ಎಫ್‌ಬಿಐಗೆ ಇರಾನ್ ಹ್ಯಾಕರ್‌ಗಳ ಸೆಡ್ಡು: ಜಪ್ತಿಯಾದ ಒಂದೇ ದಿನದಲ್ಲಿ ವೆಬ್‌ಸೈಟ್ ಮತ್ತೆ ಪ್ರತ್ಯಕ್ಷ!

Date:

ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ಮತ್ತು ನ್ಯಾಯಾಂಗ ಇಲಾಖೆ (DOJ) ನಾಲ್ಕು ಡೊಮೇನ್‌ಗಳನ್ನು ವಶಪಡಿಸಿಕೊಂಡ ಕೇವಲ ಒಂದು ದಿನದ ಬಳಿಕ, ಇರಾನ್ ಸರ್ಕಾರಿ ಬೆಂಬಲಿತ ಹ್ಯಾಕಿಂಗ್ ಗುಂಪು ತನ್ನ ಆನ್‌ಲೈನ್ ಜಾಲವನ್ನು ಮರುಸ್ಥಾಪಿಸಿದೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

- Advertisement -

ಅಮೆರಿಕದ ವೈದ್ಯಕೀಯ ಉಪಕರಣಗಳ ದೈತ್ಯ ಕಂಪನಿ ‘ಸ್ಟ್ರೈಕರ್’ (Stryker) ಮೇಲೆ ಮಾರ್ಚ್‌ 11ರಂದು ನಡೆದ ಸೈಬರ್ ದಾಳಿಯ ಹೊಣೆಯನ್ನು ಈ ‘ ಹಂಡಾಲ’ (Handala) ಗುಂಪು ಹೊತ್ತುಕೊಂಡಿತ್ತು. ರಾಯಿಟರ್ಸ್‌ ಸುದ್ದಿಸಂಸ್ಥೆಯ ವರದಿಯ ಪ್ರಕಾರ, ಶುಕ್ರವಾರ(ಮಾ.20)ರಂದು ತನ್ನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಹಂಡಾಲ ಗುಂಪು, “ಈ ಜಪ್ತಿ ಕಾರ್ಯಾಚರಣೆಯು ಹಂಡಾಲದ ಧ್ವನಿಯನ್ನು ಹತ್ತಿಕ್ಕಲು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಹತಾಶ ಪ್ರಯತ್ನ’ ಎಂದು ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

​ಅಮೆರಿಕದ ಅತಿದೊಡ್ಡ ವೈದ್ಯಕೀಯ ಉಪಕರಣಗಳ ತಯಾರಕ ‘ಸ್ಟ್ರೈಕರ್’ ಮೇಲೆ ಸೈಬರ್ ದಾಳಿ ನಡೆಸಿದ್ದ ‘ಹಂಡಾಲ ಹ್ಯಾಕ್ ಟೀಮ್‌’ಗೆ ಸೇರಿದ ನಾಲ್ಕು ಇಂಟರ್ನೆಟ್ ಡೊಮೇನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಮಾರ್ಚ್ 19 ರಂದು ಘೋಷಿಸಿತ್ತು. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಗುಪ್ತಚರ ಮತ್ತು ಭದ್ರತಾ ಸಚಿವಾಲಯ (MOIS) ನಡೆಸುತ್ತಿರುವ ಹ್ಯಾಕಿಂಗ್ ಮತ್ತು ಅಂತಾರಾಷ್ಟ್ರೀಯ ದಮನಕಾರಿ ಯೋಜನೆಗಳನ್ನು ವಿಫಲಗೊಳಿಸುವ ನಿರಂತರ ಪ್ರಯತ್ನದ ಭಾಗವಾಗಿ ಈ ನಾಲ್ಕು ಡೊಮೇನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನು ಓದಿದ್ದೀರಾ? ಬಿಜೆಪಿ ಅಸ್ತ್ರಕ್ಕೆ ಟಿಎಂಸಿ ಪ್ರತ್ಯಸ್ತ್ರ; ಸುವೇಂದು ಎದುರು ಸ್ಪರ್ಧಿಸಿರುವ ‘ಪಬಿತ್ರ ಕರ್’ ಯಾರು ಗೊತ್ತೆ?

