ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ರೈಲು ಚೆನ್ನೈ ಬಂದರಿನಿಂದ ಬೆಂಗಳೂರಿಗೆ ಫೆಬ್ರುವರಿ 14ರಂದು ಆಗಮಿಸಿದೆ.
ನಮ್ಮ ಮೆಟ್ರೋದ ಚಾಲಕ ರಹಿತ ರೈಲು ಆರ್.ವಿ.ರಸ್ತೆ ಹಾಗೂ ಬೊಮ್ಮಸಂದ್ರ ಲೈನ್‌ನಲ್ಲಿ ಪ್ರಾಯೋಗಿಕವಾಗಿ ಸಂಚರಿಸಲಿದೆ.
ಚೀನಾದ ಶಾಂಘೈ ಬಂದರಿನಿಂದ ಜನವರಿ 24ರಂದು ಸಮುದ್ರ ಮಾರ್ಗವಾಗಿ ಚಾಲಕ ರಹಿತ ರೈಲು ಬೋಗಿಗಳನ್ನು ಸಾಗಿಸಲಾಗಿತ್ತು. ಫೆ.6ರಂದು ಚೆನ್ನೈ ಬಂದರಿಗೆ ಬಂದು ತಲುಪಿತ್ತು. ಫೆಬ್ರುವರಿ 14ರಂದು ಬೆಳಗ್ಗೆ 3.30ಕ್ಕೆ ಚೆನ್ನೈ ಬಂದರಿನಿಂದ ರಸ್ತೆ ಮಾರ್ಗದ ಮೂಲಕವಾಗಿ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಚಾಲಕ ರಹಿತ ನಮ್ಮ ಮೆಟ್ರೋ ರೈಲು ಬಂದು ತಲುಪಿದೆ.
ಆರು ಬೋಗಿಗಳನ್ನು ಟ್ರೇಲರ್‌ಗಳ ಮೂಲಕ ಸಾಗಿಸಲಾಗಿದೆ. ಪ್ರತಿ ಕೋಚ್ 38.7 ಮೆಟ್ರಿಕ್ ಟನ್ ತೂಕವಿದೆ. ಈ ಚಾಲಕ ರಹಿತ ರೈಲು ಆರ್‌ವಿ ರಸ್ತೆ-ಬೊಮ್ಮಸಂದ್ರ ಲೈನ್‌ನಲ್ಲಿ ಸಂಚರಿಸಲಿದೆ. ಚೀನಾದ ಸಿಆರ್‌ಆರ್‌ಸಿ ನಾನ್ ಜಿಂಗ್ ಪುಜೆನ್ ಕಂ. ಲಿಮಿಟೆಡ್‌ನಿಂದ ಈ ರೈಲು ತಯಾರಾಗಿದೆ.
ಈ ಸುದ್ದಿ ಓದಿದ್ದೀರಾ? ಅಯೋಧ್ಯೆಗೆ ಮೆಮು ರೈಲು ರವಾನೆ; ಕೋಲಾರ ಜನರ ಪರದಾಟ
ನಮ್ಮ ಮೆಟ್ರೋದ ಫೇಸ್ 2 ಯೋಜನೆಯ ಕಾರಿಡಾರ್ 3ರ ಆರ್‌ವಿ ರಸ್ತೆ – ಬೊಮ್ಮಸಂದ್ರ ಮಾರ್ಗವಾಗಿ ಚಲಿಸಲಿದೆ. ಒಟ್ಟು 19.15 ಕಿಲೋಮೀಟರ್ ಉದ್ದದ ಈ ಹಳದಿ ಮಾರ್ಗಕ್ಕೆ 6 ಬೋಗಿಗಳ ಹೊಸ ರೈಲು ಆಗಮಿಸಿದೆ.
ಚಾಲಕ ಇಲ್ಲದಿದ್ದರೂ ಈಗಾಗಲೇ ಅಳವಡಿಸಲಾದ ಪ್ರೋಗ್ರಾಂ ಆಧಾರದ ಮೇಲೆ ಈ ರೈಲು ಸಂಚರಿಸಲಿದೆ. ರೈಲಿನ ಸಂಚಾರವನ್ನು ಕಂಟ್ರೋಲ್ ರೂಮ್ನಲ್ಲಿ ನಿಗಾ ವಹಿಸಲಾಗುತ್ತದೆ. ಚಾಲಕ ಇಲ್ಲದೇ ಈ ಮೆಟ್ರೋ ಗಂಟೆಗೆ 80 ಕಿ.ಮೀ ವೇಗದಲ್ಲಿ ಚಲಿಸಲಿದೆ. 25 ಕೆವಿ ಸಾಮರ್ಥ್ಯದ ವಿದ್ಯುತ್ ಸಹಾಯದಿಂದ ಸಂಚರಿಸುತ್ತದೆ.
As six metro coaches approach the Hebbagodi depot on the #YellowLine, @Tejasvi_Surya and @PCMohanMP, could we potentially experience the inaugural ride of the Electronic section of #NammaMetro before May? @cpronammametro
pic.twitter.com/RDRQkircCZ— Citizens Movement, East Bengaluru (@east_bengaluru) February 8, 2024
ಸಿಸಿಟಿವಿ ಕ್ಯಾಮೆರಾಗಳನ್ನೂ ಬೋಗಿಗಳಲ್ಲಿ ಅಳವಡಿಸಲಾಗಿದೆ. ಇನ್ನು ಸಂಚಾರದಲ್ಲಿ ಸಮಸ್ಯೆ ಉಂಟಾದರೆ ತಕ್ಷಣ ಓಸಿಸಿಗೆ ಸಂದೇಶ ರವಾನೆ ಆಗಲಿದೆ. ಆಗ ತಕ್ಷಣ ರೈಲಿನ ಸಂಚಾರವನ್ನು ನಿಲ್ಲಿಸಲಾಗುತ್ತದೆ.