- ಅಮೂಲ್ಯವಾದ ಓಟಿನ ಜೊತೆ ಉದಾರವಾಗಿ ಕಾಣಿಕೆ ಕೊಡಬೇಕೆಂದು ಮನವಿ
- ಜನಸಾಮಾನ್ಯರ ಜೊತೆ ನಿರಂತರ ಸಂಪರ್ಕವಿರುವ ಅಭ್ಯರ್ಥಿ ಗೆಲ್ಲಿಸುವಂತೆ ಕರೆ
ಯಾದಗಿರಿ ವಿಧಾನಸಭಾ ಕ್ಷೇತ್ರದ ಎಸ್‌ಯುಸಿಐ (ಕಮ್ಯುನಿಸ್ಟ್) ಅಭ್ಯರ್ಥಿ ಕೆ ಸೋಮಶೇಖರ್ ಜನಸಾಮಾನ್ಯರ ಬಳಿ ಹೋಗಿ ‘ಓಟು ಕೊಡಿ, ನೋಟು ಕೊಡಿ’ ಎಂಬ ಅಭಿಯಾನದ ಮೂಲಕ ಮತಯಾಚನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಯಾದಗಿರಿ ವಿಧಾನಸಭಾ ಕ್ಷೇತ್ರದ ಸುಭಾಷ್ ವೃತ್ತದಲ್ಲಿ ಅಂಗಡಿಮುಗ್ಗಟ್ಟುಗಳಿಗೆ ತೆರಳಿದ ಕೆ ಸೋಮಶೇಖರ್, “ನಾನು ಹಲವು ವರ್ಷಗಳಿಂದ ಜನರ ಸಮಸ್ಯೆಗಳ ಕುರಿತು ನಿರಂತರವಾಗಿ ಹೋರಾಟ ಮಾಡುತ್ತಿದ್ದೇನೆ. ಯಾದಗಿರಿ ಮತಕ್ಷೇತ್ರದ ಜನತೆಯು ತಮ್ಮ ಅಮೂಲ್ಯವಾದ ಓಟನ್ನು ನಮಗೆ ನೀಡುವುದರ ಜೊತೆಗೆ ಉದಾರವಾಗಿ ಕಾಣಿಕೆ ಕೊಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ?: ಅರಸೀಕೆರೆ | ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಜಟಾಪಟಿ
“ಕಾಂಗ್ರೇಸ್, ಬಿಜೆಪಿ, ಜೆಡಿಎಸ್‌ಗಳು ಬಂಡವಾಳಶಾಹಿಗಳಿಂದ ದುಡ್ಡು ತೆಗೆದುಕೊಂಡು ಅಧಿಕಾರಕ್ಕೆ ಬಂದ ನಂತರ ಅವರ ಪರವಾಗಿ ನೀತಿಗಳನ್ನು ರೂಪಿಸುತ್ತವೆ. ಆದರೆ, ನಮ್ಮ ಪಕ್ಷವು ಸಂಪೂರ್ಣವಾಗಿ ಜನರ ಮೇಲೆಯೇ ಅವಲಂಬಿತವಾಗಿದ್ದು, ಜನರೇ ಪಕ್ಷಕ್ಕೆ ತನು-ಮನ-ಧನದಿಂದ ಬೆಂಬಲವಾಗಿ ನಿಲ್ಲಬೇಕು” ಎಂದು ಹೇಳಿದರು.
ನಗರದ ಹಲವು ಅಂಗಡಿಗಳಿಗೆ ತೆರಳಿದ ಇವರು ಅಲ್ಲಿ ನೆರೆದಿದ್ದ ಜನರಲ್ಲಿ ಮತ ಯಾಚಿಸುವುದರ ಜೊತೆಗೆ ನಿಧಿ ಸಂಗ್ರಹವನ್ನೂ ಮಾಡಿದರು. ಈ ವೇಳೇ ಪಕ್ಷದ ರಾಜ್ಯ ಸಮಿತಿ ಸದಸ್ಯ ವಿ. ಎನ್. ರಾಜಶೇಖರ್, ಜಿಲ್ಲಾ ಮುಖಂಡ ಡಿ. ಉಮಾದೇವಿ, ರಾಮಲಿಂಗಪ್ಪ ಬಿ ಎನ್, ಶಿವರಾಜ್, ಸುಭಾಷ್ ಚಂದ್ರ, ಶಿಲ್ಪಾ ಬಿ.ಕೆ ಸೇರಿದಂತೆ ಹಲವರು ಹಾಜರಿದ್ದರು.