ಬರಗಾಲವನ್ನೂ ಸರಿಸಿ ಸುರಿದ ಮುಂಗಾರು ಪೂರ್ವ ಮಳೆ, ಯಾರ ಅನುಕೂಲಕ್ಕಾಗಿ?

Date:

ಕೃತಿಕಾ ಮಳೆ ಬೇಕಾದಷ್ಟು ಬಂದಿದೆ. ಬಿತ್ತನೆ ಕಾಲ ಹಿಂದಾಗಿದೆ. ಮುಂಗಾರು ಪೂರ್ವ ಬಿತ್ತನೆಯ ಹೊಲಗಳೊಳಗೆ ಅರಿವೆ, ಅಣ್ಣೆ, ಕೊತ್ತಂಗರಿ, ಕನ್ನೆ ಇವೇ ಮೊದಲಾದ ಹೊಲ ಸೊಪ್ಪು ಬೆಳೆದು, ಸೊಪ್ಪು ಕೊಯ್ಯೋರ ಕಾಲು ಕೈಗೆ ಬಿತ್ತನೆ ಬೆಳೆದು ಎಡತಾಕಿರುತ್ತಿತ್ತು. ಮಳೆ ಅಡವಾಗಿ ಬಂದರೂವೆ ತಡವಾಗಿ ಬಂದು ಮುಂಗಾರು ಪೂರ್ವ ಬಿತ್ತನೆ ಈ ವರ್ಷ ನಡೆಯದಂತಾಯಿತು.

ಕಾಲಕ್ಕೆ ಸರಿಯಾಗಿ ಮಳೆಯಾಗಿದ್ದರೆ ಇಷ್ಟೊತ್ತಿಗಾಗಲೇ ಹಸಿರುಕಾಳು ಬೆಳೆ ಮೇಲೆಸಳಿಕ್ಕಿ ಗಿಡದ ಗೆಂಟೆ ದಪ್ಪಾಗಿರುತ್ತಿತ್ತು ಬಡ ಬನಿಯಾಗಿ. ಮುಂಗಾರು ಪೂರ್ವ ಬೆಳೆಗಳು ಒಂದೊ, ಎರಡೋ ಅರ್ತೆ ಬ್ಯಾಸಾಯವನ್ನೂ ಕಾಣಬೇಕಾಗಿತ್ತು. ಅರ್ತೆ ಬೇಸಾಯವಂತೂ ಇಷ್ಟೊತ್ತಿಗಾಗಲೇ ಪ್ರಾರಂಭವಾಗಿರುತ್ತಿತ್ತು. ಯಡೆಗುಂಟೆ ತಾಳುಗಳು, ಉಗುಲು ತೋಡಿ ಯಜ ಸರಿಮಾಡಿ ಈಚಿನಕಡ್ಡಿಗೆ ಆಯವಾದ ಬುಡ್ಡುಗುಂಟೆಗಳು ಹೊಗಳಿ ಮಾರಾಟವಾಗುತಿದ್ದವು ಸಂತೆಹೊರೆಯೊಳಗೆ ಅರ್ತೆ ಬೇಸಾಯಕ್ಕೆ ಅಂಬಲಿಸಿ.

