ಮೂಲ ಹುಡುಕಿ ಸ್ವೀಡನ್‌ನಿಂದ ಭಾರತಕ್ಕೆ ಬಂದ 39 ವರ್ಷದ ಮಹಿಳೆ

Date:

Advertisements

ಭಾರತದಲ್ಲಿ ಜನಿಸಿದ ಮಗುವನ್ನು 1992ರಲ್ಲಿ ಸ್ವೀಡನ್‌ ಕುಟುಂಬವೊಂದು ದತ್ತು ಪಡೆದಿತ್ತು. ಇದೀಗ, ಆ ಮಹಿಳೆ ತನ್ನ ಸ್ವಂತ ತಂದೆ-ತಾಯಿಯನ್ನು ಹುಡುಕಲು ಭಾರತಕ್ಕೆ ಮರಳಿ ಬಂದಿದ್ದಾರೆ. ಅಲ್ಲದೇ, ತಮ್ಮ ಕುಟುಂಬಸ್ಥರನ್ನು ಹುಡುಕುವುದಕ್ಕೆ ಯಾರಾದರೂ ನೆರವಾಗಿ ಎಂದು ಮನವಿ ಮಾಡಿದ್ದಾರೆ.

ಬೆಂಗಳೂರಿನ ಆಶ್ರಯ ಚಿಲ್ಡ್ರನ್ಸ್‌ ಹೋಂ ಎಂಬ ಸಂಸ್ಥೆಯಿಂದ ಸ್ವೀಡನ್‌ ಕುಟುಂಬವೊಂದು ಎಂಟು ವರ್ಷದ ಬಾಲಕಿಯೊಬ್ಬಳನ್ನು ದತ್ತು ಪಡೆದಿತ್ತು. ಈಗ ಆಕೆಗೆ 39 ವರ್ಷ. ತನ್ನ ಕುಟುಂಬದ ಮೂಲ ಹುಡುಕಿಕೊಂಡು ಸ್ವೀಡನ್‌ ನಿವಾಸಿ ಜಾಲಿ ಸ್ಯಾಂಡ್‌ಬರ್ಗ್ ತನ್ನ ಪತಿ ಎಡಿನ್, ಅವಳ ಮಗಳು ಹಾಗೂ ಅತ್ತೆಯ ಹಾಗೂ ಪುಣೆಯ ವಕೀಲೆ ಅಂಜಲಿ ಪವಾರ್ ಜೊತೆಗೆ ಮೈಸೂರಿಗೆ ಬಂದಿದ್ದಾರೆ. ಅಲ್ಲದೇ, ಮೈಸೂರಿನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಸಾರ್ವಜನಿಕರು ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

swiden-women

ಜಾಲಿ ಸ್ಯಾಂಡ್‌ಬರ್ಗ್ ಅವರ ಮೂಲ ಹೆಸರು ನೆನಪಿರುವಂತೆ ಜಾನು. ಈಕೆ ಎಂಟು ವರ್ಷ ಬಾಲಕಿಯಾಗಿದ್ದಾಗ 1989ರಲ್ಲಿ ಬೆಂಗಳೂರಿನ ಆಶ್ರಯ ಚಿಲ್ಡ್ರನ್ ಹೋಂ ಎಂಬ ಸಂಸ್ಥೆ ಸೇರಿದ್ದರು. ಬಳಿಕ, ಸ್ವೀಡನ್‌ನ ಕುಟುಂಬವೊಂದು ಆಕೆಯನ್ನು ದತ್ತು ಪಡೆದುಕೊಂಡಿತ್ತು. ನಂತರ ಅಲ್ಲಿಯೇ ಬೆಳೆದು ದೊಡ್ಡವರಾದ ಯುವತಿ, ಈಗ ತನ್ನ ಮೂಲ ಕುಟುಂಬದ ಹುಡುಕಾಟದಲ್ಲಿದ್ದಾರೆ.

Advertisements

ನೆದರ್‌ಲ್ಯಾಂಡ್ಸ್‌ನ ಮಕ್ಕಳ ಕಳ್ಳಸಾಗಣೆ ವಿರುದ್ಧದ (ACT) ನಿರ್ದೇಶಕ ಅರುಣ್ ದೋಹ್ಲೆ ಮತ್ತು ಪುಣೆಯ ದತ್ತು ಹಕ್ಕುಗಳ ಮಂಡಳಿಯ ಅಡ್ವೊಕೇಟ್ ಅಂಜಲಿ ಪವಾರ್ ಅವರನ್ನು ಸ್ಯಾಂಡ್‌ಬರ್ಗ್‌ 2017ರಲ್ಲಿ ಸಂಪರ್ಕಿಸಿದರು. ಜಾನು ಈ ಹಿಂದೆ 2020ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.

