ನಮ್ಮ ಮೆಟ್ರೋ | ಮಹಿಳೆಯರಿಗಾಗಿ ರೈಲಿನಲ್ಲಿ ಮತ್ತೊಂದು ಬೋಗಿ ಮೀಸಲಿಡಲು ಚಿಂತನೆ

Date:

Advertisements

ರಾಜ್ಯ ರಾಜಧಾನಿ ಬೆಂಗಳೂರಿನ ‘ನಮ್ಮ ಮೆಟ್ರೋ’ ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿದೆ. ಇದೀಗ, ಮಹಿಳೆಯರ ಜತೆಗೆ ಅಸಭ್ಯ ವರ್ತನೆ ಹಾಗೂ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಕಂಡುಬರುತ್ತಿವೆ. ಈ ಹಿನ್ನೆಲೆ, ಮಹಿಳೆಯರಿಗಾಗಿ ಮೆಟ್ರೋ ರೈಲಿನಲ್ಲಿ ಮತ್ತೊಂದು ಬೋಗಿಯನ್ನು ಮೀಸಲಿಡಲು ಚಿಂತನೆ ನಡೆದಿದೆ.

ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಶೀಘ್ರದಲ್ಲೇ ಮಹಿಳೆಯರಿಗೆ ರೈಲಿನಲ್ಲಿ ಎರಡು ಬೋಗಿ ಮೀಸಲಿಡಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಚಿಂತನೆ ನಡೆಸಿದೆ.

ಈ ಬಗ್ಗೆ ಈ ದಿನ.ಕಾಮ್‌ ಜತೆಗೆ ಮಾತನಾಡಿದ ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚವ್ಹಾಣ್, “ಮಹಿಳೆಯರಿಗಾಗಿ ಇನ್ನೊಂದು ಬೋಗಿ ಮೀಸಲಿಡುವ ಬಗ್ಗೆ ಚಿಂತನೆ ನಡೆದಿದೆ” ಎಂದರು.

Advertisements

ಯುವತಿಯರೊಂದಿಗೆ ಅಸಭ್ಯ ವರ್ತನೆ

ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕರ ನಡುವೆಯೇ ಕಾಮುಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನವೆಂಬರ್ 20ರಂದು ನಡೆದಿತ್ತು.

ಕಾಲೇಜಿಗೆ ತೆರಳಲು ಯುವತಿ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದಳು. ಮೆಟ್ರೋ ಹತ್ತುವಾಗ ಕೆಂಪು ಅಂಗಿ ಧರಿಸಿದ್ದ ವ್ಯಕ್ತಿ ಹಿಂದಿನಿಂದ ಆಕೆಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾನೆ ಎಂದು ಆರೋಪಿಸಲಾಗಿತ್ತು. ಮೊದಲಿಗೆ ಆತನ ಅಸಭ್ಯ ವರ್ತನೆ ಯುವತಿಯ ಅರಿವಿಗೆ ಬಂದಿಲ್ಲ. ಪದೇ-ಪದೇ ಅದೇ ರೀತಿ ನಡೆಯುತ್ತಿದ್ದರಿಂದ ಆಕೆಗೆ ಆತನ ವರ್ತನೆ ಅರಿವಾಗಿದೆ. ಬಳಿಕ ಆಕೆ ಸಹ ಪ್ರಯಾಣಿಕರಿಗೆ ಆ ಬಗ್ಗೆ ತಿಳಿಸಿದರೂ ಯಾರು ಆಕೆಯ ನೆರವಿಗೆ ಬಂದಿಲ್ಲ ಎಂದು ದೂರಲಾಗಿತ್ತು.

ಕಿರುಕುಳಕ್ಕೆ ಒಳಗಾದ ಯುವತಿಯ ಸ್ನೇಹಿತರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ತಪ್ಪಿತಸ್ಥನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.

ಮತ್ತೊಂದು ಪ್ರಕರಣ

22 ವರ್ಷದ ಯುವತಿಯೊಬ್ಬರು ಬೆಂಗಳೂರಿನ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ 9:40ರ ಸುಮಾರಿಗೆ ಮೆಟ್ರೋ ಹತ್ತಿದ್ದಾರೆ. ಪೀಕ್ ಅವರ್‌ನಲ್ಲಿ ಹೆಚ್ಚು ಜನಸಂದಣಿ ಕೂಡಿರುವ ಮೆಟ್ರೋದಲ್ಲಿ ಹಿಂದೆ ನಿಂತಿದ್ದ ಆರೋಪಿ ಲೋಕೇಶ್ ಯುವತಿಯ ಮೈ-ಕೈ ಅನ್ನು ಅಶ್ಲೀಲವಾಗಿ ಮುಟ್ಟಿದ್ದಾನೆ. ಇದನ್ನು ಕಂಡ ಯುವತಿ ಜೋರಾಗಿ ಕೂಗಲು ಪ್ರಾರಂಭ ಮಾಡಿದ್ದಾಳೆ. ಈ ವೇಳೆ, ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಮೆಟ್ರೋ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು, ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದರು. ಈ ಘಟನೆ ಡಿಸೆಂಬರ್ 7 ರಂದು ನಡೆದಿತ್ತು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | 5 ವಾಹನಗಳ ನಡುವೆ ಸರಣಿ ಅಪಘಾತ: ಇಬ್ಬರಿಗೆ ಗಾಯ

ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಜನವರಿ 1 ರಂದು ಯುವಕನೊಬ್ಬ ಹಿಂಬದಿಯಿಂದ ಖಾಸಗಿ ಅಂಗವನ್ನ ಮುಟ್ಟಿ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ ಎಂದು ಯುವತಿಯೊಬ್ಬಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ, ವಿಚಾರ ತಿಳಿದ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ಹಿಡಿದಿದ್ದರು. ಈ ವೇಳೆ ಯುವತಿ ಮುಂದೆ ಆತ ತಪ್ಪೊಪ್ಪಿಕೊಂಡಿದ್ದನು.

ನಿತ್ಯ 6 ಲಕ್ಷಕ್ಕೂ ಹೆಚ್ಚು ಜನ ಸಂಚರಿಸುವ ನಮ್ಮ ಮೆಟ್ರೋ ಇತ್ತೀಚೆಗೆ ಕೆಲವು ವಿಷಯಗಳಿಂದ ಸುದ್ದಿಯಾಗುತ್ತಿದೆ. ಈ ಹಿಂದೆ ವಿದೇಶಿ ಯೂಟ್ಯೂಬರ್‌ ಒಬ್ಬರು ಟಿಕೆಟ್ ನೀಡದೆ ಮೆಟ್ರೋದಲ್ಲಿ ಪ್ರಯಾಣಿಸುವುದು ಹೇಗೆ ಎಂದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಇದರ ಬೆನ್ನಲ್ಲೇ, ಕಿಡಿಗೇಡಿಯೊಬ್ಬ ಯುವತಿ ಜತೆಗೆ ಅಸಭ್ಯವಾಗಿ ನಡೆದುಕೊಂಡಿದ್ದು ಸುದ್ದಿಯಾಗಿತ್ತು. ಈ ಘಟನೆಗಳ ಬಳಿಕ ಒಂದಾದ ಮೇಲೋಂದರಂತೆ ಒಂದಿಲ್ಲೊಂದು ವಿಚಾರಕ್ಕೆ ನಮ್ಮ ಮೆಟ್ರೋ ಸುದ್ದಿಯಲ್ಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X