ಕಾಡಾನೆ ದಾಳಿಗೆ ವಾರದಲ್ಲಿ ಎರಡು ಸಾವಿನ ಪ್ರಕರಣ ಕುರಿತು ಸೋಮವಾರ ಬಾಳೆಹೊನ್ನೂರು ಭಾಗದಲ್ಲಿ ಸಂಪೂರ್ಣ ಬಂದ್ ನಡೆಸಿ ಪ್ರತಿಭಟನೆ ನಡೆಸಲಾಗಿತ್ತು. ಈ ಪರಿಣಾಮವಾಗಿ ನೆನ್ನೆಯಿಂದ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭವಾಗಿತ್ತು. ಈಗ ಒಂದು ಪುಂಡಾನೆಯನ್ನು ಸೆರೆ ಹಿಡಿಯಲಾಗಿದೆ.

ನರಸಿಂಹರಾಜಪುರ ತಾಲೂಕಿನಲ್ಲಿ ಇಬ್ಬರು ಸಾವನಪ್ಪಿರುವ ಕುರಿತು ತಾಲೂಕಿನಾದ್ಯಂತ ಬಾಳೆಹೊನ್ನೂರು ವ್ಯಾಪ್ತಿಯ ಅರಣ್ಯ ಇಲಾಖೆ ಮುಂಭಾಗದಲ್ಲಿ ಸಾವಿರಾರು ರೈತರು, ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿ ಕಾಡಾನೆಯನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆ ಬಳಿಕ ಸರ್ಕಾರ ಹೆಚ್ಚೆತ್ತುಕೊಂಡು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಬಿಡಾರದಿಂದ ಕುಮ್ಕಿಯ ನಾಲ್ಕು ಆನೆಗಳು ಕಾಡಾನೆ ಸೆರೆಗೆ ಮುಂದಾಗಿದ್ದವು. ಸೋಮವಾರದಿಂದ ಮಧ್ಯಾಹ್ನದಿಂದಲೇ ಆನೆ ಕಾರ್ಯಾಚರಣೆ ಆರಂಭವಾಗಿತ್ತು. 24 ಗಂಟೆಯ ಒಳಗೆ ಖಂಡ್ಯಾ ಹೋಬಳಿಯ ಬಿಳುಕೊಪ್ಪದಲ್ಲಿ ಸೆರೆಯಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕಾಡಾನೆ ದಾಳಿ ನಿಯಂತ್ರಣಕ್ಕೆ ಒತ್ತಾಯಿಸಿ ಬಾಳೆಹೊನ್ನೂರು ಬಂದ್
ಒಂದು ಪುಂಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದ ಬಳಿಕ ತಪ್ಪಿಸಿಕೊಂಡು ಎರಡೇ ಬಾರಿ ಅರಿವಳಿಕೆ ಚುಚ್ಚುಮದ್ದಿಗೆ ಆನೆ ಬಿದ್ದಿದ್ದು, ಅಲ್ಲಿಂದ ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆಯುತ್ತಿದೆ. ಸಧ್ಯಕ್ಕೆ ಆ ಭಾಗದ ಜನರು ನಿಟ್ಟಿಸಿರು ಬಿಟ್ಟಿದ್ದಾರೆ.