ಜಾಲಿ ಸ್ಯಾಂಡ್‌ಬರ್ಗ್‌ಗೆ ತಮ್ಮ ಮೂಲವನ್ನು ಹುಡುಕುವ ಹಂಬಲ ಹೆಚ್ಚಾಗಿ ಅಗೇನ್ಸ್ಟ್ ಚೈಲ್ಡ್ ಟ್ರಾಕಿಂಗ್ ಸಂಸ್ಥೆಯನ್ನು 2017ರಲ್ಲಿ ಸಂಪರ್ಕಿಸಿದ್ದರು. ನಂತರ ಅವರಿಂದ ಕೆಲವು ಮಾಹಿತಿ ಪಡೆದುಕೊಂಡ ತಂಡ ಅವರ ಕುಟುಂಬದ ಮೂಲ ಹುಡುಕಲು ಹೊರಟಿತು.

ಸ್ವೀಡನ್

ತೀವ್ರ ಶೋಧ ಕಾರ್ಯಾಚರಣೆಯ ನಂತರ, ಜಾನು ಎಂಬ ಹೆಸರಿನ ಜಾಲಿ ಸ್ಯಾಂಡ್‌ಬರ್ಗ್ ಜೂನ್ 3, 1985ರಂದು ಮದ್ದೂರಿನ ವಸಂತ ಎಂಬುವವರ ಮಗಳಾಗಿ ಜನಿಸಿದಳು. ಆಕೆಯ ತಾಯಿ ವಸಂತ ಎರಡು ವಿವಾಹವಾಗಿದ್ದು, ಮೈಸೂರಿನ ವ್ಯಕ್ತಿಯೊಂದಿಗೂ ವಿವಾಹವಾಗಿದ್ದರು. ಮೈಸೂರಿನ ಮೊದಲ ಪತಿಯೊಂದಿಗೆ ಇದ್ದಾಗ ಜಾನು ಜನಿಸಿದ್ದಳು. ಅವರು ಜಾನು ಮೂರು ವರ್ಷದವಳಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ‌‌‌ಆತ್ಮಹತ್ಯೆ ಬಳಿಕ ಮಹಿಳೆಯು ಚನ್ನಪಟ್ಟಣದವರೊಬ್ಬರನ್ನು ಮದುವೆಯಾಗಿದ್ದರು. ಆಗ ಜಾನು ಪಕ್ಕದ ಮನೆಯ ಜಯಮ್ಮ ಎಂಬುವವರ ಮಡಿಲು ಸೇರಿದ್ದರು. ಯಾವುದೋ ಕಾರಣಕ್ಕೆ 1989ರಲ್ಲಿ ವಸಂತಮ್ಮನೂ ಆತ್ಮಹತ್ಯೆ ಮಾಡಿಕೊಂಡರು. ಅದಕ್ಕೂ ಕಾರಣ ತಿಳಿದು ಬಂದಿಲ್ಲ. ಆದರೆ, ಅವರ ಮರಣೋತ್ತರ ಪರೀಕ್ಷೆ ಮಾಡಿರುವ ಬಗ್ಗೆ ಮಾಹಿತಿ ದೊರೆತಿದೆ.

ಈ ಸಮಯದಲ್ಲಿ ಜಾನು ಅವರನ್ನು ಅವರ ಅಜ್ಜಿಯ ನೆರೆಹೊರೆಯವರಿಗೆ ಒಪ್ಪಿಸಲಾಯಿತು. ಅವರು ಅವಳನ್ನು 1989ರಲ್ಲಿ ಬೆಂಗಳೂರಿನ ಸೇಂಟ್ ಮೇರಿ ಕಾನ್ವೆಂಟ್‌ಗೆ ಸೇರಿಸಿದರು. ಅಲ್ಲಿಂದ ಆಶ್ರಯ ಚಿಲ್ಡ್ರನ್ ಹೋಂಗೆ ಸ್ಥಳಾಂತರಿಸಲಾಯಿತು ಎಂಬ ಮಾಹಿತಿ ದೊರೆತಿದೆ. ಹೀಗೆ ಮದ್ದೂರಿನ ಮೂಲವನ್ನು ಹುಡುಕಿ ಹೊರಟಾಗ ತನ್ನ ಮದ್ದೂರಿನ ಪ್ರೌಢಶಾಲೆ ಪಕ್ಕದ ಮನೆಯಲ್ಲಿದ್ದ ಜಯಮ್ಮ ಎಂಬುವವರು ಸಂಸ್ಥೆಗೆ ನೀಡಿದ್ದರು ಎಂಬುದಾಗಿ ತಿಳಿದು ಬಂದಿದೆ.

