ಪ್ರಜ್ವಲ್ ಲೈಂಗಿಕ ಹಗರಣ | ಸಂತ್ರಸ್ತೆಯರಿಗೆ ರಕ್ಷಣೆ ನ್ಯಾಯ ಹಾಗೂ ಅಪರಾಧಿಗಳಿಗೆ ಶಿಕ್ಷೆ ನೀಡಬೇಕೆಂದು ಆಗ್ರಹ ಸಮಾವೇಶ

Date:

Advertisements

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರಿಗೆ ರಕ್ಷಣೆ ಹಾಗೂ ನ್ಯಾಯ ನೀಡಬೇಕು. ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಮೇ 14ರಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಸಮಿತಿಯು ಬೆಂಗಳೂರಿನ ಕೆ.ಆರ್. ವೃತ್ತದಲ್ಲಿರುವ ಅಲುಮ್ನಿ ಅಸೋಸಿಯೇಷನ್ ಹಾಲ್‌ನಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನು ಸಂಘಟಿಸಿತು.

ಇತ್ತೀಚೆಗೆ, ಹಾಸನದಲ್ಲಿ ಆಘಾತಕಾರಿಯಾದಂತಹ ಘಟನೆಗಳು ಬೆಳಕಿಗೆ ಬಂದಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಒಬ್ಬ ಹಾಲಿ ಸಂಸದರು ನೂರಾರು ಹೆಣ್ಣು ಮಕ್ಕಳ ಮೇಲೆ ಅತ್ಯಂತ ವಿಕೃತ ರೀತಿಯಲ್ಲಿ ದೌರ್ಜನ್ಯ ಎಸಗಿರುವುದು ವಿಷಾದನೀಯ.

“ಈ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ತನಿಖೆಯನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಿ ಅಪರಾಧಿಗಳಿಗೆ ಉಗ್ರ ಶಿಕ್ಷೆ ನೀಡಬೇಕು. ಸಂತ್ರಸ್ತೆಯರಿಗೆ ಆಪ್ತ ಸಮಾಲೋಚಕರನ್ನು ನೇಮಿಸಿ ಅಗತ್ಯ ವೈದ್ಯಕೀಯ ಕೌನ್ಸಿಲಿಂಗ್ ವ್ಯವಸ್ಥೆಯನ್ನು ಮಾಡಬೇಕು. ಸಂತ್ರಸ್ತ ಮಹಿಳೆಯರಿಗೆ ಸೂಕ್ತ ಭದ್ರತೆ ಖಾತ್ರಿ ಪಡಿಸಬೇಕು. ದೌರ್ಜನ್ಯದ ದೃಶ್ಯಗಳನ್ನೊಳಗೊಂಡ ಪೆನ್ ಡ್ರೈವ್‌ಗಳನ್ನು ಹಾಸನದ ಹಾದಿಬೀದಿಗಳಲ್ಲಿ ಬಿಸಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂಬ ಹಕ್ಕೊತ್ತಾಯಗಳನ್ನು ಸಮಾವೇಶವು ಒತ್ತಾಯಿಸಿತು.

Advertisements

ಈ ವೇಳೆ ಕರ್ನಾಟಕದ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿಗಳಾದ ಸಿ.ಎಚ್.ಹನುಮಂತರಾಯರವರು ಮಾತನಾಡಿ, “ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಹಾಕಲು 41 ಸೆಕ್ಷನ್‌ಗಳಿದ್ದು, ಮಹಿಳೆಯರ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕೇವಲ 24 ಸೆಕ್ಷನ್‌ಗಳಷ್ಟೇ ಇವೆ. ನಾವೆಲ್ಲಿದ್ದೇವೆ” ಎಂದು ಪ್ರಶ್ನಿಸಿದರು.