ಜಪ್ತಿಯಾದ Justicehomeland[.Jorg, Handala-Hack[.Jto, Karmabelow80|.Jorg, ಹಾಗೂ Handala-Redwanted[.Jto ಡೊಮೇನ್‌ಗಳನ್ನು ಆಡಳಿತದ ವಿರೋಧಿಗಳನ್ನು ಗುರಿಯಾಗಿಸಿ ಮಾನಸಿಕ ಕಾರ್ಯಾಚರಣೆಗಳನ್ನು ನಡೆಸಲು, ಹ್ಯಾಕಿಂಗ್ ಕೃತ್ಯಗಳ ಹೊಣೆ ಹೊತ್ತುಕೊಳ್ಳಲು, ಕದ್ದ ಸೂಕ್ಷ್ಮ ಡೇಟಾವನ್ನು ಪ್ರಕಟಿಸಲು ಹಾಗೂ ಪತ್ರಕರ್ತರು, ಆಡಳಿತದ ಭಿನ್ನಮತೀಯರು ಮತ್ತು ಇಸ್ರೇಲಿಗರ ಹತ್ಯೆಗೆ ಕರೆ ನೀಡಲು ಇರಾನ್‌ನ MOIS ಬಳಸುತ್ತಿತ್ತು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

​ಮಾರ್ಚ್ 11, 2026 ರಂದು ಅಮೆರಿಕದ ಪ್ರಮುಖ ಬಹುರಾಷ್ಟ್ರೀಯ ವೈದ್ಯಕೀಯ ತಂತ್ರಜ್ಞಾನಗಳ ಸಂಸ್ಥೆಯ ಮೇಲೆ ನಡೆದ ಸೈಬರ್ ದಾಳಿಯ ಕುರಿತು ಎಫ್‌ಬಿಐ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅಮೆರಿಕ ಮೂಲದ ಈ ಸಂಸ್ಥೆಯ ಮೇಲೆ ವಿನಾಶಕಾರಿ ಮಾಲ್‌ವೇರ್ ದಾಳಿ ನಡೆಸಿದ ಪಿತೂರಿಯಲ್ಲಿ ‘ಹಂಡಾಲ’ ಆಪರೇಟರ್‌ಗಳ ಕೈವಾಡವಿದೆ ಎಂದು ನಂಬಲು ಬಲವಾದ ಕಾರಣಗಳಿವೆ ಎಂದು ನ್ಯಾಯಾಂಗ ಇಲಾಖೆಯ ವಕ್ತಾರರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

​ಸೈಬರ್ ಭದ್ರತಾ ತಜ್ಞರ ಪ್ರಕಾರ, ಹಂಡಾಲದ ಈ ಕ್ಷಿಪ್ರ ಪುನರಾಗಮನ ಅಚ್ಚರಿಯೇನಲ್ಲ. ಫೌಂಡೇಶನ್ ಫಾರ್ ಡಿಫೆನ್ಸ್ ಆಫ್ ಡೆಮಾಕ್ರಸೀಸ್ ಸೆಂಟರ್ ಆನ್ ಸೈಬರ್ ಅಂಡ್ ಟೆಕ್ನಾಲಜಿ ಇನ್ನೋವೇಶನ್‌ನ ಸಹಾಯಕ ಫೆಲೋ ಆಗಿರುವ ಆರಿ ಬೆನ್ ಆಮ್ ಅವರ ಪ್ರಕಾರ, ಇರಾನ್‌ನ ಬೆದರಿಕೆಕೋರರಿಗೆ, ವಿಶೇಷವಾಗಿ MOISಗೆ ಇಂತಹ ಜಪ್ತಿ ಕಾರ್ಯಾಚರಣೆಗಳು ಹೊಸದೇನಲ್ಲ. ಈ ಹಿಂದೆಯೂ ಹಂಡಾಲದ ಹತ್ತಾರು ಟೆಲಿಗ್ರಾಮ್ ಚಾನೆಲ್‌ಗಳು, ಎಕ್ಸ್ (ಟ್ವಿಟರ್) ಖಾತೆಗಳು ಮತ್ತು ಡೊಮೇನ್‌ಗಳನ್ನು ಸ್ಥಗಿತಗೊಳಿಸಲಾಗಿದೆ, ಆದರೆ ಇವ್ಯಾವುವೂ ಅವರನ್ನು ಗಮನಾರ್ಹವಾಗಿ ನಿಧಾನಗೊಳಿಸಿಲ್ಲ ಎಂದು ಅವರು ಹೇಳಿದ್ದಾರೆ.

