ಋತುಸ್ರಾವಕ್ಕೆ ಸಂಬಂಧಿಸಿದ ಆರೋಗ್ಯವನ್ನು ಸಮಗ್ರ ಸಾರ್ವಜನಿಕ ಆರೋಗ್ಯ ನೀತಿಯ ಭಾಗವಾಗಿಸುವ ಪ್ರಯತ್ನಗಳು ತೀರಾ ವಿರಳ. ಮುಟ್ಟನ್ನು ಇನ್ನೂ ನಿಷೇಧಿತ ವಿಷಯದಂತೆಯೇ ನೋಡುತ್ತಿರುವ ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ 'ಋತುತಾರೆ' ಯೋಜನೆ ಸ್ವಾಗತಾರ್ಹ....
ಭಾರತವನ್ನೂ ಒಳಗೊಂಡ ಆಗ್ನೇಯ ಏಷ್ಯಾ ವಲಯದಲ್ಲಿ ಆರೋಗ್ಯಕರ ಜೀವಿತಾವಧಿ ಮಟ್ಟ ಜಾಗತಿಕ ಸರಾಸರಿಗಿಂತ ಕೆಳಗಿದೆ. ಸಾಮಾಜಿಕ ಮತ್ತು ವೈದ್ಯಕೀಯ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಿಲುಕಿ ತತ್ತರಿಸುತ್ತಿರುವ ಮಹಿಳೆಯರ ದುಸ್ಥಿತಿ ಈಗಲಾದರೂ ಬದಲಾಗಬೇಕು. ಹೆಣ್ಣು...