ತಾಪಮಾನ | ಬೆಂಗಳೂರಿನಲ್ಲಿ ಶೇ.74 ರಷ್ಟು ಜಲಮೂಲಗಳು ನಾಶ

Date:

Advertisements

ಅಕಾಲಿಕ ಮಳೆಯಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿರು ಬೇಸಿಗೆ ಅರವರಿಸಿದೆ. ತಂಪಿನ ನಗರಿ ಎಂದು ಖ್ಯಾತಿ ಗಳಿಸಿದ್ದ ಬೆಂಗಳೂರು, ಈಗ ಬಿಸಿಲ ನಾಡಾಗಿ ಬದಲಾಗುತ್ತಿದೆ. ಈ ಬಿಸಿಲ ಝಳಕ್ಕೆ, ತಾಪಮಾನ ಹೆಚ್ಚಳಕ್ಕೆ ನಗರದ ಜನರು ಸುಸ್ತಾಗಿದ್ದಾರೆ. ಬೆಳಿಗ್ಗೆ 9ಗಂಟೆ ಬಳಕ ಮನೆಯಿಂದ ಹೊರಗೆ ಓಡಾಡುವುದೇ ಅಸಾಧ್ಯವೆಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ, ನಗರವು ಶೇ.66ರಷ್ಟು ತನ್ನ ಹಸಿರು ಹೊದಿಕೆಯನ್ನು ಕಳೆದುಕೊಂಡಿದೆ. ಅಲ್ಲದೇ, ಶೇ.74 ರಷ್ಟು ಜಲಮೂಲಗಳು ಕೂಡ ನಾಶವಾಗಿವೆ.

ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಗಳ ಕೇಂದ್ರ (ಸಿಇಎಸ್‌) ಪ್ರಕಾರ, ನಗರವು ಶೇ.584ರಷ್ಟು ನಿರ್ಮಾಣ ಪ್ರದೇಶಗಳನ್ನು ಕಂಡಿದೆ. ಈ ಬೇಸಿಗೆಯಲ್ಲಿ ನಗರ ಎಲ್-ನಿನೊ ಪರಿಣಾಮಕ್ಕೆ ಸಿಲುಕಿಕೊಂಡಿದೆ ಎನ್ನುತ್ತಾರೆ ತಜ್ಞರು.

ಇದೇ ಪರಿಸ್ಥಿತಿ ಮುಂದುವರಿದರೆ ಬೆಂಗಳೂರಿನ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. 2038ರ ವೇಳೆಗೆ, ಸಿಇಎಸ್‌ ಅರಣ್ಯಗಳು ಶೇ.0.65ಕ್ಕೆ (2022ರಲ್ಲಿ ನಡೆದಿದ್ದ ಕೊನೆಯ ಗಣತಿ ಪ್ರಕಾರ, ಇದು ಶೇ.3.32 ಇತ್ತು) ಕಡಿಮೆಯಾಗಬಹುದು ಎಂದು ಊಹಿಸಲಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ನಗರದಲ್ಲಿ 2038ರ ವೇಳೆಗೆ ಸುಸಜ್ಜಿತ ಪ್ರದೇಶಗಳು ನಿರ್ಮಾಣವಾಗಬಹುದು. ಆದರೆ, ಪರಿಸ್ಥಿತಿ ಉತ್ತಮವಾಗಿರುವುದಿಲ್ಲ ಎಂದು ಸಿಇಎಸ್ ಅಧ್ಯಯನ ಹೇಳಿದೆ.

Advertisements

“ಸುಸಜ್ಜಿತ ಕಟ್ಟಡಗಳ ನಿರ್ಮಾಣ ಅಥವಾ ಸುಸಜ್ಜಿತ ಮೇಲ್ಮೈಗಳ ಹೆಚ್ಚಳ ಹಸಿರು ಸ್ಥಳಗಳಲ್ಲಿನ ಕಡಿತಕ್ಕೆ ಕಾರಣವಾಗುತ್ತದೆ. ಇದರಿಂದ ಬೆಂಗಳೂರಿನಲ್ಲಿ ಬಿಸಿಲಿನ ಶಾಖವು ಇನ್ನಷ್ಟು ಹೆಚ್ಚಳವಾಗಬಹುದು. ಈ ವರ್ಷ ಮಾರ್ಚ್‌ನಲ್ಲಿ 33.04 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ ಈಗ 41.4 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ” ಎಂದು ಸಿಇಎಸ್‌ ಅಧಿಕಾರಿ ಪ್ರೊ. ಟಿ.ವಿ ರಾಮಚಂದ್ರ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಉಡುಪಿ | ಖಾಸಗಿ ಬಸ್ ಕಂಡಕ್ಟರ್​ಗಳ ಗಲಾಟೆ; ಪುರುಷ ನಿರ್ವಾಹಕನಿಗೆ ಚಪ್ಪಲಿ ತೋರಿಸಿದ ಲೇಡಿ ಕಂಡಕ್ಟರ್

“ನಗರದಲ್ಲಿರುವ ಕೆರೆಗಳು, ಹಸಿರು ಹೊದಿಕೆ ಕಡಿಮೆಯಾಗುತ್ತಿರುವುದು ವಾಯುಗುಣದ ಮೇಲೆ ಪರಿಣಾಮ ಬೀರಿದೆ. ಇದು ತಂಪಾದ ವಾತಾವರಣವನ್ನು ಕಡಿಮೆ ಮಾಡುತ್ತದೆ. ಬಿಸಿ ವಾತಾವರಣವನ್ನು ಹೆಚ್ಚಳ ಮಾಡುತ್ತದೆ. ನಗರ ಶಾಖ ಪರಿಣಾಮವು ಸುತ್ತುವರಿದ ತಾಪಮಾನ ಮತ್ತು ಆರ್ದ್ರತೆಯ ಮಟ್ಟವನ್ನು ಹೆಚ್ಚಿಸುತ್ತದೆ. ಪರಿಣಾಮ ಶಾಖದ ಒತ್ತಡ ಮತ್ತು ಶಾಖ-ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತವೆ” ಎಂದು ರಾಮಚಂದ್ರ ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X