ಅಪ್ರಾಪ್ತನೊಬ್ಬ ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದಿದ್ದು, ಆತನಿಗೆ ವಾಹನ ಕೊಟ್ಟ ಮಾಲೀಕನನ್ನು ದೂಷಿ ಎಂದು ಪರಿಗಣನೆ ಮಾಡಿ 2ನೇ ಎಂಎಂಟಿಸಿ ಸಂಚಾರ ನ್ಯಾಯಾಲಯ ₹25,200 ದಂಡ ವಿಧಿಸಿ ಆದೇಶಿಸಿದೆ.
ನ್ಯಾಯಾಲಯದಲ್ಲಿ ಪ್ರಕರಣದ ವಿಚಾರ ನಡೆದು ಬಾಲಕ ದೂಷಿ ಎಂದು ಸಾಬೀತಾಗಿತ್ತು. ಈ ಹಿನ್ನೆಲೆ, ಬಾಲಕನಿಗೆ ₹2,000 ದಂಡ ಹಾಗೂ ಅಪಾಪ್ತ ವಯಸ್ಕನಿಗೆ ವಾಹನ ಚಾಲನೆ ಮಾಡಲು ನೀಡಿದ ವಾಹನ ಮಾಲೀಕ ಸೆಲ್ವಮ್ (59) ಅವರಿಗೆ ₹25,200 ದಂಡ ಕಟ್ಟುವಂತೆ ನ್ಯಾಯಾಲಯ ಆದೇಶ ನೀಡಿದೆ.
ಏನಿದು ಪ್ರಕರಣ?
2023ರ ಜನವರಿ 9ರಂದು ಸಂಜೆ 4.30ರ ಸುಮಾರಿಗೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಇಬ್ಬರು ಅಪ್ರಾಪ್ತರು ವ್ಹೀಲಿಂಗ್ ಮಾಡುತ್ತಿದ್ದರು.
ಇದನ್ನು ಗಮನಿಸಿದ ಕರ್ತವ್ಯನಿರತ ಪೊಲೀಸರು ವ್ಹೀಲಿಂಗ್ ಮಾಡುವುದನ್ನು ತಡೆದು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬೆಂಗಳೂರಿನ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ದೀರ್ಘಕಾಲದ ಪ್ರಕರಣ: ರಾಜ್ಯದ ಪೊಲೀಸರಿಂದ 200 ಮಂದಿ ಆರೋಪಿಗಳ ಬಂಧನ
ವ್ಹೀಲಿಂಗ್ ಮಾಡುತ್ತಿದ್ದವನು ಬಾಲಕನಾದ ಕಾರಣ ಆತನ ವಿರುದ್ಧ ಬಾಲ ನ್ಯಾಯಮಂಡಳಿಗೆ ದೋಷಾರೋಪಣಾ ಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ವೇಳೆ, ಬಾಲಕ ದೂಷಿ ಎಂಬುದು ಸಾಬೀತಾಗಿತ್ತು. ಹೀಗಾಗಿ, ಬಾಲಕನಿಗೆ ₹2,000 ಹಾಗೂ ವಾಹನದ ಮಾಲೀಕನಿಗೆ ₹25,200 ದಂಡ ವಿಧಿಸಿ 2ನೇ ಎಂಎಂಟಿಸಿ ಸಂಚಾರ ನ್ಯಾಯಾಲಯ 2023 ಜೂನ್ 5ರಂದು ಆದೇಶಿಸಿತ್ತು.