- Advertisement -

ಹಸಿರುಕಾಳು ಹೊಲದ ಕೊರೆಯೊಳಗೋ, ಅಕ್ಕಡಿಯೊಳಗೋ ಅಲಸಂದೆ ಗಿಡ ಬಳ್ಳರಿದು ಯಡೆಕುಂಟೆ ಹೊಡೆಯಲು ಕಷ್ಟ ಸಾಧ್ಯವಾಗಿರುತಿತ್ತು. ಮುಂಗಾರು ಪೂರ್ವ ಬಿತ್ತನೆಯ ಹೊಲಗಳೊಳಗೆ ಅರಿವೆ, ಅಣ್ಣೆ, ಕೊತ್ತಂಗರಿ, ಕನ್ನೆ ಇವೇ ಮೊದಲಾದ ಹೊಲ ಸೊಪ್ಪು ಬೆಳೆದು, ಸೊಪ್ಪು ಕೊಯ್ಯೋರ ಕಾಲು ಕೈಗೆ ಬಿತ್ತನೆ ಬೆಳೆದು ಎಡತಾಕಿರುತ್ತಿತ್ತು. ಮಳೆ ಅಡವಾಗಿ ಬಂದರೂವೆ ತಡವಾಗಿ ಬಂದು ಮುಂಗಾರು ಪೂರ್ವ ಬಿತ್ತನೆ ಈ ವರ್ಷ ನಡೆಯದಂತಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಹಸಿರುಕಾಳು ಮೇಲೆಸಳಿಕ್ಕುವ, ಅಲಸಂದೆ ಬಳ್ಳರಿಯುವ, ಎಳ್ಳು ಹೂವಾಡುವ, ಉದ್ದಿನ ಗಿಡ ಕಾಯಿಕಟ್ಟುವ ಸಂಭ್ರಮಗಳು ಕಣ್ಣಿಗೆ ಕಾಣದಂತಾದವು. ಹೊಲ ಮಾರೆಗಳು ಹಸಿರು ಮೇಯುತ್ತಿವೆ. ಹಾಳುದ್ದ ಬೆಳೆದು ಒಂಟಿಕಾಲಲ್ಲಿ ಕಾಳಿನ ಕೆದರು ತೆನೆಹಿಡಿದು ಗೆಣ್ಣಿಕ್ಕಿ ನಿಲ್ಲುತಿದ್ದ ಮುಂಗಾರು ಜೋಳವೂ ಬಿತ್ತಗೊಡದಂತಾಯಿತು. ಹೊತ್ತಿಗೆ ಸರಿಯಾಗಿ ಮಳೆ ಬರದೆ ಕೈಕೊಟ್ಟ ಕಾರಣವಾಗಿ.

ಹಲವು ತಿಂಗಳುಗಳ ಕಾಲ ತಡವಾಗಿ ಬರಗಾಲವನ್ನೂ ಮೈ ಮೇಲೆ ಎಳೆದುಕೊಂಡು ಅಕಾಲಿಕವಾಗಿ ಬಂತು ಮುಂಗಾರು ಪೂರ್ವ ಮಳೆ. ಇನ್ನೇನು ಈ ವರ್ಷವೂ ಮಳೆ ಹೋಯಿತೇನೋ ಎನ್ನುವ ದುಗಡ ಮಾತ್ರ, ಜನರಲ್ಲಿ ಒಂದಿಷ್ಟು ಕಡಿಮೆಯಾಗಿದೆ, ಇತ್ತೀಚೆಗೆ ಮಳೆ ಬಿದ್ದು. ಗರಿಗೆದರಬೇಕಾಗಿರುವ ವ್ಯವಸಾಯದ ಬದುಕುಗಳು ಮುಲ್ಕಿ ಬಿದ್ದಿವೆ ಮಾಮೂಲಿಯಾಗಿ.

ಕೋಗಿಲೆಗಳು ಬೈಗೂ ಬೆಳಗೂ ಕೂಗುತ್ತಲೇ ಇವೆ. ಇಂದಿಗೂ ಅವು ಎಂದಿನಂತೆ ಮರಗಳ ಕೊಂಬೆಕೊಂಬೆಗೂ ಹಾರಿ. ಮುಂಗಾರು ಪೂರ್ವ ಕಾಲದಲ್ಲಿ ಅವುಗಳ ಆಕ್ರಂದನ ಏನಿರಬಹುದೋ? ಅವು ಕೂಗಿ ಜನರ ಎದೆಯೊಳಗೆ ಮಳೆಯಾಗುವ ಭರವಸೆ ಉಳಿಸಿವೆ. ನೋವು ಏನಿದ್ದಿತೋ, ಏನೋ? ಕೇಳುಗರಿಗೆ ಅವುಗಳ ಧ್ವನಿ ಮಳೆ ತರುವುದೆಂದು ಸಮಾಧಾನ. ಮುಂಗಾರು ಪೂರ್ವ ಕಾಲದಲ್ಲಿ ಅವು ಕೂಗಿಕೊಂಡಂತೆಲ್ಲಾ ಮಳೆ ಬೀಳುವುದೆಂದು ಜನ ನಂಬುವರು. ಒಳಗೊಳಗೇ ಸಂಭ್ರಮಗೊಂಡು ಖುಷಿಯಾಗುವರು. ಕೃಷಿ ಚಟುವಟಿಕೆಗಳು ಪ್ರಾರಂಭವಾಗುತ್ತವೆ ಎಂದು ಕೋಗಿಲೆಗಳು ಕೂಗಿದಂತೆಲ್ಲಾ ಸಂತಸಪಡುವರು.

