ಕೇಂದ್ರ ಸರ್ಕಾರ ಹಾಗೂ ನಾನಾ ರಾಜ್ಯಗಳಲ್ಲಿ ಉದ್ಯೋಗ ಮಾಡಿ ನಿವೃತ್ತಿ ಹೊಂದಿ ಸದ್ಯ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು ಜೀವ ಪ್ರಮಾಣಪತ್ರ ಸಲ್ಲಿಸಲು ಇನ್ನು ಮೂರು ದಿನ ಮಾತ್ರ ಬಾಕಿ ಉಳಿದಿದೆ.
ಹೌದು, ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಪ್ರತಿಯೊಬ್ಬ ಪಿಂಚಣಿದಾರರು ಪ್ರತಿ ವರ್ಷ ತಾವು ಜೀವಂತ ಇರುವ ಬಗ್ಗೆ ‘ಲೈಫ್ ಸರ್ಟಿಫೀಕೇಟ್’ ಅನ್ನು ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಸಲ್ಲಿಸಬೇಕು. ಈ ವರ್ಷ ಲೈಫ್ ಸರ್ಟಿಫೀಕೇಟ್ ಸಲ್ಲಿಸಲು ನವೆಂಬರ್ 30 ರವರೆಗೂ ಕಾಲಾವಕಾಶ ಇದೆ.
ಒಂದು ವೇಳೆ ಲೈಫ್ ಸರ್ಟಿಫೀಕೇಟ್ ಅನ್ನು ನವೆಂಬರ್ 30ರೊಳಗೆ ಸಲ್ಲಿಸದಿದ್ದರೆ, ಪಿಂಚಣಿದಾರರ ಪಿಂಚಣಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತದೆ. ಈ ನವೆಂಬರ್ 30ರೊಳಗೆ ಪಿಂಚಣಿದಾರರು ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡದಿದ್ದರೆ, ಮುಂಬರುವ ತಿಂಗಳ ಪಿಂಚಣಿ ಬರುವುದಿಲ್ಲ. ಬಳಿಕ, ನೀವು ಪ್ರಮಾಣ ಪತ್ರ ನೀಡಿ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಿಕೊಂಡ ಬಳಿಕ ಮುಂಬರುವ ಪಿಂಚಣಿಯಲ್ಲಿ ಹಳೆಯ ಬಾಕಿ ಸೇರಿಸಿ ಪಿಂಚಣಿ ಹಣ ನಿಮ್ಮ ಖಾತೆಗೆ ಜಮೆ ಆಗುತ್ತದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 20 ದಿನದ ಹಸುಗೂಸು ಮಾರಾಟ; ಸಿಸಿಬಿ ಪೊಲೀಸರ ಕಾರ್ಯಾಚರಣೆ
ಏನಿದು ‘ಲೈಫ್ ಸರ್ಟಿಫಿಕೇಟ್’?
ಪಿಂಚಣಿ ಪಡೆಯುವವರು ಮೃತರಾದ ಬಳಿಕವೂ ಅವರ ಖಾತೆಗೆ ಈ ಪಿಂಚಣಿ ಹಣ ಜಮೆಯಾಗುತ್ತಿತ್ತು. ಹಾಗಾಗಿ, ಇದನ್ನು ತಪ್ಪಿಸಲು ಫಲಾನುಭವಿಗಳು ಪ್ರತಿ ವರ್ಷ ತಾವು ಬದುಕಿರುವ ಬಗ್ಗೆ ಒಂದು ಪ್ರಮಾಣಪತ್ರ ಸಲ್ಲಿಕೆ ಮಾಡುವುದು ಕಡ್ಡಾಯ ಮಾಡಲಾಗಿದೆ.
ಈ ಪ್ರಮಾಣ ಪತ್ರವನ್ನು ಪಿಂಚಣಿದಾರರು ಪೆನ್ಷನ್ ಡಿಸ್ಬರ್ಸಿಂಗ್ ಏಜೆನ್ಸಿ (ಪಿಡಿಎ)ಗೆ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು ಅಥವಾ ಪಿಂಚಣಿ ಹಣ ಪಡೆಯುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ಗೆ ತೆರಳಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು.