ರಾಜ್ಯ ರಾಜಧಾನಿ ಬೆಂಗಳೂರಿನ ಜನತೆ ವರ್ಷದ ಮೊದಲನೆಯ ಹಬ್ಬ, ಸಂಕ್ರಾಂತಿ ಹಬ್ಬವನ್ನ ಸಂಭ್ರಮದಿಂದ ಆಚರಣೆ ಮಾಡೋಕೆ ಸಿದ್ಧರಾಗಿದ್ದಾರೆ. ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿ ಮಾಡೋಕೆ ನಗರದ ಜನತೆ ಕೆ.ಆರ್.ಮಾರುಕಟ್ಟೆ ಸೇರಿದಂತೆ ಹಲವೆಡೆ ಮುಗಿಬಿದ್ದಿದ್ದಾರೆ. ಈ ನಡುವೆ ತರಕಾರಿ, ಹೂ, ಹಣ್ಣು ಬೆಲೆ ಏರಿಕೆ ಬಿಸಿ ತಟ್ಟಿದಂತಾಗಿದೆ. ಈ ಬಾರಿ ತರಕಾರಿಗಳ ಬೆಲೆ ₹10 ರಿಂದ ₹20 ಜಾಸ್ತಿಯಾಗಿದ್ದರೇ, ಹಣ್ಣು-ಹೂವಿನ ಬೆಲೆ ಗಗನಕ್ಕೆ ಏರಿದೆ.
ಸಂಕ್ರಾಂತಿ ಹಬ್ಬಕ್ಕೆ ಬೇಕಾದ ಹೂ, ಹಣ್ಣು, ತರಕಾರಿಗಳನ್ನ ಖರೀದಿ ಮಾಡಲು ಕೆ.ಆರ್.ಮಾರುಕಟ್ಟೆಗೆ ಜನ ಮುಗಿಬಿದ್ದಿದ್ದಾರೆ. ಹೀಗಾಗಿ ಕೆ.ಆರ್.ಮಾರುಕಟ್ಟೆಯ ಸುತ್ತ-ಮುತ್ತ ವಾಹನ ಸಂಚಾರ ದಟ್ಟಣೆ ಹೆಚ್ಚಳವಾಗಿದೆ.
ತರಕಾರಿಗಳ ಇಗೀನ ದರ
ಕ್ಯಾರೆಟ್ ಬೆಲೆ-60 (ಕೆಜಿ), ಬಟಾಣಿ ಬೆಲೆ-40, ಅವರೆಕಾಯಿ ಬೆಲೆ-80, ಬೀನ್ಸ್-60, ಗೆಣಸು-40, ಮೂಲಂಗಿ-40, ನವಿಲುಕೋಸು ಬೆಲೆ-80, ದಪ್ಪ ಮೆಣಸಿನ ಕಾಯಿ-200, ಆಲೂಗೆಡ್ಡೆ-30, ಹಸಿರುಮೆಣಸಿನಕಾಯಿ-60, ಈರುಳ್ಳಿ ಬೆಲೆ-30, ಬೆಳ್ಳುಳ್ಳಿ-280, ಶುಂಠಿ-120, ಟೋಮಾಟೋ ಬೆಲೆ-25, ತೊಂಡೆಕಾಯಿ ಬೆಲೆ-60, ಬದನೆಕಾಯಿ-50, ಹೀರೇಕಾಯಿ ಬೆಲೆ-40 ಇದೆ.
ಹೂವಿನ ದರ
ಸಂಪಿಗೆ 400, ಚೆಂಡು ಹೂ 50, ಸೇವಂತಿಗೆ 150, ಕಾಕಡ 500, ಕನಕಾಂಬರ 600, ಗಣಿಗಲು ಹೂ 300, ತುಳುಸಿ ಮಾರು 50, ದವನ ಕಟ್ ಗೆ 50, ಕಮಲ ಜೋಡಿ 40, ಮಲ್ಲಿಗೆ 1600, ಗುಲಾಬಿ 240,
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರನ್‌ವೇನಲ್ಲಿ ಆವರಿಸಿಕೊಂಡ ಮಂಜು; 34 ವಿಮಾನಗಳ ಹಾರಾಟ ವ್ಯತ್ಯಯ
ಹಣ್ಣುಗಳ ಬೆಲೆ
ಸೇಬು ಕೆಜಿಗೆ 120, ಆರೆಂಜ್ 50, ದ್ರಾಕ್ಷಿ 100, ದಾಳಿಂಬೆ ಕೆಜಿಗೆ 180 ರಿಂದ 140, ಸಪೋಟ ಕೆಜಿಗೆ 100, ಕಿವಿ ಪ್ರೋಟ್ ಕೆಜಿಗೆ 100, ಅನಾಸಸ್ ಕೆಜಿಗೆ ₹50 – 40, ಮೊಸಂಬಿ ಕೆಜಿಗೆ ₹120-125, ಕಪ್ಪ ದ್ರಾಕ್ಷಿ ₹200-200, ಬಾಳೆಹಣ್ಣು ₹70-60, ಕೋವಾ ಕಣ್ಣ ₹120-60, ಗ್ರೀನ್ ಆ್ಯಪಲ್ ₹240-300, ಕಬ್ಬು ಜೋಡಿ ₹100 ಇದೆ.
“ಪ್ರತಿ ಬಾರಿ ಹಬ್ಬ ಬಂದಾಗಲ್ಲೆಲ್ಲ ಹೂವು, ಹಣ್ಣು ಹಾಗೂ ತರಕಾರಿಗಳ ಬೆಲೆ ಧಿಢೀರನೇ ಏರಿಕೆಯಾಗುತ್ತವೆ. ಹೀಗೆ ಆದರೆ, ಜೀವನ ನಡೆಸೋದು ಹೇಗೆ? ನಮಗೆ ಹಬ್ಬ ಮಾಡಲೇಬೇಕು. ಬೆಲೆಗಳು ಏರಿಕೆ ಆದರೂ ಖರೀದಿ ಮಾಡಬೇಕಾಗುತ್ತದೆ” ಎಂದು ಗ್ರಾಹಕರು ಹೇಳಿದ್ದಾರೆ.