ಗುಡುಗು, ಸಿಡಿಲು, ಮಿಂಚು ಆರ್ಭಟಿಸಿಕೊಂಡೇನೋ ಸುರಿಯಿತು ಹಗಲೂ ರಾತ್ರಿ ಅವೇಳೆಯೊಳಗೂ ಸಹಿತ ಮಳೆ ಆಗಾಗ. ಮಳೆ ಸುರಿದದ್ದರಿಂದ ಬೆಳೆಗಾರರು ಸಮಾಧಾನಗೊಂಡಿರುವವರಾದರೂ ಮುಂಗಾರು ಪೂರ್ವ ಬಿತ್ತನೆ ಕೈಗೊಳ್ಳಲಾಗಲಿಲ್ಲವಲ್ಲ ಎಂದು ನಿರಾಶೆಗೊಂಡಿದ್ದಾರೆ. ಭೂಮಿಗೆ ಬೀಜ ಬಿದ್ದಿಲ್ಲವಲ್ಲ, ಹಾಗಾಗಿ ಉಳುಮೆದಾರರಲ್ಲಿ ಆತಂಕ ಮಡುಗಟ್ಟಿದೆ. ಕಾರದ ಬಾಯಿಗೆ ಕಾಳುಕಡ್ಡಿ ಹೇಗಾಗುವವೋ? ಎಂದು ನೋವು ಬಿತ್ತನೆದಾರರಿಗೆ.

ಕಳೆಗಂದಿದೆ ಬಿತ್ತನೆಯ ಬದುಕು, ಬಾರೀಕಾಲವೆಲ್ಲಾ ಬೀಳದ ಮಳೆಯಿಂದಾಗಿ. ಬಿತ್ತನೆದಾರರ ಮುಖದಲ್ಲಿ ಆವರಿಸಿಕೊಂಡಿದ್ದ ಬರಗಾಲದ ಛಾಯೆ ಬಿಡುಗಡೆಯಾಗದೆ ಮುಂದುವರಿದಿರುವುದು. ಕೂಲಿ ಪಾಡಿನಿಂದ ಕೃಷಿಕರು ಕೃಷಿಗೆ ಹಿಂದಿರುಗದಂತಾಗಿರುವುದು. ಬೆಳೆ ಆಗದಿದ್ದರೆ ಉಣ್ಣಾಕೇನು ಎಂಬ ಪ್ರಶ್ನೆ ಎಂದಿನಂತೆ ಎದುರಾಗಿದೆ. ಬಿತ್ತನೆಯ ಆಸೆ ಕೈಗೂಡುವಂತಹ ಲಕ್ಷಣಗಳು ಪ್ರಾರಂಭದಲ್ಲೇ ಕ್ಷೀಣವಾದವು ಮಳೆಸುರಿಸದೆಯೇ ಹೋದ ಗಬ್ಬಾಗದ ರಾಸುಗಳಂತಹ ಮೋಡಗಳ ನೋಡಿ.

