ಮೈಸೂರು ದಸರಾ | ಹೆಚ್ಚುವರಿ ಜನದಟ್ಟಣೆ ನಿವಾರಣೆಗಾಗಿ ಮೈಸೂರು, ಧಾರವಾಡ ಹಾಗೂ ಬಿಜಾಪುರ ನಡುವೆ ವಿಶೇಷ ರೈಲುಗಳ ಓಡಾಟ

Date:

Advertisements

ದಸರಾ ಹಬ್ಬದ ಹಿನ್ನೆಲೆ, ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಮೈಸೂರು ಮತ್ತು ಧಾರವಾಡ ಹಾಗೂ ಮೈಸೂರು ಮತ್ತು ಬಿಜಾಪುರ ನಡುವೆ ದಸರಾ ವಿಶೇಷ ರೈಲು ಸೇವೆ ಒದಗಿಸಲು ನಿರ್ಧರಿಸಿದೆ.

(ರೈಲು ಸಂಖ್ಯೆ 06205) ಮೈಸೂರಿನಿಂದ ಧಾರವಾಡಕ್ಕೆ ಅಕ್ಟೋಬರ್ 22 ಮತ್ತು 24 ರಂದು ಎರಡು ಸಲ ಪ್ರಯಾಣವನ್ನು ಪ್ರಾರಂಭಿಸಿದೆ. ರೈಲು ಮೈಸೂರಿನಿಂದ ರಾತ್ರಿ 10:35ಕ್ಕೆ ಹೊರಟು, ಮರುದಿನ 8ಕ್ಕೆ ಧಾರವಾಡ ತಲುಪುತ್ತದೆ. ಮಾರ್ಗದಲ್ಲಿ ಕೃಷ್ಣರಾಜನಗರ, ಹೊಳೆನರಸೀಪುರ, ಹಾಸನ, ಅರಸೀಕೆರೆ, ಕಡೂರು, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಬ್ಯಾಡಗಿ, ಹಾವೇರಿ ಹಾಗೂ ಹುಬ್ಬಳ್ಳಿಯಲ್ಲಿ ನಿಲುಗಡೆ ಹೊಂದಲಿದೆ.

(ರೈಲು ನಂ 06206) ಧಾರವಾಡದಿಂದ ಮೈಸೂರಿಗೆ ಪ್ರಯಾಣವನ್ನು ಎರಡು ಸಲ, ಅಂದರೆ, ಅಕ್ಟೋಬರ್ 23 ಮತ್ತು 25 ರಂದು ಪ್ರಾರಂಭಿಸುತ್ತದೆ. ರೈಲು ಧಾರವಾಡದಿಂದ ಬೆಳಗ್ಗೆ 11:15 ಗಂಟೆಗೆ ಹೊರಟು ಅದೇ ದಿನ 9:30 ಗಂಟೆಗೆ ಮೈಸೂರು ತಲುಪುತ್ತದೆ. ರೈಲು ಮಾರ್ಗದಲ್ಲಿ ಹುಬ್ಬಳ್ಳಿ, ಹಾವೇರಿ, ಬ್ಯಾಡಗಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಕಡೂರು, ಅರಸೀಕೆರೆ, ಹಾಸನ, ಹೊಳೆನರಸೀಪುರ ಮತ್ತು ಕೃಷ್ಣರಾಜನಗರದಲ್ಲಿ ನಿಲುಗಡೆ ಇದೆ.

Advertisements

(ರೈಲು ಸಂಖ್ಯೆ 06205 ಮತ್ತು 06206) ಒಂದು ಎರಡನೆಯ ದರ್ಜೆ ಎಸಿ, ಮೂರು ಮೂರನೆಯ ದರ್ಜೆ ಎಸಿ, ಎಂಟು ಸ್ಲೀಪರ್ ದರ್ಜೆ ಮತ್ತು ನಾಲ್ಕು ದ್ವಿತೀಯ ದರ್ಜೆ ಆಸನದ ಕೋಚ್‌ಗಳ ಸಂಯೋಜನೆಯನ್ನು ಹೊಂದಿದೆ.

ಈ ಸುದ್ದಿ ಓದಿದ್ದೀರಾ? ಹುಕ್ಕಾ ಬಾರ್ ಹೆಸರಿನಲ್ಲಿ ಗಾಂಜಾ ಮಾರಾಟ: ಎಎಪಿ ಆರೋಪ

(ರೈಲು ನಂ 06203) ಅಕ್ಟೋಬರ್ 20ರಂದು ಮೈಸೂರಿನಿಂದ ಬಿಜಾಪುರಕ್ಕೆ ಒಂದು ಬಾರಿಯ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಅದು ಕೆಎಸ್‌ಆರ್ ಬೆಂಗಳೂರು ನಿಲ್ದಾಣದ ಮೂಲಕ ಹಾದು ಹೋಗುತ್ತದೆ. ರೈಲು ಮೈಸೂರಿನಿಂದ 5:30 ಗಂಟೆಗೆ ಹೊರಟು ಮರುದಿನ 10ಗಂಟೆಗೆ ಬಿಜಾಪುರ ತಲುಪಲಿದೆ. ರೈಲಿಗೆ ಮಾರ್ಗ ಮಧ್ಯದಲ್ಲಿ ಮಂಡ್ಯ, ರಾಮನಗರ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಕರಜಗಿ, ಹುಬ್ಬಳ್ಳಿ, ಹೊಳೆ ಆಲೂರು, ಬಾದಾಮಿ ಮತ್ತು ಬಾಗಲಕೋಟೆಯಲ್ಲಿ ನಿಲುಗಡೆ ಹೊಂದಿದೆ.

