ರಾಜ್ಯದಲ್ಲಿ ಕೊರೋನಾ ಬಳಿಕ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗಿದೆ. ಅಲ್ಲದೇ, ಸಡನ್ ಆಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಕ್ಯಾನ್ಸರ್, ಬ್ರೈನ್ ಸ್ಟ್ರೋಕ್, ಶ್ವಾಸಕೋಶ ಸಮಸ್ಯೆ ಸೇರಿದಂತೆ ನಾನಾ ಸಮಸ್ಯೆಗಳು ರಾಜ್ಯದಲ್ಲಿ ಏರಿಕೆ ಕಾಣುತ್ತಿವೆ. ಖಾಯಿಲೆ ಕೊನೆಯ ಹಂತದಲ್ಲಿ ಕಂಡು ಬರುವುದು ಜನರ ಸಾವಿಗೆ ಕಾರಣವಾಗುತ್ತಿದೆ. ಹೀಗಾಗಿ, ಆರೋಗ್ಯ ಇಲಾಖೆ ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಯಾನ್ಸರ್, ಹೃದಯ ಸಂಬಂಧಿ, ಶ್ವಾಸಕೋಶ ಸಮಸ್ಯೆಗಳ ಪತ್ತೆಗೆ ಎಐ (AI) ತಂತ್ರಜ್ಞಾನ ಬಳಕೆ ಮಾಡಲಿದೆ.
ತುರ್ತು ಖಾಯಿಲೆ ಪತ್ತೆ ಮಾಡಲು ಹಾಗೂ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಲು ಎಐ ತಂತ್ರಜ್ಞಾನ ಅನುಕೂಲವಾಗಲಿದೆ. ಇದು ಲಂಗ್ಸ್, ಟಿಬಿ, ಕ್ಯಾನ್ಸರ್, ಶ್ವಾಸಕೋಶ ಸಂಬಂಧಿ, ಗ್ಯಾಸ್ಟ್ರಿಕ್, ಹೃದಯ ಸಂಬಂಧಿ ಸೇರಿದಂತೆ ಯಾವುದೇ ಸಮಸ್ಯೆ ಇದ್ದರೂ ಅದನ್ನು ಪತ್ತೆ ಮಾಡುತ್ತದೆ. ಇದರಿಂದ ವೈದ್ಯರಿಗೆ ಮುನ್ಸೂಚನೆ ಸಿಗಲಿದೆ.
ಪರೀಕ್ಷೆ ವೇಗ ಹೆಚ್ಚಿಸುವ ಉದ್ದೇಶದಿಂದ ಅಸ್ಟ್ರಾಜೆನೆಕಾ ಇಂಡಿಯಾ ಹಾಗೂ ರಾಜ್ಯ ಸರ್ಕಾರ ಪರಸ್ಪರ ಒಡಂಬಡಿಕೆ ಮಾಡಿಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕ್ಯಾನ್ಸರ್ಗೆ ತುತ್ತಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಪ್ರಾಥಮಿಕ ಹಂತದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆ ಸೇರಿದಂತೆ 29 ಜಿಲ್ಲಾ ಆಸ್ಪತ್ರೆಗಳಲ್ಲಿ ಎಐ ಬಳಕೆಗೆ ಆರೋಗ್ಯ ಇಲಾಖೆ ಮುಂದಾಗಿದೆ.
ಎಐ ಕೃತಕ ಬುದ್ಧಿಮತ್ತೆಯಿಂದ ಶ್ವಾಸಕೋಶ ಕ್ಯಾನ್ಸರ್ ತಪಾಸಣೆ ಸ್ಕ್ರೀನಿಂಗ್ ತಂತ್ರಜ್ಞಾನ ಅಳವಡಿಸಲಿದ್ದು, ಆರಂಭಿಕ ಹಂತದಲ್ಲೇ ಶ್ವಾಸಕೋಶ ಕ್ಯಾನ್ಸರ್ ಪತ್ತೆಗೆ ಇದು ಅನುಕೂಲವಾಗಲಿದೆ. ಕ್ಯಾನ್ಸರ್‌ನ್ನು ಆರಂಭಿಕವಾಗಿ ಪತ್ತೆ ಹಚ್ಚಲಿದೆ.
ಈ ಸುದ್ದಿ ಓದಿದ್ದೀರಾ? ಮಾಜಿ ಸಚಿವ ಕೆ.ಗೋಪಾಲಯ್ಯ ಅವರಿಗೆ ಕೊಲೆ ಬೆದರಿಕೆ: ದೂರು ದಾಖಲು
ಕೆಲಸ ಆರಂಭಿಸಿದ ಎಐ
ರಾಜ್ಯದಲ್ಲಿ ಮೊದಲ ಬಾರಿಗೆ ಕೆಸಿ ಜನರಲ್ ಸರ್ಕಾರಿ ಆಸ್ಪತ್ರೆಯಲ್ಲಿ ಎಐ ಕೆಲಸ ಆರಂಭಿಸಿದೆ. 2,148 ರೋಗಿಗಳ ಸ್ಕ್ಯಾನಿಂಗ್ ಪೈಕಿ 909 ಅಸಹಜ ಲಕ್ಷಣ ಸಮಸ್ಯೆ ಹೊಂದಿರುವವರನ್ನು ಇದು ಗುರುತು ಮಾಡಿದೆ. 328 ರೋಗಿಗಳಲ್ಲಿ ಟಿಬಿ ಲಕ್ಷಣ ಚಿಕಿತ್ಸೆಯ ಅವಶ್ಯಕತೆಯನ್ನು ಗುರುತು ಮಾಡಿದೆ.
ಎಐ ಕೃತಕ ಬುದ್ಧಿಮತ್ತೆಯಿಂದ ಶ್ವಾಸಕೋಶ ಕ್ಯಾನ್ಸರ್ ತಪಾಸಣೆ ಸ್ಕ್ರೀನಿಂಗ್ ತಂತ್ರಜ್ಞಾನ ಅಳವಡಿಸಲಿದ್ದು, ಆರಂಭಿಕ ಹಂತದಲ್ಲೇ ಶ್ವಾಸಕೋಶ ಕ್ಯಾನ್ಸರ್ ಪತ್ತೆಗೆ ಇದು ಅನುಕೂಲವಾಗಲಿದೆ.