ರೇವತಿ, ಅಶ್ವಿನಿ, ಭರಣಿ ಮಳೆಗಳು ಹನಿಯದೇ ತಟ್ಕಟ ನಿಂತೇ ಹೋದವು. ಬರಿ ಬಿರುಬಿರು ಬಿಸಿಲೇ ಸುರಿಯಿತು. ಒಣ ನೆಲಕ್ಕೆ ಹೊನ್ನಾರು ಹೂಡುವ ಕೃಷಿ ಕಾರ್ಣೀಕ ನಡೆದವಷ್ಟೆ, ನಾಮಕಾವಸ್ಥೆಗೆ. ಬಿತ್ತನೆದಾರರ ಜೊತೆಯಲ್ಲಿ ಬರಗಾಲ ಕೈಬಿಟ್ಟು ಅರುಗಾಗಲಿಲ್ಲ. ಮುಂಗಾರು ಪೂರ್ವ ಮಳೆ ತೀರಾ ತಡವಾದುದರಿಂದ ಪ್ರಸಕ್ತ ಸಾಲಿನಲ್ಲೂ ರೈತರ ಬದುಕು ಬರಗಾಲದ ಜೊತೆಯಲ್ಲಿಯೇ ಕಾಲದೂಡುವಂತಾಗಿದೆ. ಹಿಂದಾದ ಬೇಸಾಯದ ಕೆಲಸಗಳಿಗೆ ಬದಲಾಗಿ ವಲಸೆ ಹೋಗಿ ಹಿಡಿದ ಪರಸ್ಥಳಗಳ ಕೂಲಿ ಬದುಕಿಗೇ ಖಾಯಂ ಒಗ್ಗಿಕೊಳ್ಳುವಂತಾಗಿದೆ. ಅಕಾಲಿಕವಾದ ಮಳೆ, ಜೊತೆಗೆ ಬರಗಾಲ ಬೇಸಾಯದ ಜೀವನಕ್ಕೆ ಸೋಲುಂಟು ಮಾಡಿದೆ, ಮೇಲಿಂದ ಮೇಲೆ.

ಮುಂಗಾರು ಪೂರ್ವ ಮಳೆ
ಮುಂಗಾರು ಪೂರ್ವ ಮಳೆ

ಹಳ್ಳಿಗಳ ಓಣಿಗಿಳಿದರೆ ಬೋರ್ ವೆಲ್ ಲಾರಿಗಳು ಎದುರಾಗುತ್ತವೆ. ಬರ್ರರ್ರೋ ಎಂದು ಶಬ್ದ ಮಾಡಿ ಹಾರನ್ ಹೊಡೆಯುತ್ತಾ ಬರುವವು. ಎಮ್ಮೆಗಳು ರೊಯ್ಯಾಲೆಯಿಟ್ಟು ಓಡುವ ಹಾಗೆ ಅವುಗಳು ಹೊಲ, ತೋಟಗಳಿಗೆ ಬಂದು ಅಟಕಾಯಿಸಿಕೊಳ್ಳುವವು, ಆಳದ ನೀರು ಎತ್ತಿಕೊಡುವವುಗಳೆಂಬಂತೆ. ಕೊಳವೆಬಾವಿ ತೋಡಿಸಲು ಕರೆತಂದ ರೈತರನ್ನು ಬಹುತೇಕ ಅವು ಸಾಲಗಾರರನ್ನಾಗಿಸಿಯೇ ಹಿಂತಿರುಗುವವು ಬಂದ ದಾರಿಗೆ ದುಪ್ಪಟ್ಟು ಸುಂಕ ವಸೂಲಿ ಮಾಡಿಕೊಂಡು. ತಿರುಗಾಡುವ ಹಾದಿಯೊಳಗೆ ಅವು ಹಗಲೂ ರಾತ್ರಿ ಅಡ್ಡಾಯುತ್ತಲೇಯಿರುತ್ತವೆ. ಊರಿನ ಹೊರಗೆ ನಡೆದರೆ ಕೊಳವೆ ಬಾವಿ ತೋಡುವ ಯಂತ್ರಗಳ ಕಿವಿಗಡಚಿಕ್ಕುವ ದ್ವನಿ. ಆಳದ ನೀರು ತೋರಲು ಓಲಗದ ಜೊತೆಯಲ್ಲಿ ಬೀಳು ಮೇಲೆ ಹೊರಟು ನಿಂತ ಗ್ರಾಮ ದೈವಗಳು. ಅವುಗಳಿಗೆ ರುಮುಗುಟ್ಟುವ ಅರೆ ವಾದ್ಯಗಳ ಉತ್ಸವ. ಅರಿಕೆಗೆ ಆಡುಕುರಿಗಳ ಆವುರ. ಪೊರಕೆ ಹಾಕಿ ಗುಡಿಸುವಷ್ಟು ಮೂಳೆ ಮಾಂಸಗಳ ಎಡೆಯೂಟ. ಪಾತಾಳ ಒಕ್ಕ ಗಂಗೆ. ಮೇಲೆದ್ದು ನಡೆಯಲಾರದಷ್ಟು ಅವಳಿಗೆ ನಿತ್ರಾಣ. ಸಾದಿಲ್ವಾರುಯಿಟ್ಟವರ ಪರದಾಟ ಹೇಳತೀರದಾಗಿದೆ.

