ಛಲವಾದಿ ನಾರಾಯಣಸ್ವಾಮಿ ಗುಲಾಮಗಿರಿಯ ಪಾತಾಳಕ್ಕೆ ತಲುಪಿದ್ದಾರೆ: ಮಾವಳ್ಳಿ ಶಂಕರ್

Date:

Advertisements

ದೇಶ ಮತ್ತು ರಾಜ್ಯದ ಪ್ರಮುಖ ಸ್ಥಾನದಲ್ಲಿರುವ ದಲಿತ ನಾಯಕರನ್ನು ನಾಯಿಗೆ ಹೋಲಿಸಿ ನೀಚ ಮಾತುಗಳನ್ನು ಹಾಡಿರುವ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಇಡೀ ದಲಿತ ಸಮುದಾಯದ ಜೊತೆ ಕ್ಷಮೆ ಕೇಳಬೇಕು ಎಂದು ದಲಿತ ನಾಯಕ ಮಾವಳ್ಳಿ ಶಂಕರ್ ಆಗ್ರಹಿಸಿದ್ದಾರೆ.

ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಾರಾಯಣಸ್ವಾಮಿ ಅವರು ರಾಜಕಾರಣದಲ್ಲಿ ಬೇರೆ ಯಾರದ್ದೇ ಉದಾಹರಣೆ ನೀಡಲು ಸಾಧ್ಯವಾಗದಷ್ಟು ನೀಚತನದ ಗುಲಾಮಗಿರಿಯ ಪಾತಾಳಕ್ಕೆ ತಲುಪಿದ್ದಾರೆ. ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯ ಸಚಿವ ಪ್ರಿಯಾಂಕ್‌ ಖರ್ಗೆ ಬಗ್ಗೆ ಅವರು ಕೀಳು ಮಟ್ಟದಲ್ಲಿ ಮಾತನಾಡಿರುವುದು ಖಂಡನೀಯವಾಗಿದೆ. ಅವರು ಕೂಡಲೇ ಸಾರ್ವಜನಿಕವಾಗಿ ದಲಿತ ಸಮುದಾಯದ ಕ್ಷಮೆ ಕೇಳಬೇಕು ಎಂದು ಮಾವಳ್ಳಿ ಶಂಕರ್ ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿ ಆನೆ ಇದ್ದ ಹಾಗೆ. ಉಳಿದವರು ನಾಯಿ ಇದ್ದ ಹಾಗೆ ಎಂಬ ಮಾತಿನ ಅರ್ಥ ಏನು? ಸಂವಿಧಾನ ದೇಶದ ಪ್ರತೀಯೊಬ್ಬರಿಗೂ ಮತ್ತು ಪ್ರತೀಯೊಬ್ಬರನ್ನೂ ಪ್ರಶ್ನಿಸುವುದನ್ನು ಕಲಿಸುತ್ತದೆ. ಮೋದಿಯನ್ನು ಯಾರೂ ಪ್ರಶ್ನೆ ಮಾಡಬಾರದು ಎಂಬ ನಾರಾಯಣಸ್ವಾಮಿಯ ಹೇಳಿಕೆ ನೀಚತನದಿಂದ ಕೂಡಿದೆ. ಇದನ್ನು ನಾವು ಖಂಡಿಸುತ್ತೇವೆ. ಸಾರ್ವಜನಿಕವಾಗಿ ಬಾಯಿಗೆ ಬಂದ ಹಾಗೆ ಮಾತನಾಡುವುದು, ತೋಚಿದಂತೆ ಹೇಳಿಕೆ ನೀಡುವುದನ್ನು ಅವರು ಕೂಡಲೇ ನಿಲ್ಲಿಸಬೇಕು. ಹೀಗೆಯೇ ಮುಂದುವರಿದರೆ ಅವರನ್ನು ಸಮಾಜ ಸಹಿಸಿಕೊಳ್ಳುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

