“ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಆಗಲು ಇಂಟಲಿಜೆನ್ಸ್ ಫೇಲ್ ಆಗಿದ್ದೆ ಕಾರಣ ಎಂದು ಸಚಿವ ರಾಮಲಿಂಗ ರೆಡ್ಡಿ ಅವರು ಹೇಳಿದರು.
ಬೆಳಗಾವಿ ಪಟ್ಟಣದಲ್ಲಿ ಮಾಧ್ಯಮ ಮಿತ್ರರ ಜೊತೆ ಮಾತನಾಡಿದ ಅವರು, “ಆರ್‌ಸಿಬಿ ಕಪ್ ಗೆದ್ರು ಅಂತ ವಿಧಾನಸೌಧ ಮುಂದೆ ಸನ್ಮಾನ ಮಾಡಿದ್ದಾರೆ. ಅದೇ ದಿನ ಸ್ಟೇಡಿಯಂ ನಲ್ಲಿ ಸನ್ಮಾನ ಮಾಡುವುದು ಅವಶ್ಯಕತೆ ಇರಲಿಲ್ಲ. ಅವರು ಸ್ಟೇಡಿಯಂನಲ್ಲಿ ಮಾಡುವುದಕ್ಕೆ ಅನುಮತಿ ಕೂಡ ಪಡೆದಿರಲಿಲ್ಲ” ಎಂದರು.
“ಆರ್‌ಸಿಬಿ ಫ್ರಾಂಚೈಸಿ ತಗೊಂಡವರು ಕಾರ್ಯಕ್ರಮ ಮಾಡಿದ್ದಾರೆ. ಇದೇ ಕಾರಣಕ್ಕೆ ನಿನ್ನೆ ಕ್ಯಾಬಿನೆಟ್ ನಲ್ಲಿ ಕ್ರಮಕ್ಕೆ ಒತ್ತಾಯಿಸಲಾಯಿತು. ಅನುಮತಿ ಇಲ್ಲದೇ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿದ್ದಕ್ಕೆ ಪೊಲೀಸರ ಮೇಲೆ ಕ್ರಮ ಕೈಗೊಂಡಿದೆ. ಸ್ಟೇಡಿಯಂ ನಲ್ಲಿ ಸನ್ಮಾನ ಮಾಡಲು ಅನುಮತಿ ಇತ್ತಾ? ಪರ್ಮಿಷನ್ ಯಾರು ಕೊಡಬೇಕಿತ್ತು? ಇಂಟಲಿಜೆನ್ಸಿ ಏನು ಮಾಡುತ್ತಿತ್ತು” ಎಂದು ಪ್ರಶ್ನಿಸಿದ್ದಾರೆ.