ಹಾದಿ ಬೀದಿಯ ಒಳಗೆ ಕೊಳವೆ ಬಾವಿಗಳು ಪೇಲಾದ ಫಲಿತಾಂಶಗಳದ್ದೇ ಮಾತುಕತೆಗಳು. ಮಕ್ಕಳು ಪರೀಕ್ಷೆ ಬರೆದು ಉನ್ನತ ದರ್ಜೆಯಲ್ಲಿ ಪಾಸಾದರೂ ಪೋಷಕರಿಗೆ ತೆಂಗು, ಅಡಿಕೆ ಉಳಿಸಿಕೊಳ್ಳುವ ಅವಸರ. ಅವರಿಗೆ ಸಂತಸ ಪಡಲೂ ಪುರುಸೊತ್ತಿಲ್ಲದಂತಾಗಿದೆ‌. ಆಳದವರೆವಿಗೂ ಕೊರೆದರೂ ದೊರೆಯದ ಅಂತರ್ಜಲ. ಸರ್ಕಾರದ ಮೊರೆ ಹೋದರೆ ಕೇಳುವವರು ಯಾರು? ತೆಂಗು ಅಡಿಕೆ ಉಳಿಸಿಕೊಳ್ಳಲು ದೇವರು, ಶಾಸ್ತ್ರಗಳ ಮೊರೆ ಬಿದ್ದಿರುವರು ನೊಂದ ರೈತಾಪಿ ಜನರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹೋರಾಟಗಳನ್ನು ಹತ್ತಿಕ್ಕಿದ ಗೌಡರ ಹಾಸನದಲ್ಲಿ ಮತ್ತೆ ಮೊಳಗಿದ ಹೋರಾಟದ ಕೂಗು

ಗುಂಡಿ, ಗೊಟರುಗಳು ತುಂಬಿವೆ, ಬಿದ್ದ ಅಕಾಲಿಕ ಮಳೆಯಿಂದ. ನೆಲ ತನುವಾಗಿದೆ ಅಣ್ಣೆ ಚಿಗುರಿ ಅಣಬೆ ಎದ್ದೇಳುವಷ್ಟು. ಹಳ್ಳಗಳು ಹಸಿಯಾಗಿವೆ. ಕೆರೆಗಳಿಗೆ ನೀರು ಹರಿಯುವಷ್ಟೇನೂ ಮಳೆ ಬಿದ್ದಿಲ್ಲ. ಗರಿಕೆ ಚಿಗುರಿ ಅದರ ಗುಣಿ ಒಳಗೆ ನೆಲ ತ್ಯಾವಿಸಿಕೊಂಡಿದೆ. ಬೇರು ತನುವಾಗಿದೆ. ಎಸಳಾಗಿ ಗೆಣ್ಣಿಕ್ಕತೊಡಗಿರುವುದು ಗಂಧ ಗರಿಕೆ. ಬುಡ, ಬೋಟು, ತಾಟು, ಮೋಟಿನ ಬೇರುಗಳಲ್ಲಿ ಹಸಿಯಾಡತೊಡಗಿರುವುದು ಬಿದ್ದ ಮಳೆಯಿಂದ ಅನುಕೂಲವಾಗಿ. ಹುಲ್ಲು ಬೀಜಗಳು ಹುಟ್ಟಿ ಹಳೆಯ ಬೇರುಗಳು ಚಿಗುರುವಂತಹ ಮಳೆ. ದನ, ಕುರಿಗಾರರು ಬಾರೆ, ಹೊಲ ಅಡವಿ ತಿರುಗಾಡುವಂತಾಗಿದೆ ಒಸಿ ತಣ್ಣನೆಯ ನೆಲದ ಮೇಲೆ ಕಾಲೂರಿ.

