ಲೋಕಸಭಾ ಚುನಾವಣೆಗೆ ಈಗಾಗಲೇ ಎಲ್ಲ ರಾಜ್ಯಗಳಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಲಿದೆ. ಈಗಾಗಲೇ ಪಕ್ಷಗಳು ಮತದಾರರನ್ನು ಓಲೈಸಲು ಏನೆಲ್ಲ ಮಾಡಬಹುದು ಎಂಬ ಯೋಚನೆಯಲ್ಲಿದೆ. ಕುಕ್ಕರ್, ಅಕ್ಕಿ, ಬೇಳೆ ಕಾಳು, ಮೊಬೈಲ್, ಹಣ, ಮದ್ಯ ಸೇರಿದಂತೆ ಹಲವು ರೀತಿಯ ಉಡುಗೊರೆಗಳು ನೀಡುತ್ತಿರುವುದು ಸಾಮಾನ್ಯ ಎಂಬಂತಿದೆ.
ಈ ನಡುವೆ ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ನಡೆಯುತ್ತಿರುವ ಹೊತ್ತಲ್ಲೇ ಆಂಧ್ರಪ್ರದೇಶದಲ್ಲಿ ತಮ್ಮ ಪಕ್ಷಗಳ ಪ್ರಚಾರಕ್ಕೆ ಕಾಂಡೋಮ್ ಮೊರೆ ಹೋಗಿರುವ ವಿಚಿತ್ರ ಬೆಳವಣಿಗೆ ನಡೆದಿದೆ. ಕಾಂಡೋಮ್ ಚುನಾವಣಾ ಪ್ರಚಾರದ ಸಾಧನವಾಗಿ ಮಾರ್ಪಟ್ಟಿವೆ.
Andhra Pradesh: Condom packet videos with Political symbols go viral ahead of 2024 Elections. pic.twitter.com/b1tiHlszOK
— IANS (@ians_india) February 22, 2024
ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಪಕ್ಷಗಳು ಈ ಬಾರಿಯ ಲೋಕಸಭಾ ಚುನಾವಣೆಗೆ ತಮ್ಮ ಪಕ್ಷದ ಚಿಹ್ನೆ, ಹೆಸರು ಇರುವ ಕಾಂಡೋಮ್ ಪ್ಯಾಕೆಟ್‌ಗಳನ್ನು ಮತದಾರರಿಗೆ ಹಂಚಿದ್ದು, ಇದರ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಟ್ರೋಲ್‌ಗೂ ಕಾರಣವಾಗಿದೆ.
ವೈಎಸ್‌ಆರ್ ಕಾಂಗ್ರೆಸ್ ಹಾಗೂ ಪ್ರಮುಖ ವಿಪಕ್ಷ ತೆಲುಗು ದೇಶಂ ಪಾರ್ಟಿ(ಟಿಡಿಪಿ)ಯ ನಾಯಕರು ತಮ್ಮ ತಮ್ಮ ಕ್ಷೇತ್ರದ ಜನರಿಗೆ ಉಚಿತವಾಗಿ ಕಾಂಡೋಮ್ ಪ್ಯಾಕೆಟ್‌ಗಳನ್ನು ಹಂಚಿದ್ದಾರೆ. ಈ ಕಾಂಡೋಮ್ ಪ್ಯಾಕ್‌ಗಳಲ್ಲಿ ವೈಎಸ್‌ಆರ್ ಕಾಂಗ್ರೆಸ್ ಹಾಗೂ ಪ್ರಮುಖ ವಿಪಕ್ಷ ತೆಲುಗು ದೇಶಂ ಪಾರ್ಟಿಯ ಹೆಸರು ಚಿಹ್ನೆಗಳನ್ನು ಬಳಸಲಾಗಿದೆ.
సిద్ధం..సిద్ధం అంటూ కేకలు పెట్టేది ఇందుకా ? ఇలాంటి నీచపు ప్రచారాలు చేసే బదులు శవాల మీద చిల్లర ఏరుకోవచ్చు కదా @YSRCParty ?#YCPAntham #WhyAPHatesJagan #2024JaganNoMore #AndhraPradesh pic.twitter.com/RBWftNefxo
— Telugu Desam Party (@JaiTDP) February 21, 2024
ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮತದಾರರಿಗೆ ಪಕ್ಷದ ಚಿಹ್ನೆಯ ಕಾಂಡೋಮ್ ಹಂಚುತ್ತಿದೆ ಎಂದು ಆರೋಪಿಸಿ ಕೆಲ ವಿಡಿಯೋಗಳನ್ನು ಹಂಚಿಕೊಂಡಿದೆ. ಇತ್ತ ಟಿಡಿಪಿ ನಾಯಕರು ವೈಎಸ್‌ಆರ್ ಕಾಂಗ್ರೆಸ್ ಚಿಹ್ನೆ, ಹೆಸರು ಇರುವ ಕಾಂಡೋಮ್ ಪ್ಯಾಕ್‌ಗಳ ವಿಡಿಯೋವನ್ನು ಹಂಚಿಕೊಂಡು ವೈಎಸ್ಆರ್ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದೆ.
ವೈಎಸ್‌ಆರ್‌ಸಿಪಿ ತನ್ನ ಎಕ್ಸ್ ಖಾತೆಯಲ್ಲಿ ಟಿಡಿಪಿ ಪಕ್ಷವು ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತದೆ ಎಂದು ಇದರಿಂದ ಗೊತ್ತಾಗುತ್ತದೆ ಎಂಬುದಾಗಿ ವಾಗ್ದಾಳಿ ನಡೆಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ವೈಎಸ್‌ಆರ್‌ಸಿಪಿ ಲೋಗೋದೊಂದಿಗೆ ಟಿಡಿಪಿ ಇದೇ ರೀತಿಯ ಕಾಂಡೋಮ್ ಪ್ಯಾಕ್ ಅನ್ನು ಪೋಸ್ಟ್ ಮಾಡಿದೆ.
YSRCP and TDP branded condoms turn on election heat in #AndhraPradesh.
Videos go viral wherein ‘Condom’ packs, printed with party symbols of ruling #YSRCP and opposition #TDP, are seen, allegedly being distributed. #AndhraPradeshElections2024 #LokSabhaElection2024 #Condom pic.twitter.com/PRDzoiDu17
— Surya Reddy (@jsuryareddy) February 22, 2024
ಕಾಂಡೋಮ್‌ಗಳನ್ನು ಸಾರ್ವಜನಿಕರಿಗೆ ಹಂಚಲಾಗುತ್ತಿರುವ ಬಗ್ಗೆ ಟಿಡಿಪಿ ಕಾರ್ಯಕರ್ತ ಎಂದು ಹೇಳಲಾದವನನ್ನು ಪ್ರಶ್ನಿಸಿದ್ದು, “ಹೆಚ್ಚು ಮಕ್ಕಳಿದ್ದರೆ, ಹೆಚ್ಚಿನ ಹಣವನ್ನು ವಿತರಿಸಬೇಕು. ಅದಕ್ಕಾಗಿಯೇ ಈ ಕಾಂಡೋಮ್‌ಗಳನ್ನು ವಿತರಿಸಲಾಗುತ್ತಿದೆ” ಎಂದು ಉತ್ತರಿಸಿರುವ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