(ರೈಲು ನಂ 06204) ಬಿಜಾಪುರದಿಂದ ಮೈಸೂರಿಗೆ ಹಾಸನ ಮಾರ್ಗವಾಗಿ 21 ನೇ ಅಕ್ಟೋಬರ್‌ ರಂದು ದಸರಾ ವಿಶೇಷ ಪ್ರಯಾಣವನ್ನು ನಡೆಸಲಿದೆ. ರೈಲು ಬಿಜಾಪುರದಿಂದ 11:45 ಗಂಟೆಗೆ ಹೊರಟು ಮರುದಿನ 3 ಗಂಟೆಗೆ ಮೈಸೂರು ತಲುಪುತ್ತದೆ. ಮಾರ್ಗದಲ್ಲಿ ರೈಲಿಗೆ ಬಾಗಲಕೋಟೆ, ಬಾದಾಮಿ, ಹೊಳೆ ಆಲೂರು, ಹುಬ್ಬಳ್ಳಿ, ಕಾರಜಗಿ, ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ಹಾಸನ, ಹೊಳೆನರಸೀಪುರ ಮತ್ತು ಕೃಷ್ಣರಾಜನಗರದಲ್ಲಿ ನಿಲುಗಡೆ ಇರುತ್ತದೆ.

(ರೈಲು ಸಂಖ್ಯೆ 06203 ಮತ್ತು 06204) ಒಂದು ಎರಡನೆಯ ದರ್ಜೆ ಎಸಿ, ಮೂರು ಮೂರನೆಯ ದರ್ಜೆ ಎಸಿ, ಎಂಟು ಸ್ಲೀಪರ್ ದರ್ಜೆ ಮತ್ತು ನಾಲ್ಕು ದ್ವಿತೀಯ ದರ್ಜೆ ಆಸನದ ಕೋಚ್‌ಗಳ ಸಂಯೋಜನೆಯನ್ನು ಹೊಂದಿದೆ.

ಮೈಸೂರು-ಚಾಮರಾಜನಗರ ಮತ್ತು ಮೈಸೂರು-ಕೆಎಸ್‌ಆರ್ ಬೆಂಗಳೂರು ನಡುವೆ ಸಂಚರಿಸುವ ದಸರಾ ವಿಶೇಷ ರೈಲುಗಳ ಸಮಯ ಪರಿಷ್ಕರಣೆ.

(ರೈಲು ಸಂಖ್ಯೆ 06597) ಈಗ ಕೆಎಸ್‌ಆರ್ ಬೆಂಗಳೂರಿನಿಂದ 5 ಗಂಟೆಗೆ ಹೊರಟು 8:15 ಗಂಟೆಗೆ ಮೈಸೂರು ತಲುಪಲಿದೆ.

(ರೈಲು ನಂ 06598) ಮೈಸೂರಿನಿಂದ 8:30 ಗಂಟೆಗೆ ಹೊರಟು 11:30 ಗಂಟೆಗೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ. ಈ ವಿಶೇಷ ರೈಲುಗಳು ಹೆಚ್ಚುವರಿ ಜನದಟ್ಟಣೆ ತೆರವುಗೊಳಿಸಲು ಅಕ್ಟೋಬರ್ 20 ರಿಂದ ಅಕ್ಟೋಬರ್ 24 ರವರೆಗೆ ಸೇವೆಗಳನ್ನು ಹೊಂದಿರುತ್ತವೆ.

(ರೈಲು ನಂ 06283) ಮೈಸೂರಿನಿಂದ ಚಾಮರಾಜನಗರಕ್ಕೆ ಅಕ್ಟೋಬರ್ 24 ರಂದು 8:45 ಗಂಟೆಗೆ ಮೈಸೂರಿನಿಂದ ಹೊರಟು 10:40 ಗಂಟೆಗೆ ಚಾಮರಾಜನಗರ ತಲುಪಲಿದೆ. ಹಿಂದಿರುಗುವ ದಿಕ್ಕಿನಲ್ಲಿ (ರೈಲು ನಂ 06284) ಅಕ್ಟೋಬರ್ 24 ರಂದು 11 ಗಂಟೆಗೆ ಚಾಮರಾಜನಗರದಿಂದ ಹೊರಟು ಮರುದಿನ 1 ಗಂಟೆಗೆ ಮೈಸೂರಿಗೆ ತಲುಪುತ್ತದೆ.

ಪ್ರಯಾಣಿಸುವ ಸಾರ್ವಜನಿಕರು ಈ ದಸರಾ ಹಬ್ಬದಲ್ಲಿ ತೊಂದರೆ ರಹಿತ ಪ್ರಯಾಣಕ್ಕಾಗಿ ಈ ವಿಶೇಷ ರೈಲು ಸೇವೆಗಳನ್ನು ಬಳಸಿಕೊಳ್ಳಬಹುದು ಮತ್ತು ಪ್ರಯಾಣಿಕರು ಕಾಯ್ದಿರಿಸದ ಟಿಕೆಟ್‌ಗಳನ್ನು ತೊಂದರೆ ಮುಕ್ತವಾಗಿ ಖರೀದಿಸಲು ಯುಟಿಎಸ್‌ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಹೇಳಿದೆ. 

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X