ತಡವಾಗಿ ಮಳೆ ಬಿದ್ದು ತೆಂಗು, ಅಡಿಕೆಗಳ ಸುಳಿ ಮೇಲೆ ನೀರಾಡಿರುವುದು. ಮುಖ ಇಳಿಬಿಟ್ಟು, ರಸ ಸೋರಿ, ಬುಡಕ್ಕೆ ಗೆದ್ದಲುಯಿಡಿದು, ಕೆಂಪು ಮೂತಿಯ ಹುಳ ಸುಳಿ ಕೊರೆದು ಬಿದ್ದು ಹೋಗುವ ಹಾದಿ ಹಿಡಿದಿದ್ದ ತೆಂಗಿನ ಬೆಳೆ ತಡವಾಗಿ ಬಂದ ಮಳೆಯಿಂದ ಖಳವು ತೇಲಿಕೊಂಡಿದೆ. ಒಣಗುತಿದ್ದ ಅಡಿಕೆ, ತೆಂಗು ಚೇತರಿಸಿಕೊಳ್ಳತೊಡಗಿರುವುದು ನಿಧಾನವಾಗಿ ಉಸಿರೊಯ್ದುಕೊಂಡು. ಇನ್ನೇನು ತೆಂಗು ಆಗಲೇ ಸೀದು ಹೋಗುವಂತಹ ಬಿಸಿಲಿತ್ತು. ಬೆಳೆ ಸುಧಾರಿಸಿಕೊಳ್ಳವಂತಾಗಿದೆ. ನೆಲ ಪಸಿಮೆಯಾಡತೊಡಗಿದೆ. ಬಿಸಿಲು ಮಂಕಾಗಿದೆ. ಬೇಸಾಯಗಾರರ ನಿರೀಕ್ಷೆಗಳು ಈಡೇರದೆ ಹೋದವು. ಬೀಳಿನ ಮೇಲಿದ್ದ ಕೂಳೆ ಕಾಲದ ಹುಲ್ಲೂ ಒಣಗಿ ಹೋಗಿ ಜಾನುವಾರುಗಳಿಗೆ ಮೇವಿನ ಕೊರತೆ. ನೆಲಕ್ಕೆ ಕುಳ ಹಿಡದಂತಾಯಿತು. ನೀರಿನ ಗೊಟ್ಟು, ಮೇವಿನ ಕೊರತೆ, ವಲಸೆಗಳು ನಿಲ್ಲದಂತಾಗಿವೆ. ಮುಂಗಾರು ಬಿತ್ತನೆಗೆ ಮನಸ್ಸಾಗಿದ್ದ ರೈತಾಪಿಗಳು ಜೀವನೋಪಾಯಕ್ಕಾಗಿ ಹಿಡಿದಿದ್ದ ಬಹು ಆಯ್ಕೆಯ ಕೂಲಿ ಕೆಲಸಗಳತ್ತಲೇ ಮುಖ ಮಾಡತೊಡಗಿರುವರು‌, ಹೊಲಗಳ ಕಡೆಯೂ ತಿರುಗಿ ನೋಡದ ಹಾಗೆ. ಬಿತ್ತನೆಯ ಕೆಲಸಗಳು ಪುರುಸೊತ್ತಿಲ್ಲದ ಹಾಗೆ ನಡೆಯಬೇಕಾಗಿದ್ದವು. ಮಳೆ ಕೈಕೊಟ್ಟ ಕಾರಣ ಕೃಷಿಕರು ಕಂಗಾಲಾದರು. ಬರಗಾಲವೇ ಮುಂದುವರಿಯಿತು.

