ಪ್ರಧಾನ ಮಂತ್ರಿ ಆವಾಸ್ ಯೋಜನೆ(ಗ್ರಾಮೀಣ)ಯಡಿ ಅರ್ಹ ವಸತಿರಹಿತರ ಹಾಗೂ ನಿವೇಶನರಹಿತರ ಸಮೀಕ್ಷೆ ನಡೆಸಲು ಮಾರ್ಚ್ 31ರವರೆಗೆ ನೀಡಿದ್ದ ಕಾಲಾವಕಾಶವನ್ನು ಏಪ್ರಿಲ್ 30ರವರೆಗೆ ವಿಸ್ತರಿಸಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಆದೇಶ ನೀಡಿದೆ.
ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆ(ಗ್ರಾಮೀಣ)ಯಡಿ ಅರ್ಹ ವಸತಿ ರಹಿತರ ಹಾಗೂ ನಿವೇಶನರಹಿತರ ಸಮೀಕ್ಷೆ ನಡೆಸುವ ಕುರಿತು ನಿಗಮವು ಮಾರ್ಚ್ 25ರ ಪತ್ರದಲ್ಲಿ ಜನರಿಗೆ ಜಾಗೃತಿ ಮೂಡಿಸಲು ಗ್ರಾಮ ಪಂಚಾಯಿತಿ/ಗ್ರಾಮ ಮಟ್ಟದಲ್ಲಿ ಜಾಗೃತಿ ಅಭಿಯಾನ(IEC Activity) ಕೈಗೊಂಡು, ಶೇಕಡಾ 100ರಷ್ಟು ಅರ್ಹ ವಸತಿರಹಿತರ ಕುಟುಂಬಗಳ ಸಮೀಕ್ಷೆ ನಡೆಸಲು ಈಗಾಗಲೇ ತಿಳಿಸಿತ್ತು.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಕಳಪೆ ಸೌಲಭ್ಯ; ವಾರ್ಡನ್‌ಗೆ ನೋಟಿಸ್ ನೀಡುವಂತೆ ಜಿ.ಪಂ ಸಿಇಒ ಸೂಚನೆ
ಸದರಿ ಸಮೀಕ್ಷೆಯಲ್ಲಿ ಅರ್ಹ ವಸತಿರಹಿತರು ಕೈಬಿಟ್ಟುಹೋಗಬಾರದೆಂಬ ಕಾರಣದಿಂದ ಏಪ್ರಿಲ್ 4ರವರೆಗೆ ಸಮೀಕ್ಷೆ ನಡೆಸಲು ಗಡುವು ವಿಸ್ತರಿಸಿರುವುದರಿಂದ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಾಗೃತಿ ಅಭಿಯಾನ(IEC Activity) ಕೈಗೊಂಡು ಯಶಸ್ವಿಯಾಗಿ, ನಿಗದಿತ ಅವಧಿಯೊಳಗೆ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲು ಸೂಕ್ತ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಎಲ್ಲ ಜಿಲ್ಲಾ ಪಂಚಾಯತ್ ಸಿಇಒಗಳಿಗೆ ಆದೇಶಿಸಿದೆ.