ಮದ್ದೂರಿನ ಪ್ರೌಢಶಾಲೆ ಬಳಿಯಿಂದ ಜಾಲಿ ಸ್ಯಾಂಡ್‌ಬರ್ಗ್ ಅವರನ್ನು ಆಶ್ರಮಕ್ಕೆ ಸೇರಿಸಲಾಗಿದೆ ಎಂಬ ಮಾಹಿತಿ ಆಧರಿಸಿ ತೆರಳಿದಾಗ ಅಲ್ಲಿ ಆಕೆಯನ್ನು ಜಾನು ಎಂದು ಕರೆಯುತ್ತಿದ್ದುದಾಗಿ ತಿಳಿದು ಬಂದಿದೆ.

ಸಂಸ್ಥೆಗೆ ತನ್ನನ್ನು ನೀಡಿದವರು ಯಾರು? ಎಂಬುದನ್ನು ತಿಳಿಯಲು ಹೋದರೆ ಆಕೆ ಈ ಹಿಂದೆಯೇ ನಿಧನರಾಗಿದ್ದಾರೆ ಎಂಬುದು ತಿಳಿದುಬಂದಿದೆ. ಈಗ ಅವರ ಮೂಲವನ್ನು ಹಿಡಿದು ಹೊರಟಾಗ ಯಾರೂ ಸಹ ಬದುಕಿಲ್ಲ. ಹೀಗಿದ್ದರೂ ತನಗೆ ಸಹೋದರರು, ಸಹೋದರಿಯರು ಇರಬಹುದು. ಹೀಗಾಗಿ ಅವರ ಹುಡುಕಾಟದಲ್ಲಿರುವುದಾಗಿ ತಿಳಿಸಿದರು.

“ನನ್ನನ್ನು ನಾನು ಅರ್ಥಮಾಡಿಕೊಳ್ಳಲು, ನನ್ನ ಹಿಂದಿನದನ್ನು ನಾನು ತಿಳಿದುಕೊಳ್ಳಬೇಕು. ಅಲ್ಲದೆ, ನನ್ನ ಎರಡು ವರ್ಷದ ಮಗಳಿಗೆ ನಾನು ಎಲ್ಲಿಂದ ಬಂದಿದ್ದೇನೆ ಎಂಬುದನ್ನು ಅವಳಿಗೆ ತೋರಿಸಲು, ಕಲಿಸಲು ಮತ್ತು ನನ್ನ ದೇಶವಾದ ಭಾರತದಲ್ಲಿ ನನ್ನ ಮೊದಲ ಮನೆಯನ್ನು ಅನುಭವಿಸಲು ಬಯಸುತ್ತೇನೆ” ಎಂದು ಸ್ಯಾಂಡ್‌ಬರ್ಗ್ ಅವರು ಹೇಳಿದರು.

ಸ್ವಿಡನ್

”ನನ್ನ ಹೊಸ ದೇಶ ಸ್ವೀಡನ್‌ ನನ್ನ ಮೂಲ ದೇಶ ಅಲ್ಲ. ಇದನ್ನು ನಾನು ಯಾವಾಗಲೂ ಅನುಭವಿಸುತ್ತೇನೆ. ಜನರು ನನಗಿಂತ ಭಿನ್ನವಾಗಿ ಕಾಣುತ್ತಾರೆ. ವಿಭಿನ್ನವಾಗಿ ಮಾತನಾಡುತ್ತಾರೆ. ವಿಭಿನ್ನವಾಗಿ ವರ್ತಿಸುತ್ತಾರೆ. ಸುಮಾರು 8 ವರ್ಷ ವಯಸ್ಸಿನ ಮಗುವಿಗೆ ಇದು ಸಂಪೂರ್ಣವಾಗಿ ವಿಭಿನ್ನ ಜಗತ್ತು ಮತ್ತು ಇದು ಭಯಾನಕವಾಗಿತ್ತು” ಎಂದು ತಿಳಿಸಿದರು.