Advertisements

ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ವಿರೋಧ ಪಕ್ಷದ ನಾಯಕರಾಗಿ ದೇಶದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಅದಕ್ಕೆ ಉತ್ತರ ನೀಡುವ ಯೋಗ್ಯತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರಿಗೆ ಇಲ್ಲ. ಮೂರು ಅವಧಿಯಲ್ಲಿ ಒಂದೇ ಒಂದು ಸುದ್ದಿಗೋಷ್ಠಿ ನಡೆಸುವ ತಾಕತ್ತು ಆನೆಗೆ ಇಲ್ಲ. ದೇಶ ಯುದ್ಧವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಕರೆದ ಸರ್ವ ಪಕ್ಷಗಳ ಸಭೆಗೆ ಹಾಜರಾಗದ, ಸಂಸತ್ತನ್ನು ಸರಿಯಾಗಿ ನಡೆಸಲು ಆಗದವರನ್ನು ಪ್ರಶ್ನೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ವೈಫಲ್ಯಗಳನ್ನು ಮರೆಮಾಚಲು ಪರಿಶಿಷ್ಟ ಜಾತಿಯವರನ್ನು ಹುಡುಕಿ ಅವರ ಮೂಲಕ ಪರಿಶಿಷ್ಟ ನಾಯಕರ ವಿರುದ್ಧ ನೀಚ ಹೇಳಿಕೆಯನ್ನು ನೀಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದನ್ನು ನಾರಾಯಣಸ್ವಾಮಿ ಅರ್ಥಮಾಡಿಕೊಳ್ಳಬೇಕು. ದಲಿತ ನಾಯಕರ ಬಗ್ಗೆ ಕೆಟ್ಟದಾಗಿ ಮಾತನಾಡುವ ಪ್ರವೃತ್ತಿ ಬಿಜೆಪಿ ಮುಂದುವರಿಸಿದರೆ ಅವರ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ಮಾವಳ್ಳಿ ಶಂಕರ್ ಎಚ್ಚರಿಸಿದರು.

ಡಾ. ರವಿಕುಮಾರ್ ಬಾಗಿ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಆನೆ ಇದ್ದ ಹಾಗೆ. ಅವರನ್ನು ಪ್ರಶ್ನೆ ಮಾಡುವವರು ನಾಯಿ ಇದ್ದ ಹಾಗೆ ಎಂದಿರುವ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆ ಖಂಡನೀಯವಾಗಿದೆ. ಈ ದೇಶದಲ್ಲಿ ಟೀಕೆಗೆ, ಪ್ರಶ್ನೆಗೆ ಹೊರತಾದವರು ಯಾರೂ ಇಲ್ಲ. ಗ್ರಾಮ ಪಂಚಾಯತ್‌ ಸದಸ್ಯರಿಂದ ಪ್ರಧಾನಿ ವರೆಗೆ ಎಲ್ಲರೂ ಜನಸೇವಕರು. ಅವರ ತಪ್ಪುಗಳನ್ನು, ವೈಫಲ್ಯಗಳನ್ನು ಪ್ರಶ್ನೆ ಮಾಡುವುದು ದೇಶದ ಜನರಿಗೆ ಸಂವಿಧಾನ ನೀಡಿದ ಹಕ್ಕು. ಇದು ಪ್ರಾಥಮಿಕ ಪಾಠವಾಗಿದ್ದು, ಮೊದಲು ಇದನ್ನು ನಾರಾಯಣಸ್ವಾಮಿ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಒಬ್ಬ ಸಂಪುಟ ಸಚಿವರನ್ನು ಸಾರ್ವಜನಿಕ ವೇದಿಕೆಯಲ್ಲಿ ಹೀನಾಯವಾಗಿ ನಾಯಿಗೆ ಹೋಲಿಸಿ ಮಾತನಾಡಿರುವುದನ್ನು ಈ ರಾಜ್ಯದ ಜನರು ಕ್ಷಮಿಸಲಾರರು. ಮನುವಾದ, ತಾರತಮ್ಯ, ಮೇಲು ಕೀಲು, ಚಾತುರ್ವರ್ಣವನ್ನು ಪ್ರೋತ್ಸಾಹಿಸುವ ಹಾಗೂ ಸಂವಿಧಾನವನ್ನೇ ಬದಲಾವಣೆ ಮಾಡಬೇಕು ಎಂದು ಆಗ್ರಹಿಸುವವರ ಜೊತೆ ಸೇರಿ, ಅವರ ಚಾಕರಿ ಮಾಡುತ್ತಿರುವ ನಾರಾಯಣಸ್ವಾಮಿ ಅವರು ದಲಿತ ಸಮುದಾಯದ ದ್ರೋಹಿಯಾಗಿದ್ದಾರೆ. ವ್ಯಕ್ತಿ ಗೌರವಕ್ಕೆ ಧಕ್ಕೆ ಬಾರದಂತೆ ಸಂವಿಧಾನದ ಚೌಕಟ್ಟಿನಲ್ಲಿ ಟೀಕೆ ಮಾಡುವುದು ತಪ್ಪಲ್ಲ. ನಾರಾಯಣಸ್ವಾಮಿ ಅದರ ಆಚೆಗೆ ಹೋಗಿ ಟೀಕೆ ಮಾಡಿದ್ದಾರೆ. ಅದು ಅವರ ಯೋಗ್ಯತೆಯನ್ನು ತೋರಿಸುತ್ತದೆ ಎಂದು ರವಿಕುಮಾರ್‍‌ ಬಾಗಿ ಅವರು ಹೇಳಿದರು.