ಹಂಡಾಲ ಮತ್ತು ಅದರ ಆಪರೇಟರ್‌ಗಳು ತಮ್ಮ ಕಂಟೆಂಟ್ ಅನ್ನು ಬೇರೊಂದು ಡೊಮೇನ್‌ನಲ್ಲಿ ಅತಿ ಶೀಘ್ರವಾಗಿ ಮರಳಿ ತರುವುದು ಅವರಿಗೆ ಬಹಳ ಸುಲಭದ ಕೆಲಸ ಎಂದು ಬೆನ್ ಆಮ್ ವಿಶ್ಲೇಷಿಸಿದ್ದರು; ಅವರ ಈ ಮುನ್ನೋಟದಂತೆಯೇ ಕೇವಲ ಒಂದೇ ದಿನದಲ್ಲಿ ವೆಬ್‌ಸೈಟ್ ಮತ್ತೆ ಆನ್‌ಲೈನ್‌ನಲ್ಲಿ ಪ್ರತ್ಯಕ್ಷವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಮರಣಾನಂತರ ದೇಹದಾನಕ್ಕೆ ಮುಂದಾದ ಮೂವರು ಶಿಕ್ಷಕರು, ಸಾಹಿತಿ

ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗೆ ನೆರವಾಗುವ ಉದ್ದೇಶದಿಂದ ಮರಣಾನಂತರ ತಮ್ಮ...

‘ಮಹಿಳೆಯರನ್ನು ಗೌರವಿಸುವ ಯುವಜನತೆಯ ಮುಂದೆ ಬಿಜೆಪಿಯ ನಿಜಬಣ್ಣ ಬಯಲಾಗಿದೆ’: ಪ್ರಕಾಶ್ ರಾಜ್

ದೇಶದ ವಿವಿಧ ಭಾಗಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ಯುವಜನತೆಯನ್ನು ಶ್ಲಾಘಿಸಿರುವ ನಟ...

ಇಂಡಿ |‌ ಜೋಡೆತ್ತು ಕೃಷಿಕರ ಪ್ರತಿಭಟನೆ; ಅಹವಾಲು ಆಲಿಸಿದ ಶಾಸಕ ಯಶವಂತರಾಯಗೌಡ ಪಾಟೀಲ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಜೋಡೆತ್ತಿನ ಕೃಷಿಕರ ಬೇಡಿಕೆಗಳನ್ನು...

SIR | ಯುವಜನರ ಮೇಲಿನ ದಮನಕಾರಿ ಕ್ರಮಗಳ ಕುರಿತು ಅಮೆರಿಕದ 6 ಡೆಮಾಕ್ರಟಿಕ್ ಸಂಸದರ ಕಳವಳ; ವಿದೇಶಾಂಗ ಕಾರ್ಯದರ್ಶಿಗೆ ಪತ್ರ

ದೆಹಲಿ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳ ವೇಳೆ ಅತಿಯಾದ...