ಮುಂಗಾರು ಪೂರ್ವ ಮಳೆ
ಮುಂಗಾರು ಪೂರ್ವ ಮಳೆ

ಕೃತಿಕಾ ಮಳೆ ಬೇಕಾದಷ್ಟು ಬಂದಿದೆ. ಬಿತ್ತನೆ ಕಾಲ ಹಿಂದಾಗಿದೆ. ಹೆಸರು, ಅಲಸಂದೆ, ಉದ್ದು, ಎಳ್ಳು, ಜೋಳದ ಬಿತ್ತನೆ ನಡೆಯದಂತಾದವು ಮಳೆಯಾಶ್ರಿತ ಬಯಲು ಪ್ರದೇಶದಲ್ಲಿ. ಕೃತಿಕಾ ಮಳೆಗೆ ಮುಂಗಾರು ಬೀಜ ಬಿತ್ತನೆಯಾದರೂ ಉಪಯೋಗವಿಲ್ಲವೆಂಬುದು ಬೇಸಾಯಗಾರರ ಅನುಭವ. ಹಾಗಾಗಿ, ಬಿತ್ತನೆ ಬೀಜಗಳನ್ನು ಕೇಳುವವರೇ ದಿಕ್ಕಿಲ್ಲದಂತಾಗಿದೆ. ಒಂದು ವೇಳೆ ಬಿತ್ತನೆ ನಡೆದರೂ ರಸ ಹೀರುವ ಕೀಟಗಳ ಹಾವಳಿಗೆ ಬೆಳೆ ಹಾಳಾಗುತ್ತದೆ ಎನ್ನುವ ಬೆಳೆಗಾರರು, ರಾಗಿ ಬಿತ್ತನೆಯೂ ಹಿಂದಾಗುತ್ತದೆ ಎನ್ನುವರು. ಕರಿ ಏನಿನಂತಹ ಬೆಳೆಯ ರಸ ಹೀರುವ ಕೀಟ ಬಿತ್ತನೆಗೆ ಅಮರಿಕೊಂಡರೆ ಮೇವಿಗೂ ಒದಗಲಾರದು ಪೈರು.

ಮಳೆಯೇನೋ ಬಿದ್ದಿದೆ. ರಾಸುಗಳು ಬಾಯಾಡುವಂತಹ ಮೇವು ಬೆಳೆದಿಲ್ಲ ಬೀಳಿನ ಮೇಲೆ.

WhatsApp Image 2023 09 02 at 11.06.04
ಉಜ್ಜಜ್ಜಿ ರಾಜಣ್ಣ
+ posts

ಪತ್ರಕರ್ತ, ಲೇಖಕ, ಸಾಮಾಜಿಕ ಹೋರಾಟಗಾರ

ಪೋಸ್ಟ್ ಹಂಚಿಕೊಳ್ಳಿ:

ಉಜ್ಜಜ್ಜಿ ರಾಜಣ್ಣ
ಉಜ್ಜಜ್ಜಿ ರಾಜಣ್ಣ
ಪತ್ರಕರ್ತ, ಲೇಖಕ, ಸಾಮಾಜಿಕ ಹೋರಾಟಗಾರ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ʼಜೆನ್‌ ಝಿʼ ಎಂಬ ಸಮತಾ ನಿಲುವು

ಸುಪ್ರಿಂಕೋರ್ಟಿನ ಮುಖ್ಯಸ್ಥರು ಇದೀಗ ಮತ್ತೊಂದು ಹೇಳಿಕೆಯ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ವಿದ್ಯಾರ್ಥಿ...

ನಿದ್ರೆಯಲ್ಲೂ ಮಿದುಳಿಗೆ ಮಸಾಜ್‌! ಮಾತ್ರೆಯಿಲ್ಲದೆ ಗಾಢ ನಿದ್ರೆ ತರಬಲ್ಲದೇ ಹೊಸ ತಂತ್ರಜ್ಞಾನ?

ಒತ್ತಡದ ಬದುಕಿನಲ್ಲಿ ನೆಮ್ಮದಿಯ ನಿದ್ರೆ ಎನ್ನುವುದೇ ಹಲವರ ಕನಸು. ನಿದ್ರೆಗಾಗಿ ಮಾತ್ರೆಗಳ...

ಸಾರ್ವಜನಿಕ ಸಭ್ಯತೆ ಮತ್ತು ಹೆಣ್ಣುಮಕ್ಕಳು ಮಾಡಿಕೊಳ್ಳುವ ಲೆಕ್ಕಾಚಾರಗಳು

ಫೀಲ್ಡ್‌ಗೆ ಇಳಿದು ಕೆಲಸ ಮಾಡುವಾಗ ಮಹಿಳಾ ಪತ್ರಕರ್ತೆಯರು ಎದುರಿಸುವ ರಿಸ್ಕ್ ಮತ್ತು...