ರುದ್ರ ಪುನೀತ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಲ್ಲರಿಗಿಂತಲೂ ಹೆಚ್ಚಾಗಿ ಛಲವಾದಿ ನಾರಾಯಣಸ್ವಾಮಿ ಅವರೇ ಪ್ರಶ್ನೆ ಮಾಡಬೇಕಾಗಿದೆ. ಮೀಸಲಾತಿ ವ್ಯವಸ್ಥೆ ಇರುವುದು ಸಾಮಾಜಿಕ ಸಮಾನತೆಗೆಯೇ ಹೊರೆತು ಆರ್ಥಿಕ ಸಮಾನತೆಗೆ ಅಲ್ಲ. ಆದರೂ ಸಂವಿಧಾನದ ಆಶಯವನ್ನು ದಿಕ್ಕುತಪ್ಪಿಸಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರಿಗೆ 10 ಶೇ. ಮೀಸಲಾತಿ ನೀಡಿರುವುದನ್ನು ನಾರಾಯಣಸ್ವಾಮಿ ಪ್ರಶ್ನಿಸಬೇಕಾಗಿದೆ. ದಲಿತರೆಂಬ ಕಾರಣಕ್ಕೆ ರಾಷ್ಟ್ರಪತಿಗಳನ್ನೂ ದೇವಸ್ಥಾನ ಪ್ರವೇಶಕ್ಕೆ ಬಿಜೆಪಿಯಿಂದ ಅವಕಶ ನಿರಾಕರಿಸಲಾಗುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಬೇಕಾದ ನಾರಾಯಣಸ್ವಾಮಿ ಮೌನವಾಗಿದ್ದಾರೆ. ಆದರೆ ಸಂವಿಧಾನದ ಚೌಕಟ್ಟಿನಲ್ಲಿ ಪ್ರಶ್ನೆ ಮಾಡುವ ದಲಿತ ನಾಯಕರನ್ನು ನಾಯಿಗೆ ಹೋಲಿಕೆ ಮಾಡಿರುವುದು ಅವರ ಗುಲಾಮತನದ ಪರಮಾವಧಿಯಾಗಿದೆ ಎಂದರು.

ದಲಿತ ಸಮುದಾಯದ ನಾಯಕರನ್ನು ದಲಿತ ನಾಯಕರಲ್ಲಿಯೇ ಇಂತಹ ನಿಂದಿಸುವ, ಅಪಮಾನಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ಅವರನ್ನು ಗುರಾಣಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಇದನ್ನು ನಾರಾಯಣಸ್ವಾಮಿ ಅರ್ಥಮಾಡಿಕೊಳ್ಳಬೇಕು. ರಾಜ್ಯದಲ್ಲಿ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಮತ್ತು ಸ್ಪರ್ಧೆಯಲ್ಲಿರುವ ಡಾ. ಜಿ.ಪರಮೇಶ್ವರ್‍‌ ಅವರ ಮೇಲೆ ಈಡಿ ದಾಳಿ ನಡೆಸಿ ಅವರ ಅಸ್ತಿತ್ವ ಇಲ್ಲದಂತೆ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಕಳಂಕಿತ ನೈಸ್ ಕಂಪನಿಗೆ ಯಾವುದೇ ಕಾಮಗಾರಿ ನೀಡದಂತೆ ಸರ್ಕಾರಕ್ಕೆ ನೈಸ್ ಭೂ ಸಂತ್ರಸ್ತ ರೈತರ ಆಗ್ರಹ

ಬಿಎಂಐಸಿ-ನೈಸ್ ಕಂಪನಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಸಲಹಾ...

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

Download Eedina App Android / iOS

X