ತನ್ನ 26 ವಾರದ ಗರ್ಭವನ್ನು ತೆಗೆದುಹಾಕಲು ಅನುಮತಿ ಕೋರಿ ವಿವಾಹಿತ ಮಹಿಳೆಯೊಬ್ಬರು ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
“ಅರ್ಜಿದಾರರು ಗರ್ಭ ಧರಿಸಿ 26 ವಾರಗಳು ಮತ್ತು 5 ದಿನಗಳಾಗಿವೆ. ತಾಯಿ ಮತ್ತು ಗರ್ಭದಲ್ಲಿರುವ ಭ್ರೂಣಕ್ಕೆ ಯಾವುದೇ ಅಪಾಯವಿಲ್ಲದೇ ಇರುವುದರಿಂದ ಈ ಹಂತದಲ್ಲಿ ಗರ್ಭ ತೆಗೆಯಲು ಅನುಮತಿ ನೀಡುವುದು ಗರ್ಭಾವಸ್ಥೆ ಕಾಯ್ದೆಯ ಕೃತಕ ಗರ್ಭಾಪಾತ ಸೆಕ್ಷನ್ 3 ಮತ್ತು 5 ರ ಉಲ್ಲಂಘನೆಯಾಗುತ್ತದೆ. ನಾವು ಹೃದಯ ಬಡಿತವನ್ನು ನಿಲ್ಲಿಸಲು ಸಾಧ್ಯವಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದರು.
ಗರ್ಭಧಾರಣೆಯು 24 ವಾರಗಳಿಗಿಂತ ಹೆಚ್ಚಿದ್ದರೆ, ವೈದ್ಯಕೀಯ ಗರ್ಭಪಾತವನ್ನು ಅನುಮತಿಸಲಾಗುವುದಿಲ್ಲ. ಮಹಿಳೆಯ ಗರ್ಭಾವಸ್ಥೆಯು 26 ವಾರಗಳು ಮತ್ತು ಐದು ದಿನಗಳು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಭಾರತೀಯ ಕ್ರಿಕೆಟ್ ಪ್ರಿಯರಿಗೆ ಶುಭಸುದ್ದಿ: 2028ರ ಒಲಿಂಪಿಕ್ಸ್‌ಗೆ ಟಿ20 ಕ್ರಿಕೆಟ್ ಸೇರ್ಪಡೆ
ಇದು ವೈದ್ಯಕೀಯ ಗರ್ಭಪಾತದ(ಎಂಟಿಪಿ) ಅನುಮತಿಸುವ ಮಿತಿಯೊಳಗೆ ಬರುವುದಿಲ್ಲ. ಆದ್ದರಿಂದ ಗರ್ಭಪಾತಕ್ಕೆ ಅನುಮತಿಸಲಾಗುವುದಿಲ್ಲ ಎಂದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಭ್ರೂಣದಲ್ಲಿ ಯಾವುದೇ ವೈಪರೀತ್ಯಗಳಿಲ್ಲ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಗರ್ಭಿಣಿಯಾದ ನಂತರ ಮಹಿಳೆ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾಳೆ. ಆದರೆ ಇದಕ್ಕಾಗಿ ಸೇವಿಸುತ್ತಿರುವ ಔಷಧಿ ಮಗುವಿನ ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ. ಇತರ ಪರ್ಯಾಯ ಔಷಧಗಳನ್ನು ನೀಡುವಂತೆ ಮಹಿಳೆಗೆ ಸಲಹೆ ನೀಡಲಾಗಿದೆ.
ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಬಿವಿ ನಾಗರತ್ನ ಅವರ ದ್ವಿಸದಸ್ಯ ಪೀಠವು ಈ ಹಿಂದೆ ಈ ಪ್ರಕರಣದಲ್ಲಿ ಭಿನ್ನ ತೀರ್ಪು ನೀಡಿತ್ತು. ನಂತರ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ಈ ವಿಚಾರಣೆಯನ್ನು ಕೈಗೆತ್ತಿಕೊಂಡಿತು.