ಬೈಯಪ್ಪನಹಳ್ಳಿ ವೆಸ್ಟ್ ಕ್ಯಾಬಿನ್ ಮತ್ತು ಬೈಯಪ್ಪನಹಳ್ಳಿ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಗಳ ನಡುವೆ ವಾರ್ಷಿಕ ಕೇಬಲ್ ಮೇಗರಿಂಗ್ ನಿರ್ವಹಣೆ ಕಾಮಗಾರಿ ನಡೆಯುತ್ತಿರುವುದರಿಂದ ಮೇ 29ರಂದು ಮೂರು ಮೆಮು ರೈಲುಗಳು ರದ್ದುಗೊಳ್ಳಲಿದ್ದು, ಎಂಟು ಮೆಮು ರೈಲುಗಳು ಭಾಗಶಃ ರದ್ದಾಗಲಿವೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ಜತೆಗೆ, ಭಟ್ಕಳ ನಿಲ್ದಾಣದಲ್ಲಿ ಮೇ 29 ರಿಂದ 31 ರವರೆಗೆ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುವುದರಿಂದ ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ಕೊಂಕಣ ರೈಲ್ವೆಯು ಮಾಹಿತಿ ನೀಡಿದೆ.
3 ವಿಶೇಷ ಮೆಮು ರೈಲುಗಳು ರದ್ದು
ರೈಲು ಸಂಖ್ಯೆ 01766 ವೈಟ್‌ಫೀಲ್ಡ್ – ಕೆಎಸ್ಆರ್ ಬೆಂಗಳೂರು, 06561 ಕೆಎಸ್ಆರ್ ಬೆಂಗಳೂರು-ವೈಟ್‌ಫೀಲ್ಡ್ ಮತ್ತು 01773 ಬಂಗಾರಪೇಟ್-ಕೆಎಸ್ಆರ್ ಬೆಂಗಳೂರು ವಿಶೇಷ ಮೆಮು ರೈಲುಗಳು ಮೇ 29 ರಂದು ತಾತ್ಕಾಲಿಕವಾಗಿ ರದ್ದಾಗಲಿದೆ.
8 ವಿಶೇಷ ಮೆಮು ರೈಲುಗಳು ಭಾಗಶಃ ರದ್ದು
- (ರೈಲು ಸಂಖ್ಯೆ 06389) ಕೆಎಸ್ಆರ್ ಬೆಂಗಳೂರು-ಬಂಗಾರಪೇಟೆ ವಿಶೇಷ ಮೆಮು ರೈಲು ಕೆಎಸ್ಆರ್ ಬೆಂಗಳೂರು-ವೈಟ್ ಫೀಲ್ಡ್ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.
- (ರೈಲು ಸಂಖ್ಯೆ 06535/06536) ಚಿಕ್ಕಬಳ್ಳಾಪುರ- ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ ವಿಶೇಷ ಮೆಮು ರೈಲು ಯಲಹಂಕ-ಬೆಂಗಳೂರು ಕಂಟೋನ್ಮೆಂಟ್ ನಡುವೆ ಭಾಗಶಃ ರದ್ದಾಗಲಿದೆ.
- (ರೈಲು ಸಂಖ್ಯೆ 01776/01775) ಮಾರಿಕುಪ್ಪಂ-ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ ವಿಶೇಷ ಮೆಮು ರೈಲು ಕೃಷ್ಣರಾಜಪುರಂ-ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.
- (ರೈಲು ಸಂಖ್ಯೆ 01793/01794) ಮಾರಿಕುಪ್ಪಂ-ಕೃಷ್ಣರಾಜಪುರಂ-ಮಾರಿಕುಪ್ಪಂ ವಿಶೇಷ ಮೆಮು ರೈಲು ಬಂಗಾರಪೇಟೆ-ಕೃಷ್ಣರಾಜಪುರಂ ನಡುವೆ ಭಾಗಶಃ ರದ್ದಾಗಲಿದೆ.
- (ರೈಲು ಸಂಖ್ಯೆ 06529) ಕೆಎಸ್ಆರ್ ಬೆಂಗಳೂರು-ಕುಪ್ಪಂ ವಿಶೇಷ ಮೆಮು ರೈಲು ಕೆಎಸ್ ಆರ್ ಬೆಂಗಳೂರು-ಕೃಷ್ಣರಾಜಪುರಂ ನಡುವೆ ಬಾಗಶಃ ರದ್ದಾಗಲಿದೆ.
ಈ ಸುದ್ದಿ ಓದಿದ್ದೀರಾ? ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಏಕಕಾಲದಲ್ಲೇ ಮೂರು ‘ಒಟಿಟಿ’ಗಳಿಗೆ ಮಾರಾಟ
ರೈಲುಗಳ ಭಾಗಶಃ ರದ್ದು
- ಮೇ 29 ರಂದು ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16585 ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮುರುಡೇಶ್ವರ ಎಕ್ಸ್ ಪ್ರೆಸ್ ರೈಲು ಶಿರೂರು ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. ಶಿರೂರು- ಮುರುಡೇಶ್ವರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.
- ಮೇ 30ರಂದು ರೈಲು ಸಂಖ್ಯೆ 16586 ಮುರುಡೇಶ್ವರ-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್ ಪ್ರೆಸ್ ರೈಲು ಶಿರೂರು ನಿಲ್ದಾಣದಿಂದ ಮಧ್ಯಾಹ್ನ 2.35 ಗಂಟೆಗೆ ಪ್ರಾರಂಭವಾಗಲಿದ್ದು. ಮುರುಡೇಶ್ವರ ಮತ್ತು ಶಿರೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.