“ಸ್ವಲ್ಪ ಸಮಯದ ನಂತರ ನಾನು ಬದುಕಲು ಮತ್ತು ಸಾಮಾನ್ಯ ಜೀವನವನ್ನು ನಡೆಸಲು, ಹೊಂದಿಕೊಳ್ಳಲು ಕಲಿತಿದ್ದೇನೆ. ನಾನು ನನ್ನ ಕನ್ನಡ ಭಾಷೆಯನ್ನು ಮತ್ತು ಭಾರತದಲ್ಲಿ ನನ್ನ ಮೊದಲ 8 ವರ್ಷಗಳ ನನ್ನ ನೆನಪುಗಳನ್ನು ದಮನ ಮಾಡಬೇಕಾಗಿತ್ತು. ನಾನು ಬೆಳೆದಾಗ, ನಾನು ಯಾರು ಎಂಬ ಹಂಬಲ ಮತ್ತು ಪ್ರಶ್ನೆಗಳು ಬೆಳೆಯಲು ಪ್ರಾರಂಭಿಸಲಾಯಿತು” ಎಂದು ಅವರು ಹೇಳಿದರು.

ಈ ಸುದ್ದಿ ಓದಿದ್ದೀರಾ? 5,059 ಇವಿ ಚಾರ್ಜಿಂಗ್ ಸ್ಟೇಷನ್‌ಗಳೊಂದಿಗೆ ದೇಶದಲ್ಲಿಯೇ ಅಗ್ರಸ್ಥಾನಕ್ಕೇರಿದ ಕರ್ನಾಟಕ

ಮದ್ದೂರಿನ ಅಕ್ಕಪಕ್ಕದ ಮನೆಯವರು ಅಮ್ಮನ ಕಡೆಯವರೆಲ್ಲ ಸತ್ತಿದ್ದಾರೆ. ಈಗ ಅವಳು ಮೈಸೂರಿನಲ್ಲಿ ತಂದೆಯ ಕಡೆಯ ಸಂಬಂಧಿಕರನ್ನು ಅಥವಾ ಮದ್ದೂರು ಅಥವಾ ಚನ್ನಪಟ್ಟಣದಲ್ಲಿರುವ ಯಾವುದೇ ಸಂಬಂಧಿಕರನ್ನು ಹುಡುಕುತ್ತಿದ್ದಾಳೆ ಎಂದು ವಕೀಲೆ ಹೇಳಿದರು.

“ಜಾಲಿ ಸ್ಯಾಂಡ್‌ಬರ್ಗ್ ಅವರ ಕುಟುಂಬದ ಇತರೆ ಮಾಹಿತಿ ತಿಳಿದುಬಂದಿಲ್ಲ. ಆಕೆಯ ಬಗ್ಗೆ ತಿಳಿದವರು ಇದ್ದರೆ ಮೊ.ಸಂ 9822206485 ಸಂಪರ್ಕಿಸಿ ಮಾಹಿತಿ ನೀಡಬೇಕು” ಎಂದು ಮನವಿ ಮಾಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ‘ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ – ಆರೋಗ್ಯ ಕರ್ನಾಟಕ ‘ ಅಂತಾರಾಷ್ಟ್ರೀಯ ಕಾರ್ಯಾಗಾರ

ಮೈಸೂರಿನಲ್ಲಿ ಭಾರತ ಜೆಎಸ್‌ಎಸ್ ಎಹೆಚ್‌ಇಆರ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ವೊಲ್ವರ್‌ಹ್ಯಾಂಪ್ಸನ್ ವಿಶ್ವವಿದ್ಯಾಲಯದ...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ಮೈಸೂರು | ‘ ನಿರಂತರ ಸಹಜ ರಂಗ – 2025 ‘ಉದ್ಘಾಟಿಸಿದ ಹಿರಿಯ ರಂಗಕರ್ಮಿ ಸಿ ಬಸವಲಿಂಗಯ್ಯ

ಮೈಸೂರಿನ ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ಭಾನುವಾರ ಸಂಜೆ ' ನಿರಂತರ ಸಹಜ...

Download Eedina App Android / iOS

X