“ಈ ಪ್ರಕರಣದ ಆರೋಪಿಗಳು ಸಾಕಷ್ಟು ಬಲಶಾಲಿಗಳಾಗಿದ್ದು, ಸಾಕ್ಷಿಗಳನ್ನು ತಿರುಚುವ, ಅಳಿಸಿಹಾಕುವ ಎಲ್ಲ ಸಾಧ್ಯತೆಗಳೂ ಇವೆ. ಈ ಪ್ರಕರಣವು ಹಲವಾರು ಮಗ್ಗಲುಗಳನ್ನು, ಆಯಾಮಗಳನ್ನು ಹೊಂದಿದೆ. ಆರೋಪಿಗಳಾಗಿರುವ ತಂದೆ ಮಗನ ಅಪರಾಧಗಳನ್ನು ನಿರೂಪಿಸುವಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳೆರೆಡೂ ಜವಾಬ್ದಾರರು” ಎಂದು ಸ್ಪಷ್ಟಪಡಿಸಿದರು.

“ಆರೋಪಿಗಳಾದ ರೇವಣ್ಣನವರನ್ನು ಮ್ಯಾಜಿಸ್ಟ್ರೇಟರ ಮುಂದೆ ನಿಲ್ಲಿಸಿದಾಗ ನೀಡುವ ಸ್ಪಷ್ಟೀಕರಣ ನಿಜವಾದದ್ದಾಗಿರುತ್ತದೆ. ನಂತರದ ಸ್ಪಷ್ಟೀಕರಣಗಳು ಅವರ ವಕೀಲರ ಮಾತುಗಳಾಗಿರುತ್ತವೆ. ತನಿಖಾ ತಂಡವು ಆಘಾತಕ್ಕೊಳಗಾದ ಸಂತ್ರಸ್ತೆಯರಿಗೆ ಅವರ ಸ್ಪಷ್ಟಿಕರಣ ನೀಡಲು ಸಾಕಷ್ಟು ಕಾಲಾವಕಾಶವನ್ನು ನೀಡಬೇಕಾಗುತ್ತದೆ ಎಂಬುದರ ಅಗತ್ಯವನ್ನು ಮನಗಾಣಬೇಕಾಗುತ್ತದೆ” ಎಂದು ವಿವರಿಸಿದರು.

“ಸಂತ್ರಸ್ತೆಯರ ಐಡೆಂಟಿಟಿ ಬಟಾಬಯಲಾಗಿರುವುದು ಅವರ ಭವಿಷ್ಯದ ಪ್ರಶ್ನೆಯಾಗಿದೆ. ಹಾಗಾಗಿ ಸಂತ್ರಸ್ತೆಯರಿಗೆ ಪುನರ್ವಸತಿ ಕಲ್ಪಿಸುವಂತೆ ಮಹಿಳಾ ಸಂಘಟನೆಗಳು ಒತ್ತಾಯ ತರಬೇಕೆಂಬ ಸಲಹೆ” ನೀಡಿದರು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಅಖಿಲ ಭಾರತ ಉಪಾಧ್ಯಕ್ಷ ಹಾಗೂ ನಿವೃತ್ತ ಪ್ಲಾಸ್ಟಿಕ್ ಸರ್ಜನ್‌ ಡಾ.ಸುಧಾಕಾಮತ್‌ರವರು ಮಾತನಾಡಿ, “ಪ್ರಜ್ವಲ್ ರೇವಣ್ಣ ಕೇವಲ ಅತ್ಯಾಚಾರಿಯಲ್ಲ, ವಿಕೃತಕಾಮಿ. ಅತ್ಯಾಚಾರ ಎಸಗುವುದಷ್ಟೇ ಅಲ್ಲದೆ ಅದನ್ನು ವಿಡಿಯೋ ಮಾಡಿಟ್ಟುಕೊಂಡು ಹೆಣ್ಣುಮಕ್ಕಳನ್ನು ಬ್ಲಾಕ್‌ ಮೇಲ್ ಮಾಡಲು ಬಳಸುತ್ತಿದ್ದ. ಪೆನ್ ಡ್ರೈವ್‌ಗಳ ಮೂಲಕ ಈ ವಿಡಿಯೋಗಳು ಹಾಸನದ ಹಾದಿ ಬೀದಿಗಳಲ್ಲಿ ಸಿಗುವಂತಾದ್ದರಿಂದ ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳ ಮಾನ ಹರಣವಾಗಿದೆ” ಎಂದರು.

