ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಐದು ವರ್ಷದ ಬಾಲಕನಿಗೆ ಗಂಗಾ ಸ್ನಾನ ಮಾಡಿಸಿದರೆ ಅತ ಗುಣಮುಖನಾಗುತ್ತಾನೆ ಎಂದು ಮೌಢ್ಯದ ಹಿಂದೆ ಬಿದ್ದ ಪೋಷಕರು, ನೀರಿಗಿಳಿಸಿ ಸಾವಿಗೆ ಕಾರಣರಾದ ಘಟನೆ ಹೆತ್ತವರು ಉತ್ತರಾಖಂಡದಲ್ಲಿ ನಡೆದಿದೆ.
ದಿಲ್ಲಿ ಮೂಲದ ಕುಟುಂಬವೊಂದು ಏಳರ ಹರೆಯದ ಬಾಲಕನನ್ನು ಥರಗಟ್ಟುವ ಚಳಿಯಲ್ಲಿಯೇ ಗಂಗಾ ನದಿಯಲ್ಲಿ ಸ್ನಾನ ಮಾಡಿಸಿದ್ದರಿಂದ ಹೆತ್ತವರೇ ಆತನ ಸಾವಿಗೆ ಕಾರಣರಾದ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.
ಕುಟುಂಬದ ಸದಸ್ಯರು ಬುಧವಾರ ಬೆಳಗ್ಗೆ 9 ಗಂಟೆಗೆ ಹರಿದ್ವಾರಕ್ಕೆ ಬಂದಿತ್ತು. ಕ್ಯಾಬ್ ಚಾಲಕ ನೀಡಿರುವ ಮಾಹಿತಿಯ ಪ್ರಕಾರ, ಬಾಲಕ ಮತ್ತು ಆತನ ಹೆತ್ತವರೊಂದಿಗೆ ಸಂಬಂಧಿಕಳೆಂದು ತಿಳಿಯಲಾದ ಮಹಿಳೆಯೂ ಕೂಡ ಓರ್ವರಿದ್ದರು. ಬಾಲಕ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ. ದಿಲ್ಲಿಯ ವೈದ್ಯರು ಆತ ಬದುಕುಳಿಯುವ ಸಾಧ್ಯತೆಯಿಲ್ಲ ಎಂದಿದ್ದರು ಎಂದು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
Blinded by Superstition!
In hope for a miracle, 7yr old Ravi suffering from blood cancer, was made to take a dip in river Ganga for about 5 mins by his aunt Sudha. Pilgrims around noticed & objected to the rituals, they forced the child out of water, but was too late. Police… pic.twitter.com/p1YfMA52Qu— Nabila Jamal (@nabilajamal_) January 25, 2024
ಬಾಲಕನ ಹೆತ್ತವರು ಏನೋ ಪ್ರಾರ್ಥನೆ ಮಾಡುತ್ತಾ ಬಾಲಕನನ್ನು ನೀರಿನಲ್ಲಿ ಮುಳುಗಿಸುತ್ತಿರುವುದನ್ನು ಹತ್ತಿರದಲ್ಲಿರುವವರು ನೋಡಿದ್ದರು. ಬಾಲಕ ತುಂಬಾ ಹೊತ್ತು ನೀರಿನಲ್ಲಿರುವ ಕುರಿತು ಪಕ್ಕದಲ್ಲಿದ್ದವರು ಹೇಳಿದರೂ ಹೆತ್ತವರು ಕೇಳಿಸಿಕೊಂಡಿರಲಿಲ್ಲ. ನಂತರ ಸ್ಥಳೀಯರು ಬಲವಂತದಿಂದ ಬಾಲಕನನ್ನು ನೀರಿನಿಂದ ಹೊರತೆಗೆದಿದ್ದರು. ಹೆತ್ತವರ ಜೊತೆಗಿದ್ದ ಮಹಿಳೆ ಈ ಸಂದರ್ಭ ರಾದ್ಧಾಂತವೆಬ್ಬಿಸಿದ್ದಲ್ಲದೆ ಬಾಲಕನನ್ನು ನೀರಿನಿಂದ ಹೊರತಂದವರ ಮೇಲೆ ಹಲ್ಲೆಗೂ ಯತ್ನಿಸಿದ್ದಳು. ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದಾರೆ.
ಮಹಿಳೆಯು ಮಗುವನ್ನು ನೀರಿನಲ್ಲಿ ಮುಳುಗಿಸುತ್ತಿರುವ ದೃಶ್ಯವು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ಬೆಳವಣಿಗೆಯ ಬಳಿಕ ಮಗು ಖಂಡಿತಾ ಜೀವಂತವಾಗಿ ಹೊರಬರುತ್ತಾನೆಂದು ಮೃತನ ಹೆತ್ತವರ ಜೊತೆಗಿದ್ದ ಮಹಿಳೆ ಹೇಳುತ್ತಿರುವುದು ಒಂದು ವೀಡಿಯೋದಲ್ಲಿ ದಾಖಲಾಗಿದೆ.
ಪೋಷಕರ ಜೊತೆಗಿದ್ದ ಮಹಿಳೆಯನ್ನು ಸುಧಾ ಎಂದು ಗುರುತಿಸಲಾಗಿದ್ದು, ಮೃತಪಟ್ಟ ಬಾಲಕ ರವಿಯ ಚಿಕ್ಕಮ್ಮ ಎಂದು ಗುರುತಿಸಲಾಗಿದೆ.
ಇದನ್ನು ಓದಿದ್ದೀರಾ? ಮಧ್ಯ ಪ್ರದೇಶ | ಅಂಬೇಡ್ಕರ್ – ಪಟೇಲ್ ಪ್ರತಿಮೆ ವಿವಾದ: ದಲಿತರು-ಪಾಟೀದಾರ್ ಸಮುದಾಯಗಳ ನಡುವೆ ಘರ್ಷಣೆ
“ಘಟನೆಯ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಂಗಾ ನದಿಯು ಬಾಲಕನನ್ನು ಗುಣಪಡಿಸುತ್ತದೆ ಎಂದು ಆತನ ಹೆತ್ತವರು ನಂಬಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೋಷಕರ ಸಹಿತ ಚಿಕ್ಕಮ್ಮನನ್ನೂ ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದೇವೆ. ಬಾಲಕನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನೂ ಕೂಡ ಸಂಪರ್ಕ ನಡೆಸಲಾಗಿದ್ದು, ಮಾಹಿತಿ ಕಲೆ ಹಾಕುತ್ತಿದ್ದೇವೆ” ಎಂದು ಹರಿದ್ವಾರ ನಗರ ಪೊಲೀಸ್ ಮುಖ್ಯಸ್ಥ ಸ್ವತಂತ್ರ ಕುಮಾರ್ ತಿಳಿಸಿದ್ದಾರೆ.