ಅಪಘಾತದಲ್ಲಿ 915 ಜನ ಸಾವನ್ನಪ್ಪಿದ್ದರೇ, 4,162 ಜನ ಗಾಯಗೊಂಡಿದ್ದಾರೆ. ಮೈಸೂರಿನಲ್ಲಿ 953 ಅಪಘಾತಗಳು ಸಂಬವಿಸಿದರೇ, 168 ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇನ್ನು 992 ಜನ ಗಾಯಗೊಂಡಿದ್ದಾರೆ. ಹುಬ್ಬಳ್ಳಿ-ಧಾರವಾಡ ನಗರದಲ್ಲಿ 544 ಅಪಘಾತಗಳು ನಡೆದಿವೆ. ಈ ಅಪಘಾತದಲ್ಲಿ 539 ಜನ ಗಾಯಗೊಂಡಿದ್ದರೇ, 118 ಜನ ಸಾವನ್ನಪ್ಪಿದ್ದಾರೆ. ಇನ್ನು ಮಂಗಳೂರು ನಗರದಲ್ಲಿ 1,008 ಅಪಘಾತಗಳು ಸಂಭವಿಸಿವೆ. 1,156 ಜನ ಗಾಯಗೊಂಡಿದ್ದರೇ, 166 ಜನ ಸಾವನ್ನಪ್ಪಿದ್ದಾರೆ.

Advertisements

ಬೆಳಗಾವಿಯಲ್ಲಿ ರಸ್ತೆ ಅಪಘಾತದಲ್ಲಿ 613 ಜನ ಗಾಯಗೊಂಡಿದ್ದರೇ, 137 ಜನ ಸಾವನ್ನಪ್ಪಿದ್ದಾರೆ. ಕಲಬುರಗಿಯಲ್ಲಿ ನಡೆದ 494 ಅಪಘಾತ ಪ್ರಕರಣಗಳಲ್ಲಿ 606 ಜನ ಗಾಯಗೊಂಡಿದ್ದರೇ, 129 ಜನ ಸಾವನ್ನಪ್ಪಿದ್ದಾರೆ. ಬೆಂಗಳೂರು ಜಿಲ್ಲೆಯಲ್ಲಿ 2,451 ಅಪಘಾತ ಪ್ರಕರಣಗಳು ನಡೆದಿದ್ದರೇ, 2,546 ಜನ ಗಾಯಗೊಂಡಿದ್ದಾರೆ. 694 ಜನ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯಲ್ಲಿ 766 ಅಪಘಾತ ಪ್ರಕರಣಗಳು ನಡೆದಿವೆ. ಈ ಅಪಘಾತದಲ್ಲಿ 778 ಜನ ಗಾಯಗೊಂಡಿದ್ದರೇ, 257 ಜನ ಸಾವನ್ನಪ್ಪಿದ್ದಾರೆ.

ಕೆಜಿಎಫ್‌ ಜಿಲ್ಲೆಯಲ್ಲಿ 71, ತುಮಕೂರು 783, ರಾಮನಗರ 421, ಚಿಕ್ಕಬಳ್ಳಾಪುರ 346, ಮೈಸೂರು 472, ಮಂಡ್ಯ 515, ಹಾಸನ 502, ಚಾಮರಾಜನಗರ 179, ಕೊಡಗು 88, ದಕ್ಷಿಣ ಕನ್ನಡ 134, ಉತ್ತರ ಕನ್ನಡ 248, ಚಿಕ್ಕಮಗಳೂರು 281, ಉಡುಪಿ 253, ದಾವಣಗೆರೆ 304, ಚಿತ್ರದುರ್ಗ 472, ಶಿವಮೊಗ್ಗ 368, ಹಾವೇರಿ 281, ಬೆಳಗಾವಿ 804, ಧಾರವಾಡ 255, ಬಿಜಾಪುರ 446, ಬಾಗಲಕೋಟೆ 402, ಗದಗ 170, ಬೀದರ್ 335, ಗುಲಬರ್ಗಾ 360, ಯಾದಗಿರಿ 170, ರಾಯಚೂರು 279, ಕೊಪ್ಪಳ 277, ಬಳ್ಳಾರಿ 252, ವಿಜಯನಗರ 274 ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬ ಅಂಕಿಅಂಶಗಳ ಮಾಹಿತಿಯ ಕೋಷ್ಠಕವನ್ನು ಅಲೋಕ್ ಕುಮಾರ್ ಅವರು ಹಂಚಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬರ ಪರಿಸ್ಥಿತಿಯಲ್ಲಿ ಜವಾಬ್ದಾರಿಯಿಂದ ನೀರಿನ ಬಳಕೆ ಮಾಡಬೇಕು: ಡಿಸಿಎಂ ಡಿಕೆಶಿ

“ಕಳೆದ ವರ್ಷ ಅಂದರೇ 2023ರಲ್ಲಿ ಬರೋಬ್ಬರಿ 43,440 ಅಪಘಾತಗಳು ಸಂಭವಿಸಿವೆ. ಈ ಪೈಕಿ 11,608 ಮಾರಣಾಂತಿಕ ಅಪಘಾತ ಸಂಭವಿಸಿದರೇ, 31,832 ಮಾರಣಾಂತಿಕವಲ್ಲದ ಅಪಘಾತಗಳು ಸಂಭವಿಸಿವೆ. ಕಳೆದ ವರ್ಷ ಸಂಭವಿಸಿದ 43,440 ಅಪಘಾತಗಳಲ್ಲಿ 52,531 ಜನಗಾಯಗೊಂಡಿದ್ದರೇ, 12,327 ಜನ ಸಾವನ್ನಪ್ಪಿದ್ದಾರೆ” ಎಂಬ ಮಾಹಿತಿ ನೀಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X