“ಹೆಣ್ಣಮಕ್ಕಳಿಗೆ ಶೀಲವನ್ನು ವೈಭವೀಕರಿಸುತ್ತಿರುವ ಈ ಸಮಾಜದಲ್ಲಿ ಅವರ ಮೇಲೆ ಅತ್ಯಾಚಾರವಾದರೆ ಅತ್ಯಾಚಾರ ಮಾಡಿದ ಪುರುಷನಿಗೆ ಯಾವುದೇ ಶಿಕ್ಷೆಯಾಗದೆ ಆಕೆಯನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ವ್ಯಾಪಕವಾಗಿ ಹರಡುತ್ತಿರುವ ಅಶ್ಲೀಲತೆ ಮನುಷ್ಯನಲ್ಲಿರುವ ಸೂಕ್ಷ್ಮ ಸಂವೇದನೆಗಳನ್ನು ನಾಶಗೊಳಿಸುತ್ತಿದೆ. ಇದಕ್ಕೆ ಬಲಿಯಾಗದೆ ವಿದ್ಯಾರ್ಥಿ ಯುವಜನರು ಈ ಸಮಸ್ಯೆಗಳಿಗೆ ಮೂಲಕಾರಣವಾಗಿರುವ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿ ಹೊಸ ಸಮಾಜದ ನಿರ್ಮಾಣಕ್ಕೆ ಮುಂಬರಬೇಕು” ಎಂದು ಕರೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಕೆಐಎ ರಸ್ತೆಯಲ್ಲಿ 80 ಕಿ.ಮೀಗಿಂತ ವೇಗವಾಗಿ ಚಲಿಸುವ ವಾಹನಗಳ ವಿರುದ್ಧ ಕ್ರಮಕ್ಕೆ ಮುಂದಾದ ಬೆಂಗಳೂರು ಸಂಚಾರ ಪೊಲೀಸ್

ಎಐಎಂಎಸ್‌ಎಸ್‌ನ ರಾಜ್ಯ ಅಧ್ಯಕ್ಷೆ ಎಂ. ಎನ್ ಮಂಜುಳಾ ಅವರು ಮಾತನಾಡಿ, “ಹಾಸನದ ಈ ಘಟನೆ ಇಡೀ ಮನುಕುಲಕ್ಕೆ ಆದ ಅವಮಾನ. ಇಲ್ಲಿ ವಿಕೃತ ಮನಸು ಮಾತ್ರ ಅಲ್ಲದೆ ಅಧಿಕಾರದ ದರ್ಪ ರಾಜಕೀಯ ಬೆಂಬಲ ಈ ದುಷ್ಕೃತ್ಯಕ್ಕೆ ಕಾರಣವಾಗಿದೆ. ಹೆಣ್ಣು ಮಕ್ಕಳನ್ನು ಹಲವು ರೀತಿಯ ಬೆದರಿಕೆಗಳನ್ನೊಡ್ಡಿ ಈ ಕೃತ್ಯವನ್ನು ಎಸಗಿದ್ದಾನೆ. ಕಾನೂನಿನಲ್ಲಿರುವ ಲೋಪ ದೋಷಗಳು ಅಪರಾದಿಗೆ ಶಿಕ್ಷೆಯಾಗುವ ದಿಕ್ಕಿನಲ್ಲಿ ಅಡ್ಡಿಯಾಗಿತ್ತಿದೆ” ಎಂದರು.

ಈ ಸಮಾವೇಶದ ಅಧ್ಯಕ್ಷತೆಯನ್ನು ರಾಜ್ಯ ಕಾರ್ಯದರ್ಶಿಗಳಾದ ಶೋಭಾ ಅವರು ವಹಿಸಿದ್ದರು. ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಿಂದ ಪ್ರತಿನಿಧಿಗಳಿದ್ದರು ಬೆಂಗಳೂರು ನಗರದ ವಿವಿಧ ಬಡಾವಣೆ, ಕಛೇರಿ ಹಾಗೂ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X